ಪಾಟ್ನಾ: ಕ್ವಾರಂಟೈನ್ ಪೂರ್ಣಗೊಳಿಸಿ ಮನೆಗಳಿಗೆ ಹಿಂದಿರುಗುತ್ತಿರುವ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್ ಳನ್ನು ಉಚಿತವಾಗಿ ನೀಡಿದೆ.

ಕುಟುಂಬ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಪ್ರಾರಂಭಿಸಿದೆ. ಲಾಕ್ಡೌನ್ ಸಡಿಲಿಕೆಯಿಂದಾಗಿ ಸದ್ಯ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಿಗೆ ಮರಳುತ್ತಿದ್ದಾರೆ. ಈ ರೀತಿ ಮರಳಿ ಬರುತ್ತಿರುವ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಡೋಮ್ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.

ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಕಾಂಡೋಮ್ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಲಾಕ್ಡೌನ್ ನಿಂದಾಗಿ ಬಿಹಾರ ರಾಜ್ಯವೊಂದರಲ್ಲಿಯೇ ಸುಮಾರು 8 ಲಕ್ಷ ಪ್ರವಾಸಿ ಕಾರ್ಮಿಕರು ಸ್ವ-ಸ್ಥಳಗಳಿಗೆ ಮರಳಿದ್ದಾರೆ. ಅಲ್ಲದೇ, ಸುಮಾರು 5.26 ಲಕ್ಷ ಜನರಿಗೆ ಕ್ವಾಂರಂಟೈನ್ ಮಾಡಲಾಗಿದೆ. ಜೂನ್ 15ರ ಬಳಿಕ ಕಾರಂಟೈನ್ ಕೇಂದ್ರಗಳನ್ನು ಮುಚ್ಚಿ ಆ ಬಳಿಕ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

Leave a Reply

Your email address will not be published. Required fields are marked *

You May Also Like

ಚಂದನ ಶಾಲೆಯ ಪುಟಾಣಿಗಳ ಕೊರೋನಾ ಜಾಗೃತಿ

ಶಾಲೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಕೊರೋನಾ ಬಗ್ಗೆ ನೀಡಿದ ಜಾಗೃತಿ ಸಂದೇಶ ಅದ್ಭುತವಾದದ್ದು. ಇಂತಹ ಪ್ರಯತ್ನಕ್ಕೆ ಮುಂದಾದ ಚಂದನ್ ಶಾಲೆಯ ಪ್ರಯತ್ನ ಕೂಡ ಸಾಮಾಜಿಕ ಕಾಳಜಿ ತೋರಿಸುವಂತಹದ್ದು.

ಉದ್ಧವ್ ಠಾಕ್ರೆ ಮನದಲ್ಲಿ ಮೂಡಿದ ನಿರಾಳ!

ಕೇಂದ್ರ ಚುನಾವಣಾ ಆಯೋಗವು ಮೇ. 27ರ ಒಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಸಿಎಂ ಉದ್ದವ್ ಠಾಕ್ರೆಗೆ ಸಂತಸ ತಂದಿದೆ.

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…

ಗದಗನಲ್ಲಿ ಗುಣಮುಖನಾಗಿ ಮನೆಗೆ ಮರಳಿದ ಸೋಂಕಿತ

ಗದಗ:ಕೊರೋನಾ ಸೋಂಕಿತ 62 ವರ್ಷದ ವ್ಯಕ್ತಿ ಇಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಗರದ ಜಿಮ್ಸ್ ಆಸ್ಪತ್ರೆಯಿಂದ…