ಗದಗ: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಂಡು ರಾಜಕಾಲುವೆಗಳ ಸೇರಿದಂತೆ ಒಟ್ಟಾರೆ ಒತ್ತುವರಿಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸಿ ವರದಿ ನೀಡಲು ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರತಿ ವಾರ್ಡನಲ್ಲಿ ಸಮಿತಿ ರಚಿಸಿ ಅಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸಿ, ಅತಿ ಮುಖ್ಯವಾದ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಕೊವಿಡ -19 ಸಾಂಕ್ರಾಮಿಕ ಸೋಂಕು ನಿಯಂತ್ರಣ ಕುರಿತು ವಾರ್ಡ ಸಮಿತಿಯಲ್ಲಿ ಜಾಗೃತಿಯನ್ನು ಮೂಡಿಸಿ, ಅದರ ವ್ಯಾಪ್ತಿಯಲ್ಲಿ ಗುರುತಿಸಲಾದ ಸೋಂಕಿತರಿಗೆ ಮನೆ ದಿಗ್ಭಂಧನ ದಲ್ಲಿರುವವರಿಗೆ ತಿಳುವಳಿಕೆ ನೀಡಬೇಕು. ದಿಗ್ಭಂಧನದ ಮನೆಗಳಿಗೆ ನೇಮಿಸಲಾದ ಸಿಬ್ಬಂದಿಗಳು 14 ದಿನಗಳ ಕಾಲ ನಿಗದಿತವಾಗಿ ನಿಯಮಿತವಾಗಿ ಭೇಟಿ ನೀಡಿ ಪೋಟೋಗಳನ್ನು ಅಪಲೋಡ್ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಈ ಕುರಿತು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ಸಾರ್ವಜನಿಕರು ಸೊಂಕಿತರ ಚಲನ ವಲನಗಳ ಮೇಲೆ ನಿಗಾ ಇಟ್ಟು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಹಾಗೂ ವೈದ್ಯಕೀಯ ಸಹಾಯ ಮತ್ತು ಸಹಕಾರ ಪಡೆಯುವ ಬಗ್ಗೆ ವಾರ್ಡ ಸಮಿತಿಯಲ್ಲಿ ತಿಳುವಳಿಕೆ ನೀಡಿ ಸಾರ್ವಜನಿಕ ಸಹಭಾಗಿತ್ವವನ್ನು ಪಡೆಯಬೇಕು. ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ, ಆರೋಗ್ಯ, ನೀರು ಸರಬರಾಜು ಸಿಬ್ಬಂದಿಗಳು ಹಾಗೂ ಇತರೇ ಸಿಬ್ಬಂದಿಗಳಿಗೆ ಕೋವಿಡ-19 ಸಾಂಕ್ರಾಮಿಕ ರೋಗ ಹರಡದಂತೆ ಸಿಬ್ಬಂದಿಗಳಿಗೆ ಸುರಕ್ಷಾ ಕವಚ, ಮಾಸ್ಕ, ಸೈನಿಟೀಜರಗಳನ್ನು ನಿಯಮಿತವಾಗಿ ನೀಡಿ ಅವರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸಕ್ಕೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಕ್ರಮವಹಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕ್ರಿಯಾ ಯೋಜನೆ ತಯಾರಿಸುವ ಪೂರ್ವದಲ್ಲಿ ಸಾರ್ವಜನಿಕರ ಅಭಿಪ್ರಾಯ ಮೂಲಕ ಸಂಗ್ರಹಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಬೇಕು. ಸಶ್ಮಾನ ಅಭಿವೃದ್ಧಿಗೆ, ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣ, ಸಶ್ಮಾನಕ್ಕೆ ರಸ್ತೆ, ಕಂಪೌಂಡಗೋಡೆ, ಶೌಚಾಲಯ, ಸ್ನಾನಗೃಹ, ನೀರಿನ ವ್ಯವಸ್ಥೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ಥಳೀಯ ಸಂಸ್ಥೆಗಳು ದಿನನಿತ್ಯ ಸಾರ್ವಜನಿಕರಿಗೆ ಒದಗಿಸುವ ಕುಡಿಯುವ ನೀರು, ಕಸ ಸಂಗ್ರಹಣೆ, ಬೀದಿ ದೀಪ ಇತ್ಯಾದಿ ದಿನನಿತ್ಯ ಅವಶ್ಯಕತೆ ಪೂರೈಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಿ ಈಗಾಗಲೇ ಮನೆ ಮನೆಗೆ ಕಸ ಸಂಗ್ರಹಣೆ ನಿಮಿತ್ಯ ಒದಗಿಸಿದ ವಾಹನಗಳ ಮೂಲಕ ಹಸಿ-ಕಸ ಒಣ ಕಸವನ್ನು ವಿಂಗಡಿಸಿ ಪಡೆದು ಸಂಗ್ರಹಿಸಲಾದ ತ್ಯಾಜ್ಯವನ್ನು ತ್ಯಾಜ್ಯವಿಲೇವಾರಿ ಘಟಕಕ್ಕೆ ಪ್ರತಿ ನಿತ್ಯ ಸಾಗಾಣೆ ಮಾಡಿ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್.ಎನ್ ಹಾಗೂ ಎಲ್ಲಾ ನಗರಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಯುವ ಘಟಕದ ಅಧ್ಯಕ್ಷರಾಗಿ ಅನಿಲ್ ಸಿದ್ದಮ್ಮನಹಳ್ಳಿ ನೇಮಕ

ಅನಿಲ್ ಕುಮಾರ್ ಸಿದ್ದಮ್ಮನಹಳ್ಳಿ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಪತ್ರವನ್ನು ವಿತರಿಸಲಾಯಿತು.

ರಸ್ತೆ ಗುಂಡಿಯಲ್ಲಿ ಸಿಲುಕಿದ ಬಸ್, 2 ಗಂಟೆ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ..!

ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಹಾಳಾಗಿದ್ದು ಅಪಘಾಕ್ಕೆ ಆಹ್ವಾನ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರಾಕ್ಟರ್‌ವೊಂದು ರಸ್ತೆಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ಸಿಲುಕಿ ಸ್ವಲ್ಪದರಲ್ಲೆ ಅಪಾಯದಿಂದ ಪಾರಾಗಿವೆ.

ಮತ್ತೆ ಪ್ರವಾಹ.. ಉತ್ತರ ಕರ್ನಾಟಕಕ್ಕೆ ಮತ್ತೆ ಸಂಕಷ್ಟ

ಹಳೆ ಗಾಯ ಇನ್ನೂ ಮಾಸಿಲ್ಲ. ಈಗ ಮತ್ತೆ ನಾಡಿನ ಜನರಿಗೆ ಜಲಾಘಾತ ಒಕ್ಕರಿಸಿದೆ. ಜಲಸ್ಫೋಟಕ್ಕೆ ಉತ್ತರ ಕರ್ನಾಟಕದ ಹಲವು ಗ್ರಾಮಗಳ ಸಾವಿರಾರೂ ಎಕರೆ ಬೆಳೆ ಜೊತೆಗೆ ಅವರ ಬದುಕು ಮತ್ತೆ ನೀರು ಪಾಲಾಗಿದೆ. ರಕ್ಕಸ ಪ್ರವಾಹಕ್ಕೆ ಎಲ್ಲವೂ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಜನರ ಕಥೆ ಕೇಳಿದಾಗ ಕರಳು ಕಿತ್ತು ಬರುತ್ತೆ. ಮನೆಯ ಬಾಗಿಲಿಗೆ ಮತ್ತೆ ನದಿಗಳು ಭೇಟಿ ನೀಡಿವೆ. ಬದುಕನ್ನೇ ನಲುಗಿಸಿಬಿಟ್ಟಿವೆ. ರಸ್ತೆ, ಹೊಲ ಗದ್ದೆ, ಮನೆ ಮಠಗಳು ನೀರು ಪಾಲಾಗುತ್ತಿವೆ.

ಹಂತ ಹಂತವಾಗಿ ವಿದ್ಯುತ್ ಬಿಲ್ಲ ಕಟ್ಟಲು ಅವಕಾಶ ಕಲ್ಪಿಸಿ

ಗದಗ: ಜೂನ್ ನಿಂದ ಜುಲೈ ವರೆಗೆ ವಿದ್ಯುತ್ ಬಿಲ್‌ಗಳನ್ನು 3 ತಿಂಗಳ ನಂತರ ಹಂತ ಹಂತವಾಗಿ ಪಾವತಿಸಿಕೊಳ್ಳಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬಸಯ್ಯ ನಂದಿಕೋಲಮಠ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.