ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರ ಹಿಂಬಾಲಕ ಬಸವಂತರಾಯ್ ಕುರಿ ಅವರು ತಾಂಡದ ಜನರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಶಾಸಕ ಪ್ರತಪಗೌಡ ಪಾಟೀಲ್ ಅವರು ಮಟ್ಟೂರು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಗೆ ಆಗಮಿಸಿದ್ದರು. ನಂತರ ತಾಂಡದ ರಸ್ತೆ ಕಾಮಗಾರಿ ಕುರಿತು ವೀಕ್ಷಣೆ ಮಾಡಲು ತೆರಳಿದ ವೇಳೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ನಾವು ಓಟು ಹಾಕಿ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ಆದರೆ ಇದುವರೆಗೆ ನಮಗೆ ಯಾವ ಕೆಲಸ ಕೊಟ್ಟಿಲ್ಲ ತಾಂಡದ ಕಾಮಗಾರಿ ನಮಗೆ ಕೊಡಿ ನಮ್ಮೂರ ಕೆಲಸ ನಾವು ಮಾಡಿಸಿಕೊಳ್ಳುತ್ತೇವೆ ಎಂದು ಕೇಳಿದ್ದಾರೆ.

ನಾವು 15 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇವೆ ಅದರಲ್ಲಿ ನಾನು ಮಟ್ಟೂರು ಗ್ರಾ.ಪಂ ಸದಸ್ಯ ನನ್ನ ಗಮನಕ್ಕೆ ಕೂಡ ಈ ಕಾಮಗಾರಿ ವಿಷಯ ಯಾರು ಹೇಳಿಲ್ಲ ಈ ಕೆಲಸ ನಾವೇ ಮಾಡುತ್ತೇವೆ ಅಂತ ಹೇಳಿದ್ರೆ ನಮಗೆ ಧಮ್ಕಿ ಹಾಕುತ್ತಿದ್ದಾರೆ.

ಲೋಕೇಶ ಜಾಧವ ಮಟ್ಟೂರು ತಾಂಡ ನಿವಾಸಿ

ಜನರು ಪ್ರಶ್ನಿಸಿದಾಗ ಶಾಸಕರು ಸುಮ್ಮನಿದ್ರು ಅವರ ಹಿಂಬಾಲಕ ಬಸವಂತರಾಯ್ ಕುರಿ ಮತ್ತು ತಾಪಂ. ಸದಸ್ಯ ಮಲ್ಲೇಶಗೌಡ ಪಾಟೀಲ್ ಮಧ್ಯ ಪ್ರವೇಶಿಸಿ ನಮಗೆ ಏನು ಅನ್ಸುತ್ತೆ ಆ ರೀತಿ ಮಾಡುತ್ತೇವೆ ಅದನ್ನು ಕೆಳೋಕೆ ನೀವು ಯಾರು ಅಂತ ತಾಂಡದ ಜನರಿಗೆ ಆವಾಜ್ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಸಕರ ಹಿಂಬಾಲಕರ ಮಾತಿನಿಂದ ಸಿಟ್ಟಿಗೆದ್ದ ಸ್ಥಳೀಯರು ಅಕ್ರೋಶಗೊಂಡು ಕೆಲ ಕಾಲ ವಾಗ್ವದ ನಡೆಸಿದರು. ಮಗದೊಮ್ಮೆ ಕುರಿ ಅವರು ಮಧ್ಯೆ ಪ್ರವೇಶಿಸಿ ಮುದಗಲ್ ಕ್ರಾಸ್ ನಿಂದ ದ್ಯಾಮಣ್ಣನ ಗೊಲ್ಲಾರಹಟ್ಟಿ ತನಕ 1.74 ಕೋಟಿ ಕಾಮಗಾರಿ ಇದ್ದು ಈ ಕಾಮಗಾರಿ ನಾನೇ ಮಾಡುತ್ತೇನೆ. ನೀವು ಕೆಲಸ ಮಾಡುವಷ್ಟು ದೊಡ್ಡವರು ಏನು ಅಲ್ಲ. ನಾವು ಈ ಕಾಮಗಾರಿ ಹಾಕಿಸಿಕೊಂಡು ಬಂದಿದ್ದೇವೆ ನಾವೇ ಮಾಡುತ್ತೇವೆ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ ಎಂದು ತಾಂಡದ ನಿವಾಸಿಗಳಾದ ಶೇಕರ್, ರಮೇಶ್, ರಾಮಪ್ಪ ಕಾರವಾರ್, ಕರಿಯಪ್ಪ, ಶಂಕ್ರಪ್ಪ, ಚಂದ್ರಶೇಖರ್, ನಿರ್ಮಲಪ್ಪ ಸೇರಿದಂತೆ ಇತರರು ಆರೋಪಿಸಿದರು.

Leave a Reply

Your email address will not be published. Required fields are marked *

You May Also Like

ಶಿಕ್ಷಣ ಸಚಿವರ ಫೇಸ್ ಬುಕ್ ಲೈವ್: ಎಸ್.ಎಸ್.ಎಲ್.ಸಿ ಪರೀಕ್ಷೆ ಗೊಂದಲ ನಿವಾರಣೆ

ಲಾಕ್ ಡೌನ್ ಹಿನ್ನೆಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ಬಗ್ಗೆ ಹತ್ತು ಹಲವು ಚರ್ಚೆಗಳು ನಡೆದಿದ್ದವು. ಇದಕ್ಕೆ ಸ್ವತ: ಶಿಕ್ಷಣ ಸಚಿವರೇ ಫೇಸ್ ಬುಕ್ ಲೈವ್ ಬರುವ ಮೂಲಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಇದ್ದ ಗೊಂದಲ ನಿವಾರಿಸಿದ್ದಾರೆ.

ರಾಯಚೂರು ಜಿಲ್ಲಾ ನ್ಯಾಯಾದೀಶನ ಅಮಾನತ್ತಿಗೆ ಒತ್ತಾಯ

ವರದಿ: ವಿಠಲ ಕೆಳೂತ್ ಮಸ್ಕಿ: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.‌ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ…

ಕೇಂದ್ರ ಸರ್ಕಾರದ ನಡೆ ಸ್ವಾಗತಿಸಿದ ಪಿ.ಚಿದಂಬರಂ!

ಕೇಂದ್ರ ಸರ್ಕಾರ ತೆಗೆದುಕೊಂಡಿರು ನಿರ್ಧಾರವನ್ನು ಮಾಜಿ ವಿತ್ತ ಸಚಿವ ಚಿದಂಬರಂ ಬೆಂಬಲಿಸಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪ್ರತಿ ನಡೆಯನ್ನು ಟೀಕಿಸುತ್ತಿದ್ದ ಚಿದಂಬರಂ ಮೊದಲ ಬಾರಿಗೆ ಬೆಂಬಲಿಸಿದ್ದಾರೆ.

ಬಸ್ ಬ್ರೇಕ್ ಫೇಲ್ : ಸಮಯ ಪ್ರಜ್ಞೆ ಮೆರೆದ ಚಾಲಕ

ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಹತ್ತಿರ ಘಟನೆ ನಡೆದಿದೆ.