ಹೈದರಾಬಾದ್ : ದಕ್ಷಿಣ ಭಾರತ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ. ಅವರು ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇದೀಗ ತೆಲುಗು ಚಿತ್ರದಲ್ಲಿ ಅವರನ್ನು ಮತ್ತೊಂದು ಅವಕಾಶ ಕೈ ಬೀಸಿ ಕರೆಯುತ್ತಿದೆ.

ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಅವರು ಎದುರು ನೋಡುತ್ತಿದ್ದು, ಇದೇ ಗ್ಯಾಪ್ನ್ಲ್ಲಿ ತೆಲುಗು ನಟ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೀಗ ನಾನಿ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಟಿ ಸಾಯಿ ಪಲ್ಲವಿ ಈಗಾಗಲೇ ನಾನಿ ಜೊತೆ ಎಂಸಿಎ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಎರಡನೇ ಬಾರಿ ನಾನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಟ್ಯಾಕ್ಸಿವಾಲಾ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

3 ಲಕ್ಷ ರೂ. ಚಿನ್ನದ ಮಾಸ್ಕ್ ಧರಿಸುವ ಶಂಕರ್ ಕುರಾಡೆ

ಪುಣೆ: ಈ ಮನುಷ್ಯನಿಗೆ ಚಿನ್ನದ ಹುಚ್ಚು ಮತ್ತು ಪ್ರಚಾರದ ತೆವಲು ಎಷ್ಟಿದೆಯೆಂದರೆ, ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ…

ಯುವರಾಜ್ ಸಿಂಗ್ ಗೆ ಮೋಸ ಮಾಡಿದವರು ಯಾರು?

ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಜನ ಚುರಿ ಹಾಕಿದ್ದಾರೆ ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ. ಹಾಗಾದ್ರೆ ಯುವಿ ಬೆನ್ನಿಗೆ ಚೀರಿಹಾಕಿದವರು ಯಾರು ಎನ್ನುವುದೇ ಇಲ್ಲಿ ಮುಖ್ಯ ಪ್ರಶ್ನೆ.

ಕಿರಿಕ್ ಬೆಡಗಿಗೆ ವಿಜಯ್ ಕಳುಹಿಸಿದ ಸಂದೇಶವೇನು?

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಸಂದೇಶ ಕಳುಹಿಸಿದ್ದಾರೆ. ಹೈದರಾಬಾದ್ಗೆ ಬಾ…

ಕೊರೊನಾ ಭಯದ ಜೊತೆಗೆ ಶುರುವಾಯ್ತು ಡೆಂಗ್ಯೂ ಭಯ.!

ಬೆಂಗಳೂರು : ಸದ್ಯ ಕೊರೊನಾ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದರ ಮಧ್ಯೆಯೇ ಡೆಂಗ್ಯೂ ಜನರ…