ಗದಗ: ಕೋವಿಡ್ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ ಮಾಡಿ, ತಾಯಿ-ಮಗು ಇಬ್ಬರ ಜೀವ ಕಾಪಾಡಿದ ಅಪರೂಪದ ಸಾಧನೆ ಮಾಡಿದ ನಗರದ ಜಿಮ್ಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಈಗ ಆ ಕಂದನ ಪಾಲಿಗೆ ತಾಯಿ-ತಂದೆ ಎಲ್ಲವೂ ಆಗಿದ್ದಾರೆ.

ಉಸಿರಾಟದ ತೊಂದರೆ ಇರುವ ನವಜಾತ ಹೆಣ್ಣು ಶಿಶುವನ್ನು ಕೊವಿಡ್ ವಿಭಾಗದಲ್ಲೇ ಇರುವ ನವಜಾತ ಶಿಶುಗಳ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಲ್ಲೇ ಕೆಲ ಅಡಿಗಳ ದೂರದಲ್ಲಿ ಕೊವಿಡ್ ಬೆಡ್ ನಲ್ಲಿ ಮಲಗಿರುವ ಅವ್ವ ತನ್ನ ಕಂದನನ್ನು ಸ್ಪರ್ಶಿಸುವಂತಿಲ್ಲ. ಐಸಿಯು ಹೊರಗೆ ನಿಂತು ದಿನಕ್ಕೊಮ್ಮೆ ಗಾಜಿನ ಮೂಲಕ ನೋಡಬೇಕು. ಮಗು ಜೀವರಕ್ಷಕ ಯಂತ್ರದ ಮೇಲಿರುವುದರಿಂದ ಎದೆ ಹಾಲು ಕುಡಿಸಲು ಅನುಮತಿ ಇಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಮ್ಸ್ ವೈದ್ಯರು ಮತ್ತು ಸಿಬ್ಬಂದಿಯೇ ಈಗ ಕಂದನ ಪಾಲಿಗೆ ತಾಯಿ-ತಂದೆ. ತಾಯಿಯ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ನಳಿಕೆ ಮೂಲಕ ಮಗುವಿನ ದೇಹಕ್ಕೆ ಸೇರಿಸುತ್ತಿದ್ದಾರೆ. ಈಗ ಈ 3 ದಿನದ ಹೆಣ್ಣು ಶಿಶುವಿಗೆ ಜಿಮ್ಸ್ ಆಸ್ಪತ್ರೆಯೇ ಮನೆ, ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯೇ ತಂದೆ-ತಾಯಿ-ಬಂಧು ಬಳಗ ಎಲ್ಲ.

ಈ ಕುರಿತು ಉತ್ತರಪ್ರಭದ ಜೊತೆ ಮಾತನಾಡಿದ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್. ಭೂಸರಡ್ಡಿ, ಮಗುವಿನ ಕೊರೋನಾ ಟೆಸ್ಟ್ ವರದಿ ಇನ್ ವ್ಯಾಲಿಡ್ ಎಂದು ಬಂದಿದೆ. ಎರಡನೇ ಸ್ಯಾಂಪಲ್ ಕಳಿಸಿದ್ದೇವೆ. ಈಗ ಉಸಿರಾಟದಲ್ಲಿ ಸುಧಾರಣೆ ಕಂಡುಬಂದಿದೆ ಎಂದರು.

ಮಗುವಿನ ತಂದೆಗೆ ಭಯವೋ ಅಥವಾ ಅಜ್ಞಾನವೊ ಅಥವಾ ಅಲ್ಲಿ ಅನುಮತಿ ಸಿಗಲ್ಲ ಎಂದು ಯಾರಾದರೂ ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಂತೂ ಆಸ್ಪತ್ರೆಯತ್ತ ಬಂದಿಲ್ಲ. ಆದರೆ ನೂರಾರು ಜಿಮ್ಸ್ ಸಿಬ್ಬಂದಿ ಈ ಕಂದನ ಚೇತರಿಕೆಗೆ ನೆರವಾಗುತ್ತಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಗದಗ ಜಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಆದರೆ ಅವರಿಗೆ ಶುಕ್ರವಾರ ಕೊರೋನಾ ಸೋಂಕು ತಗಲಿರುವದು ದೃಢಪಟ್ಟಿತ್ತು. ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಾಗ, ಡಾ. ಶಿವನಗೌಡ ಜೋಳದರಾಶಿ, ಡಾ.ಶೃತಿ ಭಾವಿ ಮತ್ತು ಡಾ. ಅಜಯ್ ಬಸರಿಗಿಡದ ಸಿಸೇರಿನ್ ಮಾಡಿ ಹೆರಿಗೆ ಯಶಸ್ವಿಗೊಳಿಸಿ ಅನನ್ಯ ಸಾಧನೆ ಮಾಡಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು.

Leave a Reply

Your email address will not be published. Required fields are marked *

You May Also Like

ಕೋವಿಡ್ ನಿಂದ ಮೃತ ಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಾಧ್ಯಕ್ಷರಾಗಿ ಸಿದ್ದು ಆಯ್ಕೆ.

ನವಲಿ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣಲ್ಲಿ ಮಾ.7 ರಂದು ನಡೆಯಲಿರುವ ಪ್ರಪ್ರಥಮ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಂಗ್ಲಿಷ್ ಪ್ರಾಧ್ಯಾಪಕ, ಪ್ರಗತಿ ಪರ ಬರಹಗಾರ ಹಾಗೂ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯ, ಗೌರವ ಸಂಪಾದಕ ಪ್ರೊ.ಸಿದ್ದು ಯಾಪಲಪರವಿ ಆಯ್ಕೆಯಾಗಿದ್ದಾರೆ.

6 ರಿಂದ 8ನೇ ತರಗತಿ ಶಾಲಾರಂಭದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ ನೋಡಿ

ಕೋವಿಡ್ ನಂತರ ರಾಜ್ಯದಲ್ಲಿ ಫೆ.22 ರಿಂದ 6 ರಿಂದ 8ನೇ ತರಗತಿಯ ಪೂರ್ಣಾವಧಿ ಶಾಲೆ ಪ್ರಾರಂಭ ಮತ್ತು ವಿದ್ಯಾಗಮ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.