ಪಟ್ಟಣಂತಿಟ್ಟು : ಶಬರಿ ಮಲೆ ದೇವಾಲಯ ಪ್ರವೇಶಿಸಿ ವಿವಾದ ಎಬ್ಬಿಸಿದ್ದ ರೆಹನಾ ಫಾತಿಮಾ ಮತ್ತೊಂದು ಅವಾಂತರ ಸೃಷ್ಟಿಸಿದ್ದಾರೆ. ಕೇರಳ ಮೂಲದ ಈ ಮಾಡೆಲ್ ಸದ್ಯ ಅರೆಬೆತ್ತಲೆಯಾಗಿ ಇಬ್ಬರು ಮಕ್ಕಳಿಂದ ಪೇಂಟಿಂಗ್ ಮಾಡಿಕೊಂಡಿದ್ದಾರೆ.

ದೇಹ ಮತ್ತು ರಾಜಕೀಯ ಎಂಬ ಹೆಡ್ ಲೈನ್ ಇರುವ ವಿಡಿಯೋವನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇದನ್ನು ಕಂಡ ವಕೀಲ ಅರುಣ್ ಪ್ರಕಾಶ್ ನೀಡಿದ ದೂರಿನ ಮೇರೆಗೆ ರೆಹನಾ ಫಾತಿಮಾ ವಿರುದ್ಧ ಐಟಿ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಆದರೆ, ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾಡೆಲ್ ಫಾತಿಮಾ ನಿವಾಸದ ಮೇಲೆ ದಾಳಿ ಮಾಡಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಜಪ್ತಿ ಮಾಡಿದ್ದು, ಉದ್ಧೇಶಪೂರ್ವಕವಾಗಿ ಈ ವಿಡಿಯೋ ಹರಿ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Leave a Reply

Your email address will not be published. Required fields are marked *

You May Also Like

ರೈತ ಸತ್ತಿರುವುದನ್ನು ಕಂಡರೂ ಭಾಷಣ ಮುಂದುವರೆಸಿದ ಬಿಜೆಪಿ ನಾಯಕರು!

ಖಾಂಡ್ವಾ : ಭಾಷಣ ಕೇಳಲು ಬಂದ ರೈತರೊಬ್ಬರು ಹೃದಯಾಘಾತದಿಂದ ಕಣ್ಣೆದುರೇ ಸಾವನ್ನಪ್ಪಿದ್ದರೂ ಬಿಜೆಪಿ ನಾಯಕರು ಭಾಷಣ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜ್ಯದಲ್ಲಿಂದು 388 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 388 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆಯಾದಂತಾಗಿದೆ.

ಬೆಂಗಳೂರಿನಲ್ಲಿ ದಂಪತಿಯ ಬರ್ಬರ ಹತ್ಯೆ

ನಗರದಲ್ಲಿ ದಂಪತಿಯ ಹತ್ಯೆ ನಡೆದಿದ್ದು, ಮಗನಿಂದಲೇ ನಡೆದಿದೆ ಎನ್ನಲಾಗಿದೆ. ಕೋಣನಕುಂಟೆ ಬಳಿಯ ಆರ್ ಬಿಐ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೋವಿಂದಪ್ಪ(65), ಶಾಂತಮ್ಮ(55) ಕೊಲೆಯಾದ ದುರ್ದೈವಿಗಳು. ಇವರನ್ನು ಟೆಕ್ಕಿಯಾಗಿರುವ ಮಗ ನವೀನ್ ಕೊಲೆಗೈದಿರಬಹುದು ಎಂಬ ಶಂಕಿಸಲಾಗಿದೆ.

ಕೋವಿಡ್: ಬಿಗಡಾಯಿಸುತ್ತಿದೆ ಬೆಂಗಳೂರು :25 ದಿನದಲ್ಲಿ 38,213 ಪಾಸಿಟಿವ್, 765 ಸಾವು

ಜುಲೈ 1 ರಿಂದ ಜುಲೈ 25ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಸಂಖ್ಯೆ 8 ಪಟ್ಟು ಹೆಚ್ಚಿದ್ದು, ಔಷಧಿ, ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆಯಿದೆ.