ಗದಗ: ಕೋವಿಡ್ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ ಮಾಡಿ, ತಾಯಿ-ಮಗು ಇಬ್ಬರ ಜೀವ ಕಾಪಾಡಿದ ಅಪರೂಪದ ಸಾಧನೆ ಮಾಡಿದ ನಗರದ ಜಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಈಗ ಆ ಕಂದನ ಪಾಲಿಗೆ ತಾಯಿ-ತಂದೆ ಎಲ್ಲವೂ ಆಗಿದ್ದಾರೆ.

ಉಸಿರಾಟದ ತೊಂದರೆ ಇರುವ ನವಜಾತ ಹೆಣ್ಣು ಶಿಶುವನ್ನು ಕೊವಿಡ್ ವಿಭಾಗದಲ್ಲೇ ಇರುವ ನವಜಾತ ಶಿಶುಗಳ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಲ್ಲೇ ಕೆಲ ಅಡಿಗಳ ದೂರದಲ್ಲಿ ಕೊವಿಡ್ ಬೆಡ್ ನಲ್ಲಿ ಮಲಗಿರುವ ಅವ್ವ ತನ್ನ ಕಂದನನ್ನು ಸ್ಪರ್ಶಿಸುವಂತಿಲ್ಲ. ಐಸಿಯು ಹೊರಗೆ ನಿಂತು ದಿನಕ್ಕೊಮ್ಮೆ ಗಾಜಿನ ಮೂಲಕ ನೋಡಬೇಕು. ಮಗು ಜೀವರಕ್ಷಕ ಯಂತ್ರದ ಮೇಲಿರುವುದರಿಂದ ಎದೆ ಹಾಲು ಕುಡಿಸಲು ಅನುಮತಿ ಇಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಮ್ಸ್ ವೈದ್ಯರು ಮತ್ತು ಸಿಬ್ಬಂದಿಯೇ ಈಗ ಕಂದನ ಪಾಲಿಗೆ ತಾಯಿ-ತಂದೆ. ತಾಯಿಯ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ನಳಿಕೆ ಮೂಲಕ ಮಗುವಿನ ದೇಹಕ್ಕೆ ಸೇರಿಸುತ್ತಿದ್ದಾರೆ. ಈಗ ಈ 3 ದಿನದ ಹೆಣ್ಣು ಶಿಶುವಿಗೆ ಜಿಮ್ಸ್ ಆಸ್ಪತ್ರೆಯೇ ಮನೆ, ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯೇ ತಂದೆ-ತಾಯಿ-ಬಂಧು ಬಳಗ ಎಲ್ಲ.

ಈ ಕುರಿತು ಉತ್ತರಪ್ರಭದ ಜೊತೆ ಮಾತನಾಡಿದ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ, ಮಗುವಿನ ಕೊರೋನಾ ಟೆಸ್ಟ್ ವರದಿ ಇನ್ ವ್ಯಾಲಿಡ್ ಎಂದು ಬಂದಿದೆ. ಎರಡನೇ ಸ್ಯಾಂಪಲ್ ಕಳಿಸಿದ್ದೇವೆ. ಈಗ ಉಸಿರಾಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದರು.

ಮಗುವಿನ ತಂದೆಗೆ ಭಯವೋ ಅಥವಾ ಅಜ್ಞಾನವೊ ಅಥವಾ ಅಲ್ಲಿ ಅನುಮತಿ ಸಿಗಲ್ಲ ಎಂದು ಯಾರಾದರೂ ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಂತೂ ಆಸ್ಪತ್ರೆಯತ್ತ ಬಂದಿಲ್ಲ. ಆದರೆ ನೂರಾರು ಜಿಮ್ಸ್ ಸಿಬ್ಬಂದಿ ಈ ಕಂದನ ಚೇತರಿಕೆಗೆ ನೆರವಾಗುತ್ತಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ಅವರಿಗೆ ಶುಕ್ರವಾರ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು. ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಾಗ, ಡಾ. ಶಿವನಗೌಡ ಜೋಳದರಾಶಿ, ಡಾ.ಶೃತಿ ಭಾವಿ ಮತ್ತು ಡಾ. ಅಜಯ್ ಬಸರಿಗಿಡದ ಸಿಸೇರಿನ್ ಮಾಡಿ ಹೆರಿಗೆ ಯಶಸ್ವಿಗೊಳಿಸಿ ಅನನ್ಯ ಸಾಧನೆ ಮಾಡಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು.

Leave a Reply

Your email address will not be published.

You May Also Like

ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9721…

ಶಿಕ್ಷಕರಿಗೆ ರಜೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ!

ಬೆಂಗಳೂರು : ರಾಜ್ಯ ಸರ್ಕಾರ, ಶಿಕ್ಷಕರಿಗೆ ಮಧ್ಯಂತರ ರಜೆ ನೀಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅತಿವೃಷ್ಟಿಯಿಂದ ರಾಜ್ಯದಲ್ಲಾದ ನಷ್ಟ ಎಷ್ಟು ಗೊತ್ತಾ..?

ಮೈಸೂರು : ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ ರೂ. 9,952 ಕೋಟಿಯಷ್ಟು ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೊರೊನಾ ಮಹಾಮಾರಿಗೆ ವಿಲ ವಿಲ ಎನ್ನುತ್ತಿರುವ ಸಿಲಿಕಾನ್ ಸಿಟಿ!

ಕೊರೊನಾ ಮಹಾಮಾರಿಗೆ ವಿಲ ವಿಲ ಎನ್ನುತ್ತಿರುವ ಸಿಲಿಕಾನ್ ಸಿಟಿ!ಬೆಂಗಳೂರು : ರಾಜ್ಯದಲ್ಲಿ ಕೂಡ ಕೊರೊನಾ ಅಬ್ಬರ…