ಪುಣೆ: ಈ ಮನುಷ್ಯನಿಗೆ ಚಿನ್ನದ ಹುಚ್ಚು ಮತ್ತು ಪ್ರಚಾರದ ತೆವಲು ಎಷ್ಟಿದೆಯೆಂದರೆ, ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಧರಿಸಿ ಶೋ ಕೊಡುತ್ತಿದ್ದಾನೆ.
ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೊವಿಡ್‌ನಿಂದ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದ ಶಂಕರ್ ಕುರಾಡೆ ಎಂಬ ವ್ಯಕ್ತಿಯ ಹುಚ್ಚು ಸಾಹಸವಿದು.

2.98 ಲಕ್ಷ ರೂ ಖರ್ಚು ಮಾಡಿ ಈ ಬಂಗಾರದ ಮಾಸ್ಕ್ ತಯಾರಿಸಲಾಗಿದೆ. ‘ಇದರ ಮಧ್ಯ ಭಾಗದಲ್ಲಿ ಸಣ್ಣ ಸಣ್ಣ ರಂಧ್ರ ಇರುವುದರಿಂದ ಉಸಿರಾಟಕ್ಕೇನೂ ತೊಂದರೆಯಿಲ್ಲ. ಆದರೆ ಕೊವಿಡ್ ಸೋಂಕು ತಡೆಗೆ ಇದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ’ ಎಂದು ಶಂಕರ್ ಕುರಾಡೆ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಎಎನ್‌ಐ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ನೆಟ್ಟಿಗರಲ್ಲಿ ಬಹಳಷ್ಟು ಜನ ಈ ಹುಚ್ಚಿನ ಬಗ್ಗೆ ಅಸಹ್ಯ ಪಟ್ಟಿದ್ದಾರೆ, ಕೆಲವರು ತಮಾಷೆ ಮಾಡಿದ್ದಾರೆ.

ಕಾರ್-ಪೇಂಟರ್ ಎನ್ನುವ ಹ್ಯಾಂಡಲ್‌ನವರು, ‘ಹಣದಿಂದ ಏನೆಲ್ಲ ಖರೀದಿಸಬಹುದು, ಆದರೆ ಕಾಮನ್ ಸೆನ್ಸ್ ಖರೀದಿಸಲಾಗದು’ ಎಂದಿದ್ದಾರಲ್ಲದೇ, ‘ಕೊವಿಡ್ ಈಡಿಯಟ್’ (ಕೊವಿಡೀಯಟ್) ಎಂದು ಚುಚ್ಚಿದ್ದಾರೆ. ಕಂಗನಾ ಎನ್ನುವವರು ಪೈಸಾ ಕೊಟ್ರ ಎಲ್ಲ ಸಿಗುತ್ತ, ಆದ್ರ ಬುದ್ಧಿ ಸಿಗಂಗಿಲ್ಲ’ ಎಂದಿದ್ದಾರೆ.

ಪಿಂಪ್ರಿ-ಚಿಂಚವಾಡದಲ್ಲಿ ಸೋಂಕಿನ ತೀವ್ರತೆಯಿದೆ. ಜುಲೈ 1ರವರೆಗೆ ಅಲ್ಲಿ 3,287 ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು 47 ಜನರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅದೇ ಪ್ರದೇಶದ ಈ ವ್ಯಕ್ತಿಗೆ ಈ ಅಸಹ್ಯ, ಅನೈತಿಕ ಶ್ರೀಮಂತಿಕೆ ಪ್ರದರ್ಶನ ಬೇಕಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಈ ವ್ಯಕ್ತಿಗೆ ಮೊದಲಿಂದಲೂ ಬಂಗಾರದ ಬಯಕೆ ಕಾಡುತ್ತಲೇ ಬಂದಿದೆ. ಕೊರಳಲ್ಲಿ ಒಂದು ಹಗ್ಗದಂತಹ ಚಿನ್ನದ ಸರ, ಎಲ್ಲ ಬೆರಳುಗಳಿಗೆ ಚಿನ್ನದ ಉಂಗುರ ಮತ್ತು ಮುಂಗೈಗೆ ಹೆಣಭಾರದ ಬ್ರಾಸ್‌ಲೈಟ್ ಧರಿಸುತ್ತಾನೆ. 2.98 ಲಕ್ಷ ರೂ ವೆಚ್ಚದಲ್ಲಿ ಎಷ್ಟೋ ಬಟ್ಟೆ ಮಾಸ್ಕ್ ಖರೀದಿಸಿದ್ದರೆ ಹಂಚಿದ್ದರೆ ಈತ ಗ್ರೇಟ್ ಆಗುತ್ತಿದ್ದ ಅಲ್ಲವೆ?

ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು ಎಂದು ಸರಳತೆಯ ಬಗ್ಗೆ ಪ್ರಧಾನಿ ಹೇಳುವ ಹೊತ್ತಿನಲ್ಲಿ ಇಲ್ಲಿ ಚಿನ್ನದ ಮಾಸ್ಕ್ ಹಾಕುವ ತೆವಲು ಕಾಣಸಿಕೊಂಡಿದೆ.

1 comment
Leave a Reply

Your email address will not be published. Required fields are marked *

You May Also Like

ಬರೋಬ್ಬರಿ 11 ಗಂಟೆಗಳ ಕಾಲ ಮಾತುಕತೆ ನಡೆಸಿದ ಭಾರತ, ಚೀನಾ ಸೇನಾಧಿಕಾರಿಗಳು!

ಲಡಾಖ್: ಭಾರತ ಹಾಗೂ ಚೀನಾ ಸೇನಾಧಿಕಾರಿಗಳು ಬರೋಬ್ಬರಿ 11 ಗಂಟೆಗಳ ಕಾಲ ಗಡಿ ಸಂಘರ್ಷದ ಕುರಿತು…

ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸಚಿವ!

ಔರಂಗಾಬಾದ್ : ಗಡಿ ಹಾಗೂ ಭಾಷೆಯ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಸಿಎಂ ಯಡಿಯೂರಪ್ಪ ರಾಜಾಹುಲಿ ಅಂದ್ರು ಆರ್.ಅಶೋಕ

ಚಾಮರಾಜನಗರ:ಹುಲಿಗೆ ಹಿಂದಿನಿಂದ ಆಡಳಿತ ಮಾಡಿ ಗೊತ್ತಿಲ್ಲ. ನೇರ ಆಡಳಿತವೇ ಸಿಎಂ ಯಡಿಯೂರಪ್ಪ ಅವರ ಸ್ವಭಾವ ಹೀಗಾಗಿ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಅನ್ಲಾಕ್-2 ಮಾರ್ಗಸೂಚಿ ಬಿಡುಗಡೆ!: ಏನಿರುತ್ತೆ, ಏನಿರಲ್ಲ

ನವದೆಹಲಿ : ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು,…