ಬೆಂಗಳೂರು: ಈಗಾಗಲೇ ಅವಧಿ ಪೂರ್ಣಗೊಳಿಸಿರುವ ಗ್ರಾಮ ಪಂಚಾಯತಿಗಳು ಹಣಕಾಸಿನ ವ್ಯವಹಾರ ಹಾಗೂ ಸಭೆ ನಡೆಸುವಂತಿಲ್ಲ. ಈ ಬಗ್ಗೆ ಇಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಬಹುತೇಕ ಗ್ರಾಮ ಪಂಚಾಯತಿಗಳ ಅವಧಿ ಪೂರ್ಣಗೊಂಡಿದೆ. ಸರ್ಕಾರದ ಮುಂದಿನ ನಿರ್ದೇಶನದ ವರೆಗೆ ಅವಧಿ ಮುಗಿದಿರುವ ಗ್ರಾಮ ಪಂಚಾಯತಿಗಳು ಯಾವುದೇ ಸಭೆ ಹಾಗೂ ಹಣಕಾಸಿನ ವ್ಯವಹಾರಗಳನ್ನು ಮಾಡಬಾರದೆಂದು ಆದೇಶ ನೀಡಲಾಗಿದೆ.
