ನವದೆಹಲಿ: ಭಾನುವಾರ ಸಾಯಂಕಾಲದಿಂದ ಸೋಮವಾರ ಸಾಯಂಕಾಲದ ನಡುವಿನ 24 ಗಂಟೆಗಳಲ್ಲಿ 24,448 ಕೇಸುಗಳು ದಾಳಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,01, 240ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಾಯಂಕಾಲ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ಇದರಲ್ಲಿ 19,693 ಸಾವುಗಳಾಗಿದ್ದು,,4.24 ಲಕ್ಷ ಜನ ಗುಣಮುರಾಗಿದ್ದಾರೆ. 2.5 ಲಕ್ಷ ಸಕ್ರಿಯ ಕೇಸುಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 2ರಂದು ಸೋಂಕಿತರ ಸಂಖ್ಯೆ 6 ಲಕ್ಷ ದಾಟಿತ್ತು. ಕೇವಲ ನಾಲ್ಕೇ ದಿನದಲ್ಲಿ (ಜುಲೈ 3-6) ಹೊಸದಾಗಿ 1 ಲಕ್ಷ ಕೇಸುಗಳು ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ದೇಶದಲ್ಲಿ ಮೊದಲ ಪಾಸಿಟಿವ್ ಕೇಸ್ ದಾಖಲಾಗಿದ್ದು ಜನವರಿ 30ರಂದು. ನಂತರ 1 ಲಕ್ಷ ಮುಟ್ಟಲು 110 ದಿನ ಹಿಡಿದಿತ್ತು. ಜೂನ್ 3ರಂದು ಪಾಸಿಟಿವ್ ಸಂಖ್ಯೆ 2 ಲಕ್ಷ ದಾಟಿತ್ತು. ನಂತರ ಹತ್ತೇ ದಿನದಲ್ಲಿ (ಜೂನ್ 13) ಅದು 3 ಲಕ್ಷ ದಾಟಿತ್ತು. ಜೂನ್ 21ರಂದು 4 ಲಕ್ಷ ತಲುಪಿತ್ತು. ನಂತರದ 11 ದಿನದಲ್ಲಿ ಹೊಸದಾಗಿ 2 ಲಕ್ಷ ಕೇಸುಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಜುಲೈ 2ರಂದು 6 ಲಕ್ಷ ದಾಟಿತ್ತು. ಈಗ ನಾಲ್ಕು ದಿನದಲ್ಲಿ ಮತ್ತೆ 1 ಲಕ್ಷ ಕೇಸು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ.

ಭಾನುವಾರವಷ್ಟೇ ಅತಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ 4ರಿಂದ 3ನೆ ಸ್ಥಾನಕ್ಕೆ ಏರಿತ್ತು. 1 ಮತ್ತು 2ನೆ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಇವೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಕೊರೊನಾ ಸುಪರ್-ಸ್ಪ್ರೆಡರ್ ಯಾರು? : ಸುಪರ್-ಸ್ಪ್ರೇಡರ್ ಎಂದರೆ ಏನು?

ಗದಗ: ದಕ್ಷಿಣ ಕೋರಿಯಾದಲ್ಲಿ ಒಂದು ಹಂತದಲ್ಲಿ ದಿಢೀರನೆ ಸೋಂಕಿತರ ಸಂಖ್ಯೆ ಹೆಚ್ಚಿ ದೇಶವೇ ಆತಂಕಕ್ಕೆ ಈಡಾಗಲು…

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.

ಮುಂಬಯಿನ ಮೀನು ಮಾರುಕಟ್ಟೆಯಿಂದ ಬಂದ ಕೊರೊನಾ!

ಮುಂಬಯಿನ ಮೀನದ ಮಾರುಕಟ್ಟೆಯಲ್ಲಿ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ಮರಳಿ ಬಂದಿದ್ದ ಜಿಲ್ಲೆಯ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪೊಲೀಸ್ ಠಾಣೆಯೇ ದೇವಸ್ಥಾನವಿದ್ದಂತೆ : ಪೂಜೆ ಸಲ್ಲಿಸಿ ಗೌರವ

ಪೊಲೀಸರೆ ದೇವರು, ಪೊಲೀಸ್ ಠಾಣೆಯೇ ದೇವಸ್ಥಾನ ಎನ್ನುವ ಕಲ್ಪನೆಯೊಂದಿದೆ ಪೊಲೀಸ್ ಠಾಣೆಗೆ ಪೂಜೆ ಸಲ್ಲಿಸಿ ಈ ಮೂಲಕ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಾಯಿತು.