ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಸಂದೇಶ ಕಳುಹಿಸಿದ್ದಾರೆ.

ಹೈದರಾಬಾದ್ಗೆ ಬಾ ಚಿಲ್ ಮಾಡೋಣ ಎಂದು ನಟ ವಿಜಯ್ ದೇವರಕೊಂಡ ಫನ್ನಿಯಾಗಿ ಸಂದೇಶ ಕಳುಹಿಸಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಕೆಲಸಗಳು ಕೂಡ ನಿಂತಿವೆ. ಹೀಗಾಗಿಯೇ ರಶ್ಮಿಕ ಕೊಡಗಿನ ತಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇತ್ತ ವಿಜಯ್ ಹೈದರಾಬಾದ್ ನಲ್ಲಿ ಲಾಕ್ ಆಗಿದ್ದಾರೆ. ಈ ಸಮಯದಲ್ಲಿ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ಳುತ್ತಿರುವ ಅವರು ಈ ರೀತಿಯ ಸಂದೇಶ ಕಳುಹಿಸಿದ್ದಾರೆ.

ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬ ಇತ್ತು. ಅಂದು ರಶ್ಮಿಕಾ ನನ್ನ ಕಾಮ್ರೇಡ್ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದರು. ಇದೀಗ ಆ ಟ್ವೀಟ್ಗೆರ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದು, ಮಂದಣ್ಣ ಬೇಗ ಹೈದರಾಬಾದ್ಗೆ ಬಾ ಚಿಲ್ ಮಾಡೋಣ. ನಮ್ಮ ಗ್ಯಾಂಗ್ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ” ಎಂದು ಹಾರ್ಟ್ ಮತ್ತು ನಗುವ ಎಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಬುದ್ದಿ ವಂತಿಕೆಯಿಂದ ಲಾಕ್ ಡೌನ್ ತೆರೆಯಬೇಕು:ರಘುರಾಮ ರಾಜನ್

ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಲಾಕ್ ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಬುದ್ಧಿವಂತಿಕೆಯಿಂದ ಲಾಕ್ ಡೌನ್ ತೆರವುಗೊಳಿಸಬೇಕು ಆರ್ಥಿಕ ತಜ್ಞ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 445 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,005 ಕ್ಕೆ ಏರಿಕೆಯಾದಂತಾಗಿದೆ.

ಬಾಗಲಕೋಟೆಯಲ್ಲಿಂದು 6 ಕೊರೊನಾ ಪಾಸಿಟಿವ್..!

ಬಾಗಲಕೋಟೆ: ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ‌ 137 ಏರಿಕೆಯಾಗಿದೆ.…