ಗದಗ: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಂಡು ರಾಜಕಾಲುವೆಗಳ ಸೇರಿದಂತೆ ಒಟ್ಟಾರೆ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸಿ ವರದಿ ನೀಡಲು ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರತಿ ವಾರ್ಡನಲ್ಲಿ ಸಮಿತಿ ರಚಿಸಿ ಅಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸಿ, ಅತಿ ಮುಖ್ಯವಾದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಕೊವಿಡ -19 ಸಾಂಕ್ರಾಮಿಕ ಸೋಂಕು ನಿಯಂತ್ರಣ ಕುರಿತು ವಾರ್ಡ ಸಮಿತಿಯಲ್ಲಿ ಜಾಗೃತಿಯನ್ನು ಮೂಡಿಸಿ, ಅದರ ವ್ಯಾಪ್ತಿಯಲ್ಲಿ ಗುರುತಿಸಲಾದ ಸೋಂಕಿತರಿಗೆ ಮನೆ ದಿಗ್ಭಂಧನ ದಲ್ಲಿರುವವರಿಗೆ ತಿಳುವಳಿಕೆ ನೀಡಬೇಕು. ದಿಗ್ಭಂಧನದ ಮನೆಗಳಿಗೆ ನೇಮಿಸಲಾದ ಸಿಬ್ಬಂದಿಗಳು 14 ದಿನಗಳ ಕಾಲ ನಿಗದಿತವಾಗಿ ನಿಯಮಿತವಾಗಿ ಭೇಟಿ ನೀಡಿ ಪೋಟೋಗಳನ್ನು ಅಪಲೋಡ್ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಈ ಕುರಿತು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ಸಾರ್ವಜನಿಕರು ಸೊಂಕಿತರ ಚಲನ ವಲನಗಳ ಮೇಲೆ ನಿಗಾ ಇಟ್ಟು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಹಾಗೂ ವೈದ್ಯಕೀಯ ಸಹಾಯ ಮತ್ತು ಸಹಕಾರ ಪಡೆಯುವ ಬಗ್ಗೆ ವಾರ್ಡ ಸಮಿತಿಯಲ್ಲಿ ತಿಳುವಳಿಕೆ ನೀಡಿ ಸಾರ್ವಜನಿಕ ಸಹಭಾಗಿತ್ವವನ್ನು ಪಡೆಯಬೇಕು. ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ, ಆರೋಗ್ಯ, ನೀರು ಸರಬರಾಜು ಸಿಬ್ಬಂದಿಗಳು ಹಾಗೂ ಇತರೇ ಸಿಬ್ಬಂದಿಗಳಿಗೆ ಕೋವಿಡ-19 ಸಾಂಕ್ರಾಮಿಕ ರೋಗ ಹರಡದಂತೆ ಸಿಬ್ಬಂದಿಗಳಿಗೆ ಸುರಕ್ಷಾ ಕವಚ, ಮಾಸ್ಕ, ಸೈನಿಟೀಜರಗಳನ್ನು ನಿಯಮಿತವಾಗಿ ನೀಡಿ ಅವರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸಕ್ಕೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕ್ರಿಯಾ ಯೋಜನೆ ತಯಾರಿಸುವ ಪೂರ್ವದಲ್ಲಿ ಸಾರ್ವಜನಿಕರ ಅಭಿಪ್ರಾಯ ಮೂಲಕ ಸಂಗ್ರಹಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಬೇಕು. ಸಶ್ಮಾನ ಅಭಿವೃದ್ಧಿಗೆ, ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣ, ಸಶ್ಮಾನಕ್ಕೆ ರಸ್ತೆ, ಕಂಪೌಂಡಗೋಡೆ, ಶೌಚಾಲಯ, ಸ್ನಾನಗೃಹ, ನೀರಿನ ವ್ಯವಸ್ಥೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ಥಳೀಯ ಸಂಸ್ಥೆಗಳು ದಿನನಿತ್ಯ ಸಾರ್ವಜನಿಕರಿಗೆ ಒದಗಿಸುವ ಕುಡಿಯುವ ನೀರು, ಕಸ ಸಂಗ್ರಹಣೆ, ಬೀದಿ ದೀಪ ಇತ್ಯಾದಿ ದಿನನಿತ್ಯ ಅವಶ್ಯಕತೆ ಪೂರೈಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ಈಗಾಗಲೇ ಮನೆ ಮನೆಗೆ ಕಸ ಸಂಗ್ರಹಣೆ ನಿಮಿತ್ಯ ಒದಗಿಸಿದ ವಾಹನಗಳ ಮೂಲಕ ಹಸಿ-ಕಸ ಒಣ ಕಸವನ್ನು ವಿಂಗಡಿಸಿ ಪಡೆದು ಸಂಗ್ರಹಿಸಲಾದ ತ್ಯಾಜ್ಯವನ್ನು ತ್ಯಾಜ್ಯವಿಲೇವಾರಿ ಘಟಕಕ್ಕೆ ಪ್ರತಿ ನಿತ್ಯ ಸಾಗಾಣೆ ಮಾಡಿ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್.ಎನ್ ಹಾಗೂ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.

You May Also Like

ಗಡಿಯಲ್ಲಿ ಕ್ಯಾತೆ ಆರಂಭಿಸಿದ ಚೀನಾ!

ನವದೆಹಲಿ: ಉತ್ತರ ಸಿಕ್ಕಿಂ ನಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಕ್ಯಾತಿ ತೆಗೆದಿದ್ದಾರೆ. ಪರಿಣಾಮವಾಗಿ ಭಾರತೀಯ…

ತ್ವರಿತ ಕೋವಿಡ್ ಪರೀಕ್ಷೆಗೆ ಸ್ವಾಬ್ ಕಲೆಕ್ಷನ್ ಬೂತ್‌ಗಳಿಗೆ ಚಾಲನೆ

ತ್ವರಿತವಾಗಿ ಮತ್ತು ಹೆಚ್ಚಿನ ಸಂಖ್ಯೆಯ ಕೋವಿಡ್ ಮಾದರಿ ಪರೀಕ್ಷೆ ನಡೆಸಲು ಅನುವಾಗುವಂತೆ ವಿಶಿಷ್ಟ ವಿನ್ಯಾಸದ ಸ್ವಾಬ್ ಕಲೆಕ್ಟಿಂಗ್ ಬೂತ್ ಗೆ ಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.

ಸಚಿವ ಸುಧಾಕರ್ ಗನ್ ಮ್ಯಾನ್, ಡ್ರೈವರ್ ನಡುವೆ ಮಾರಾಮಾರಿ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ.

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್! ಬಾಗಲಕೋಟೆ : ಬಾದಾಮಿ ಮೂಲದ…