ಉತ್ತರಪ್ರಭ ಸುದ್ದಿ

ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ, ಆರು ವರ್ಷದ ಮಗನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ..

ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ರಾಕ್ಷಸಿಕೃತ್ಯ ಎಸಗಿದ್ದು, ಗಾಯಾಳು ತಾಯಿ, ಮಗುವನ್ನ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಚಾಕು ಇರಿದ ಮುರಳಿ ಪೂಜಾರ್ (32) ಎಂಬಾತನನ್ನ ಮರಕ್ಕೆ ಕಟ್ಟಿಹಾಕಿದ್ದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ‌..

ಗೋವಾದಲ್ಲಿ ಕೆಲಸ ಮಾಡ್ತಿದ್ದ ಮುರುಳಿ ಅಲ್ಲಿ‌ ಪತ್ನಿಯೊಂದಿಗೆ ಕಿರಿಕ್ ಮಾಡ್ಕೊಂಡಿದ್ದ.. ಹೀಗಾಗಿ ಪತ್ನಿಯನ್ನ ಬಿಟ್ಟು ಮಗುವಿನೊಂದಿಗೆ ಡೋಣಿ ತಾಂಡಾದಲ್ಲಿನ ತವರು ಮನೆಗೆ ಸಕ್ಕುಬಾಯಿ ಬಂದಿದ್ರು..

ರಾಜಿಪಂಚಾಯ್ತಿ ಬಳಿಕ ಮುರಳಿ ಹಾಗೂ ಸಕ್ಕುಬಾಯಿ ಅವರನ್ನ ಒಂದು ಮಾಡೋದಕ್ಕೆ ಹಿರಿಯರು ಮುಂದಾಗಿದ್ರು.. ನಿನ್ನೆಯಷ್ಟೆ ಹಿರಿಯರು ಸೇರಿ ಮಾತುಕಥೆ ನಡೆಸಿದ್ರು.. ಬೆಳಗ್ಗೆ ಅಳಿಯನೊಂದಿಗೆ ಗೋವಾಕ್ಕೆ ಕಳಸೋದಕ್ಕೆ ನಿರ್ಧಾರವನ್ನೂ ಮಾಡ್ಲಾಗಿತ್ತು.. ಆದ್ರೆ ಏಕಾ ಏಕಿ ಮಧ್ಯರಾತ್ರಿ ಬಂದಿದ್ದ ಅಳಿಯ ಸಕ್ಕುಬಾಯಿ, ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ.. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದ್ದು ಪ್ರಾಣಾಪಾಯ ಇಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ..

ಚಾಕು ಇರಿದ ಮುರಳಿಯನ್ನ ಕೂಡಿಹಾಕಿದ್ದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ..

Leave a Reply

Your email address will not be published. Required fields are marked *

You May Also Like

ಸ್ಕೂಟಿ ಮತ್ತು ಬಿಆರ್ ಟಿಎಸ್ ನಡುವೆ ಡಿಕ್ಕಿ : ಸ್ಕೂಟಿ ಸವಾರನ ಸ್ಥಿತಿ ಗಂಭೀರ

ಬಿಆರ್ ಟಿಎಸ್ ಮತ್ತು ಸ್ಕೂಟಿ ನಡುವೆ ಡಿಕ್ಕಿಯಾದ ಪರಿಣಾಮ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾದ ಘಟನೆ ನಗರದ ನವನಗರ ಆರ್ ಟಿಓ ಹತ್ತಿರ ನಡೆದಿದೆ.

ಆಲಮಟ್ಟಿ ಗಾರ್ಡನ್ ದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ

ಆಲಮಟ್ಟಿ : ಇಲ್ಲಿನ ಬಹು ವೈವಿಧ್ಯಮಯ ನಾನಾ ಬಗೆಯ ಉದ್ಯಾನವನಗಳ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ…

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಮೆಣಸಿನಕಾಯಿ ಬೆಳೆ ಬೆಳೆದು ನಿಂತ ಜಮೀನಿನಲ್ಲಿ ಕುರಿ ಹಾಗೂ ದನಕರುಗಳನ್ನು ಬಿಟ್ಟು ಬೆಳೆಯನ್ನು ನಾಶಪಡಿಸಲಾಗಿದೆ.

ಮಾಜಿ ಸಚಿವ ಡಾ.ಮಮ್ತಾಜ್ ಇನ್ನಿಲ್ಲ

ಬೆಂಗಳೂರು: ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿಖಾನ್ (94) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.