ಗದಗ: ನಗರದ ಕೆ.ಸಿ ರಾಣಿ ರಸ್ತೆಯಲ್ಲಿರುವ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆಯೋರ್ವರ ಗಂಟಲುದ್ರವದ ಮಾದರಿಯ ವರದಿಯು ಪಾಸಿಟಿವ್ ಬಂದ ನಂತರ ಶನಿವಾರ ಹೆರಿಗೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಹತ್ತು ದಿನದಲ್ಲಿ ಇಲ್ಲಿ ಚಿಕಿತ್ಸೆ ಪಡೆದ ಇತರರನ್ನು ಪತ್ತೆ ಹಚ್ಚುವ (ಟ್ರೇಸ್ ಮಾಡುವ) ಕೆಲಸದಲ್ಲಿ ಆರೋಗ್ಯ ಇಲಾಖೆ ಕಾರ್ಯ ನಿರತವಾಗಿದೆ.

ಹರ್ತಿ ಗ್ರಾಮದ ಗರ್ಭಿಣಿಗೆ ಪಾಸಿಟಿವ್ (ಪಿ-18287) ಕಂಡುಬಂದ ನಂತರ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಇಲ್ಲಿಯ ಒಪಿಡಿ ಮತ್ತು ಇತರ ವಿಭಾಗಗಳ ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಪಪಂ ಅಧಿಕಾರಿಗಳ ನಿರ್ಲಕ್ಷ್ಯ : ಸಾರ್ವಜನಿಕರಿಗೆ ಕತ್ತಲಲ್ಲಿಯೇ ಸಂಚಾರ ಭಾಗ್ಯ..!

ಪಟ್ಟಣದಲ್ಲಿ ಮಾಗಡಿ ಹಾಗೂ ಬೆಳ್ಳಟ್ಟಿ ರಸ್ತೆಗೆ ಅಳವಡಿಸಲಾದ ಹೈಮಾಸ್ಟ್ ದೀಪಗಳು ಸಾರ್ವಜನಿಕರಿಗೆ ಬೆಳಕಾಗದೆ ಅವರ ಸಂಚಾರಕ್ಕೆ ಸಂಚಕಾರ ತರುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪಿವರ್ಸ್ ಹಾಕದೆ ಕಾಮಗಾರಿ ಪೂರ್ಣ: ಲಕ್ಷ್ಮೇಶ್ವರದಲ್ಲಿ ಅಂಬೇಡ್ಕರ್ ನಗರ ಕಾಮಗಾರಿ ಮುಗಿದು ಐದು ತಿಂಗಳಾತು

ಕಾಂಕ್ರೀಟ್ ರಸ್ತೆ ಇಲ್ಲದೇ ಸಂಚಾರಕ್ಕೆ ಸಂಚಾಕಾರ ಬಂದಿದೆ ಎಂದು ಪಟ್ಟಣದ ಜನರು ಪಟ್ಟು ಹಿಡಿದ ಪರಿಣಾಮ ಕಾಂಕ್ರೀಟ್ ರಸ್ತೆಯೇನೋ ನಿರ್ಮಾಣ ಮಾಡಿದರು. ಆದರೆ ಕಾಮಗಾರಿ ಕಾಟಾಚಾರಕ್ಕೆ ಮಾಡಿದರಾ ಎನ್ನುವ ಪ್ರಶ್ನೆ ಲಕ್ಷ್ಮೇಶ್ವರ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉದ್ಭವವಾಗಿದೆ.

ಜಾರ್ಖಂಡ್ ನಲ್ಲಿ ಜುಲೈ ಅಂತ್ಯದವರೆಗೆ ಲಾಕ್ ಡೌನ್ ಘೋಷಣೆ!

ರಾಂಚಿ : ಕೊರೊನಾ ವೈರಸ್ ನ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ನಲ್ಲಿ…

ಹಾವು ಬಿಟ್ಟು ಪತ್ನಿ ಕೊಲೆ ಮಾಡಿದ ಪತಿ!

ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಕೇರಳದಲ್ಲಿ…