ನವದೆಹಲಿ: ಕೊರೊನಾದಿಂದ ಹೆಚ್ಚು ಬಾಧಿತ ನಂಬರ್ 1 ದೇಶ ಎನಿಸಿದ್ದ ಚೀನಾ ನಂತರದಲ್ಲಿ ಸಾಕಷ್ಟು ಚೇತರಿಸಿಕೊಂಡು ಈಗ ಹೇಚ್ಚು ಬಾಧಿತ ದೇಶಗಳಲ್ಲಿ 22ನೆ ಸ್ಥಾನದಲ್ಲಿದೆ.

ಮುಖ್ಯಾಂಶಗಳು 1) ಯಾರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟಿರಿಯದಿಂದ ಹರಡುತ್ತದೆ. 2) ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. 3) ಸೋಂಕಿತ ಜಿಗಟ (ಅಥವಾ ಆ ತರಹದ ಕೀಟ) ಕಚ್ಚಿದಾಗ ಬರುತ್ತದೆ.

ಎರಡು ದಿನದಿಂದ ಅಲ್ಲೀಗ ‘ಬ್ಲ್ಯಾಕ್ ಡೆತ್’ ಭಯ ಶುರುವಾಗಿದೆ. ಹೆಸರೇ ಸೂಚಿಸುವಂತೆ ಇದು ಭಯಾನಕ ರೋಗವೇ ಆಗಿದೆ. ಬ್ಯುಬೊನಿಕ್ ಪ್ಲೇಗ್ ಎಂದೇ ಕರೆಯಲ್ಪಡುವ ಈ ರೋಗ ಶನಿವಾರ ಚೀನಾದಲ್ಲಿ ಕಾಣಿಸಿಕೊಂಡಿದೆ. ಚೀನಾದ ಉತ್ತರ ಭಾಗದಲ್ಲಿ ಮಂಗೋಲಿಯನ್ ಪ್ರದೇಶದಲ್ಲಿ 27 ವಯಸ್ಸಿನ ಯುವಕನಲ್ಲಿ ಇದರ ಲಕ್ಷಣಗಳು ಕಾಣಿಸಿಕೊಂಡಿದ್ದು ಈಗಾಗಲೇ ಆ ಪ್ರಾಂತ್ಯದಲ್ಲಿ ಮೂರನೇ ಹಂತದ ಎಚ್ಚರಿಕೆ ನೀಡಲಾಗಿದೆ. ಆ ಯುವಕ ಮಾರ್ಮಾಟ್ ಎಂಬ ಪ್ರಾಣಿಯ ( ಒಂದು ಬಗೆಯ ಅಳಿಲು ಪ್ರಭೇದ) ಮಾಂಸ ತಿಂದಿದ್ದ ಎನ್ನಲಾಗಿದ್ದು, ಆ ಪ್ರಾಣಿಯಿಂದ ಹರಡಿರಬಹುದು ಎನ್ನಲಾಗಿದೆ. ಚೀನಾದ ಇನ್ನೊಂದು ಮಾಧ್ಯಮದ ಪ್ರಕಾರ ಇಂತಹ 2 ಕೇಸ್ ದಾಖಲಾಗಿವೆ.

ಏನಿದು ಬ್ಲ್ಯಾಕ್ ಡೆತ್?
ಇದು ವೈರಸ್ ನಿಂದ ಹರಡುವ ರೋಗವಲ್ಲ. ಎಲ್ಲ ಪ್ಲೇಗ್ ತರಹ ಬ್ಯಾಕ್ಟಿರಿಯಾದಿಂದ ಹರಡುತ್ತದೆ. ಯಾರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟಿರಿಯದಿಂದ ಈ ಪ್ಲೇಗ್ ಬರುತ್ತದೆ. ಸೋಂಕಿತ ಜಿಗಟಗಳು ಕಚ್ಚಿದಾಗ ಇದು ಬರುತ್ತದೆ. ಇದು ಕೊರೋನಾದಂತೆ ಮನುಷ್ಯರಿಂದ ಮನುಷ್ಯರಿಗೆ ಹರಡಲಾರದು. ಸೋಂಕಿತ ಪ್ರಾಣಿಯನ್ನು ಕಚ್ಚಿದ ಜಿಗಣೆ ಅಥವಾ ಆಥರದ ಪ್ರಬೇಧದ ಕೀಟ ಮಾನವನನ್ನು ಕಚ್ಚಿದಾಗ ತಗುಲುತ್ತದೆ. ಸೋಂಕಿತ ಸತ್ತ ಪ್ರಾಣಿಯನ್ನು ಮುಟ್ಟಿದಾಗಲೂ ಇದು ಹರಡಬಹುದು ಎನ್ನಲಾಗಿದೆ.

ಲಕ್ಷಣಗಳೇನು?
ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಒಂದು ಕೋಳಿ ಮೊಟ್ಟೆಯ ಗಾತ್ರದಷ್ಟು ಊದಿಕೊಳ್ಳಬಹುದು. ಕುತ್ತಿಗೆ, ಕೈ-ಕಾಲುಗಳಲ್ಲೂ ಊತ ಉಂಟಾಗಬಹುದು. ಜ್ವರ, ತಲೆನೋವು, ಸ್ನಾಯು ನೋವು. ಈ ಪ್ಲೇಗ್ ಬಂದಿರುವ ವ್ಯಕ್ತಿ 24 ಗಂಟೆಗಳಲ್ಲಿ ಅಸ್ಪತ್ರೆಯ ಚಿಕಿತ್ಸೆ ಪಡೆಯಬೇಕು.
ಈ ಪ್ಲೇಗ್ ರೋಗಕ್ಕೆ ಔಷಧಿ ಲಭ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಸಮಾಧಾನದ ಸಂಗತಿಯಾಗಿದೆ.

ಎಷ್ಟು ಅಪಾಯಕಾರಿ?
ಚಿಕಿತ್ಸೆ ಸಿಗದೇ ಹೋದರೆ ಸೋಂಕಿತರ ಪೈಕಿ ಶೇ.40-60 ಜನರ ಮರಣ ಗ್ಯಾರಂಟಿ. ಮೊದಲಿಗೆ ಇದು 14ನೆ ಶತಮಾನದಲ್ಲಿ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿ ಕಾಣಿಸಿಕೊಂಡು, 50 ಮಿಲಿಯನ್ (5 ಕೋಟಿ) ಜನರನ್ನು ಬಲಿ ತೆಗೆದುಕೊಂಡಿತ್ತು. 2010-15ರ ನಡುವೆ 3,200 ಜನರಲ್ಲಿ ಕಾಣಿಸಿಕೊಂಡು564 ಬಲಿ ಪಡೆದಿತ್ತು,.

ಮುಂಜಾಗ್ರತೆ ಏನು?
ಯಾವುದೇ ಪ್ರದೇಶದಲ್ಲಿ ಕಾಣಿಸಿಕೊಂಡಾಗ, ಸತ್ತ ಪ್ರಾಣಿ ಮುಟ್ಟಬಾರದು, ಬೇಟೆಯಾಡಿದ ಪ್ರಾಣಿ ತಿನ್ನಬಾರದು ಎಂದು ಹೇಳುತ್ತಾರೆ. ಜಿಗಣೆ ತರಹದ ಕೀಟಗಳು ಕಚ್ಚದಂತೆ ಕಾಪಾಡಿಕೊಳ್ಳಲು ಕೀಟ ನಿರೋಧಕ ಧಿರಿಸು ಅಥವಾ ಕೀಟ ನಿರೋಧಕ ತೈಲ ಬಳಸಬೇಕು.

Leave a Reply

Your email address will not be published. Required fields are marked *

You May Also Like

ಕೋವಿಡ್ ಬಾಧಿತ ಮಕ್ಕಳಿಗೆ ಕವಾಸಾಕಿ ಕಾಯಿಲೆ ಕಾಟ :ಏನಿದು ಕಾಯಿಲೆ? ಲಕ್ಷಣಗಳೇನು?

ಕೋವಿಡ್ ಬಾಧಿತ ಎಲ್ಲ ಮಕ್ಕಳಲ್ಲೂ ಇದು ಕಂಡು ಬಂದಿಲ್ಲವಾದರೂ, ಭಾರತ ಸೇರಿ ವಿಶ್ವಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿವೆ.ಕೋವಿಡ್ ಬಾಧಿತ ಮಕ್ಕಳಲ್ಲಿ, ಸೋಂಕಿಗೆ ಒಳಗಾದ 2-3 ವಾರಕ್ಕೆ

ತೋಟಗಾರಿಕೆ ಬೆಳೆಗಳಿಗೆ ವಿಮಾ ಕಂತು ಪಾವತಿಗೆ ಜೂನ್ 30 ಕೊನೆಯ ದಿನ

ಪ್ರಸಕ್ತ ಸಾಲಿನ ಮುಂಗಾರು ಅವಧಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ದಾಳಿಂಬೆ ಮತ್ತು ಪಪ್ಪಾಯ (ಪರಂಗಿ) ಬೆಳೆಗೆ ವಿಮೆ ಸೌಲಭ್ಯ ಅಂತಿಮಗೊಳಿಸಲಾಗಿದ್ದು, ಬಜಾಜ್ ಅಲೆನ್ಸ್ ಇನ್ಸೂರೆನ್ಸ ಕಂಪನಿ ವಿಮೆ ನೀಡಲಿದೆ.

ವಾಷಿಂಗ್ಟನ್ ನಲ್ಲಿ ಗಾಂಧಿ ಪ್ರತಿಮೆ ಧ್ವಂಸ: ಕ್ಷಮೆ ಕೋರಿದ ಅಮೆರಿಕ

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಂದಿರುವ ಮಹಾತ್ಮ ಗಾಂಧಿ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.