ಬೆಂಗಳೂರು : ಸದ್ಯ ಕೊರೊನಾ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದರ ಮಧ್ಯೆಯೇ ಡೆಂಗ್ಯೂ ಜನರ ನಿದ್ದೆಗೆಡಿಸಿದೆ.

ಜೂ.  1 ರಿಂದ ಜೂನ್ 18ರ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 60 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ವರ್ಷ ರಾಜ್ಯಾದ್ಯಂತ 1,704 ಕೇಸ್ ದಾಖಲಾಗಿದ್ದು, ಬೆಂಗಳೂರಿನಲ್ಲಿ 337 ಪ್ರಕರಣ ದಾಖಲಾದಂತಾಗಿವೆ.

ಸದ್ಯ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರ ಆರಂಭವಾಗಿದೆ. ಮಳೆ ನೀರಿನಲ್ಲಿ ಸೊಳ್ಳೆಗಳ ವಂಶಾಭಿೃದ್ಧಿಯಾಗುತ್ತಿದೆ. ಡೆಂಗ್ಯೂ ರೋಗ ಲಕ್ಷಣಗಳಿರುವ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಡೆಂಗ್ಯೂ ನೆಗೆಟಿವ್ ಬಂದಿದೆ. ಡೆಂಗ್ಯೂ ಸದ್ಯ ಗುಣಪಡಿಸಬಹುದಾದ ಜ್ವರವಾಗಿದೆ. ವಾಂತಿ ಮತ್ತು ದೇಹದ ನಿರ್ಜಲೀಕರಣ ಇದರ ಪ್ರಮುಖ ಲಕ್ಷಣವಾಗಿದೆ. ಡೆಂಗ್ಯೂ ವಾಸಿಯಾಗಲು 3 ರಿಂದ 10 ದಿನಗಳ ಚಿಕಿತ್ಸೆ ನೀಡಬೇಕಾಗುತ್ತದೆ.

Leave a Reply

Your email address will not be published.

You May Also Like

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ – ವರದಿ ನೆಗೆಟಿವ್!

ಬೀದರ್ : ತನಗೆ ಕೊರೊನಾ ವೈರಸ್ ಬಂದಿದೆ ಎಂದು ಆತಂಕಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆದರೆ, ಆತನ ಕೊರೊನಾ ವರದಿ ಮಾತ್ರ ನೆಗೆಟಿವ್ ಬಂದಿದೆ.

ಶಾಸಕರೇ, ಆದರಳ್ಳಿ ಗ್ರಾಮದ ಬಗ್ಗೆ ಇಷ್ಟೇಕೆ ನಿರಾಸಕ್ತಿ?

ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ತಾಲೂಕಿನ ಆದರಹಳ್ಳಿ ಗ್ರಾಮದ ವಡ್ಡರ್ ಪಾಳ್ಯದ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಸೋಂಕಿನ ಸವಾಲಿಗೆ ಸರ್ಕಾರ ಸುಸ್ತು!: 3693 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 3693 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…