ನವದೆಹಲಿ: ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್ ವ್ಯವಹಾರಗಳ ಕುರಿತು ತನಿಖೆಗೆ ಕೇಂದ್ರ ಗೃಹ ಇಲಾಖೆ ಬುಧವಾರ ತನಿಖೆಗೆ ಆದೇಶಿಸಿದೆ.

ಗೃಹ ಇಲಾಖೆಯು ಒಂದು ಅಂತರ್-ಸಚಿವರ ಸಮಿತಿ ರಚಿಸಿದ್ದು, ಇದು ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ ಈ ಮೂರು ಸಂಸ್ಥೆಗಳ ವ್ಯವಹಾರಗಳ ತನಿಖೆ ನಡೆಸಲಿದೆ. ಈ ಸಮಿತಿಗೆ ಜಾರಿ ನಿರ್ದೇಶನಾಲಯದ ಮುಖ್ಯಸ್ಥರು ಅಧ್ಯಕ್ಷರಾಗಿರುತ್ತಾರೆ.

ಆದಾಯ ತೆರಿಗೆ ಮತ್ತು ವಿದೇಶಿ ದೇಣಿಗೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಈ ಮೂರು ಸಂಸ್ಥೆಗಳು ಎದುರಿಸುತ್ತಿದ್ದು ತನಿಖೆಯ ಅಗತ್ಯವಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

1991ರಲ್ಲಿ ಸ್ಥಾಪನೆಯಾದ ರಾಜೀವ್ ಗಾಂಧಿ ಫೌಂಡೇಷನ್ ಮತ್ತು 2002ರಲ್ಲಿ ಸ್ಥಾಪನೆಯಾದ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇವೆರಡಕ್ಕೂ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ.

ಮನಮೋಹನಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಪ್ರಧಾನಿ ರಾಷ್ಟ್ರೀಯ ವಿಪತ್ತು ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಷನ್ಗೆ ಅನುದಾನ ನೀಡಲಾಗಿತ್ತು ಎಂದು ಕಳೆದ ತಿಂಗಳು ಬಿಜೆಪಿ ಆರೋಪಿಸಿತ್ತು.

ಮೊದಲಿನಿಂದಲೂ ಬಿಜೆಪಿ ಪಕ್ಷ ಈ ಮೂರೂ ಟ್ರಸ್ಟ್ ಮೇಲೆ ಆರೋಪಿಸುತ್ತ ಬಂದಿದ್ದರೂ ಈಗ ಏಕಾಏಕಿ ತನಿಖೆಗೆ ಆದೇಶ ಮಾಡಿರುವುದು, ಇದು ಜನರ ಗಮನ ಬೇರೆಡೆ ಸೆಳೆಯುವ ತಂತ್ರವೇ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ತನಿಖೆಗೆ ಉದ್ದೇಶಿಸಿದ ಸಂಗತಿಗಳು ಮನಮೋಹನಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಸಂಭವಿಸಿವೆ.

Leave a Reply

Your email address will not be published.

You May Also Like

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಚಲಚಿತ್ರರಂಗದ ಹಿರಿಯ ನಟ ಆರೋಗ್ಯ ಸ್ಥಿತಿ ಗಂಭೀರ. ನಟ ಶಿವರಾಂ ಅವರ  ಆರೋಗ್ಯದಲ್ಲಿ ಏರುಪೇರಾದ…

ಗದಗ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ನಾಗಾಲೋಟ

ಗದಗ:ಜಿಲ್ಲೆಯಲ್ಲಿ ಕೂರೂನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎರಡೇ ದಿನದಲ್ಲಿ ಬರೋಬ್ಬರಿ 37 ಜನರಿಗೆ…

ಪೊಲೀಸರಿಗೆ ಸಿಕ್ಕ ನಟ ಸುಶಾಂತ್ ಸಿಂಗ್ ಒಪ್ಪಂದಗಳ ಪ್ರತಿಗಳು!

ನವದೆಹಲಿ: ನಟ ಸುಶಾಂತ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರತಿಗಳನ್ನು ಯಶ್ ರಾಜ್ ಫಿಲ್ಮ್ಸ್ (ವೈಆರ್…

ಮರ್ಯಾದೆಗೇಡು ಹತ್ಯೆ: ಮರ್ಡರ್ ಸಿನಿಮಾ ಪೋಸ್ಟರ್ ರಿಲೀಜ್ ಮಾಡಿದ RGV

ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ.…