ಭಾರತ: 7 ಲಕ್ಷ ದಾಟಿದ ಪಾಸಿಟಿವ್

corona gadag update

ಗದಗನಲ್ಲಿಂದು ಪತ್ತೆಯಾದ ಕೊರೊನಾ ಸೋಂಕಿತರ ವಿವರ

ನವದೆಹಲಿ: ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದ ನಡುವಿನ 24 ಗಂಟೆಗಳಲ್ಲಿ 24,448 ಕೇಸುಗಳು ದಾಳಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,01, 240ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಾಯಂಕಾಲ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಇದರಲ್ಲಿ 19,693 ಸಾವುಗಳಾಗಿದ್ದು,,4.24 ಲಕ್ಷ ಜನ ಗುಣಮುರಾಗಿದ್ದಾರೆ. 2.5 ಲಕ್ಷ ಸಕ್ರಿಯ ಕೇಸುಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 2ರಂದು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿತ್ತು. ಕೇವಲ ನಾಲ್ಕೇ ದಿನದಲ್ಲಿ (ಜುಲೈ 3-6) ಹೊಸದಾಗಿ 1 ಲಕ್ಷ ಕೇಸುಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ದೇಶದಲ್ಲಿ ಮೊದಲ ಪಾಸಿಟಿವ್ ಕೇಸ್ ದಾಖಲಾಗಿದ್ದು ಜನವರಿ 30ರಂದು. ನಂತರ 1 ಲಕ್ಷ ಮುಟ್ಟಲು 110 ದಿನ ಹಿಡಿದಿತ್ತು. ಜೂನ್ 3ರಂದು ಪಾಸಿಟಿವ್ ಸಂಖ್ಯೆ 2 ಲಕ್ಷ ದಾಟಿತ್ತು. ನಂತರ ಹತ್ತೇ ದಿನದಲ್ಲಿ (ಜೂನ್ 13) ಅದು 3 ಲಕ್ಷ ದಾಟಿತ್ತು. ಜೂನ್ 21ರಂದು 4 ಲಕ್ಷ ತಲುಪಿತ್ತು. ನಂತರದ 11 ದಿನದಲ್ಲಿ ಹೊಸದಾಗಿ 2 ಲಕ್ಷ ಕೇಸುಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಜುಲೈ 2ರಂದು 6 ಲಕ್ಷ ದಾಟಿತ್ತು. ಈಗ ನಾಲ್ಕು ದಿನದಲ್ಲಿ ಮತ್ತೆ 1 ಲಕ್ಷ ಕೇಸು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ಭಾನುವಾರವಷ್ಟೇ ಅತಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ 4ರಿಂದ 3ನೆ ಸ್ಥಾನಕ್ಕೆ ಏರಿತ್ತು. 1 ಮತ್ತು 2ನೆ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಇವೆ.

Exit mobile version