ನವದೆಹಲಿ: ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದ ನಡುವಿನ 24 ಗಂಟೆಗಳಲ್ಲಿ 24,448 ಕೇಸುಗಳು ದಾಳಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,01, 240ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಾಯಂಕಾಲ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಇದರಲ್ಲಿ 19,693 ಸಾವುಗಳಾಗಿದ್ದು,,4.24 ಲಕ್ಷ ಜನ ಗುಣಮುರಾಗಿದ್ದಾರೆ. 2.5 ಲಕ್ಷ ಸಕ್ರಿಯ ಕೇಸುಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 2ರಂದು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿತ್ತು. ಕೇವಲ ನಾಲ್ಕೇ ದಿನದಲ್ಲಿ (ಜುಲೈ 3-6) ಹೊಸದಾಗಿ 1 ಲಕ್ಷ ಕೇಸುಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ದೇಶದಲ್ಲಿ ಮೊದಲ ಪಾಸಿಟಿವ್ ಕೇಸ್ ದಾಖಲಾಗಿದ್ದು ಜನವರಿ 30ರಂದು. ನಂತರ 1 ಲಕ್ಷ ಮುಟ್ಟಲು 110 ದಿನ ಹಿಡಿದಿತ್ತು. ಜೂನ್ 3ರಂದು ಪಾಸಿಟಿವ್ ಸಂಖ್ಯೆ 2 ಲಕ್ಷ ದಾಟಿತ್ತು. ನಂತರ ಹತ್ತೇ ದಿನದಲ್ಲಿ (ಜೂನ್ 13) ಅದು 3 ಲಕ್ಷ ದಾಟಿತ್ತು. ಜೂನ್ 21ರಂದು 4 ಲಕ್ಷ ತಲುಪಿತ್ತು. ನಂತರದ 11 ದಿನದಲ್ಲಿ ಹೊಸದಾಗಿ 2 ಲಕ್ಷ ಕೇಸುಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಜುಲೈ 2ರಂದು 6 ಲಕ್ಷ ದಾಟಿತ್ತು. ಈಗ ನಾಲ್ಕು ದಿನದಲ್ಲಿ ಮತ್ತೆ 1 ಲಕ್ಷ ಕೇಸು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ಭಾನುವಾರವಷ್ಟೇ ಅತಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ 4ರಿಂದ 3ನೆ ಸ್ಥಾನಕ್ಕೆ ಏರಿತ್ತು. 1 ಮತ್ತು 2ನೆ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಇವೆ.

Leave a Reply

Your email address will not be published.

You May Also Like

ಗದಗ ಜಿಲ್ಲೆಯಲ್ಲಿ ಕೊರೊನಾ ಸುಪರ್-ಸ್ಪ್ರೆಡರ್ ಯಾರು? : ಸುಪರ್-ಸ್ಪ್ರೇಡರ್ ಎಂದರೆ ಏನು?

ಗದಗ: ದಕ್ಷಿಣ ಕೋರಿಯಾದಲ್ಲಿ ಒಂದು ಹಂತದಲ್ಲಿ ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಿ ದೇಶವೇ ಆತಂಕಕ್ಕೆ ಈಡಾಗಲು…

ಮರಗಳಿಗೆ ಕತ್ತರಿ: ಅರಣ್ಯಾಧಿಕಾರಿಗಳ ಅಮಾನತು

ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಲ್ಲಿ ಕಾಡುಗಳ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅರಣ್ಯ ಇಲಾಖೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚೆನ್ನಮ್ಮ – ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಷಯವಾಗಿ ಎರಡು ಕೋಮನಿ ನಡುವೆ ಗಲಾಟೆ!

ಗದಗ : ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರ್ತಿ ಪ್ರತಿಷ್ಠಾಪನೆ ವಿಷಯವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ತಾಲೂಕಿನ ಬಳಗಾನೂರಿನಲ್ಲಿ ನಡೆದಿದೆ.

ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ: ಸಚಿವ ಪ್ರಹ್ಲಾದ್ ಜೋಷಿ

ಕೊವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬ್ಯುಲೇನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು. ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.