ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 46 ವರ್ಷದ ಮಹಿಳೆಗೆ ರೂ.5.6 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿಯ ಜಯನಗರದ ಮಹಿಳೆಯೊಬ್ಬರು 2019ರ ಆಗಷ್ಟ್ ನಲ್ಲಿ ಮ್ಯಾಟ್ರಿಮೋನಿ ಸೈಟಿನಲ್ಲಿ ವರನನ್ನು ಹುಡುಕಲು ತಮ್ಮ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಅದರಲ್ಲಿ ರಿಯನ್ಶ್ ದಿನೇಶ್ ಆಚಾರ್ಯ ಪರಿಚಯವಾಗಿದ್ದಾನೆ. ಜೊತೆಗೆ ಇಂಗ್ಲೆಂಡ್ ಐಎಸ್ಡಿಲ ಕೋಡ್ ಇರುವ ನಂಬರ್ ಅನ್ನು ಕೂಡ ನೀಡಿದ್ದಾನೆ.

ಪ್ರತಿ ದಿನ ಫೋನ್ ಮತ್ತು ಮೆಸೇಜ್ ಮಾಡುತ್ತಿದ್ದ ಆತ, ನಾನು ದೊಡ್ಡ ಶ್ರೀಮಂತನ ಮಗ ಎಂದು ಪರಿಚಯಮಾಡಿಕೊಂಡಿದ್ದ. ನಮ್ಮ ತಂದೆ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಅವರು ಮಲೇಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷ್ಯಾಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದ.

ಇದರ ಜೊತೆಗೆ ನಮ್ಮ ತಂದೆ ಇಲ್ಲಿನ ಕೆಲ ಉದ್ಯೋಗಿಗಳಿಗೆ ಸಾಯುವ ಮುನ್ನ ದೊಡ್ಡ ಮಟ್ಟದ ಹಣ ಕೊಟ್ಟಿದ್ದಾರೆ. ಅದನ್ನು ನಾನು ಮರಳಿ ಪಡೆಯಬೇಕು ಎಂದು ಸುಳ್ಳು ಹೇಳಿದ್ದ. ಸ್ವಲ್ಪ ದಿನಗಳಲ್ಲಿಯೇ ಆ ಹಣವನ್ನು ಪಡೆಯಲು ಶುಲ್ಕ ಕಟ್ಟಬೇಕು ಅದಕ್ಕೆ 6 ಲಕ್ಷ ಹಣ ಬೇಕು ಎಂದು ಮಹಿಳೆಯ ಬಳಿ ಕೇಳಿದ್ದಾನೆ. ಅವನ ಮಾತನ್ನು ನಂಬಿದ ಮಹಿಳೆ ಆನ್ಲೈನ್ ಮೂಲಕ ಸುಮಾರು 5.6 ಲಕ್ಷವನ್ನು ಕಳುಹಿಸಿದ್ದಾರೆ.

ಇದಾದ ಬಳಿಕ ಅವರಿಗೆ ಮೇ 6ರಂದು ಮಲೇಷ್ಯಾದಿಂದ ಅರ್ಚನ ಹೆಸರಿನ ಕಸ್ಟಮ್ ಅಧಿಕಾರಿ ಕಾಲ್ ಮಾಡಿ ನೀವು ಕಳುಹಿಸಿರುವ ಹಣವನ್ನು ಮಲೇಷ್ಯಾದಲ್ಲಿ ರಿಲೀಸ್ ಮಾಡಲು ರೂ. 74 ಸಾವಿರ ಶುಲ್ಕ ಕಟ್ಟಬೇಕು ಎಂದು ಕೇಳಿದ್ದಾರೆ. ಇದರಿಂದ ಅನುಮಾನಗೊಂಡ ಮಹಿಳೆ ನಡೆದ ವಿಚಾರವನ್ನು ಕುಟುಂಬಸ್ಥರ ಬಳಿ ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ತಾವು ಮೋಸ ಹೋಗಿದ್ದು ತಿಳಿದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಫೆ.24ರಿಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಫೆ.24 ರಿಂದ 26 ವರೆಗೆ ಗವಿಮಠದ ಅಧ್ಯಕ್ಷ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

ಗದಗ ಜಿಲ್ಲೆಯಲ್ಲಿ ಬೀಗರ ಬುತ್ತಿಯಿಂದ ಕೊರೊನಾ ಭಯ..!

ಗದಗ: ಕೊರೊನಾ ಹೆಮ್ಮಾರಿ ಪ್ಯಾಟ್ಯಾಗಷ್ಟ ಗಿರಿಕಿ ಹೊಡೆಯುತ್ತಿತ್ತ. ಈಗ ಹಳ್ಳಿಗೂ ಬಂದು ಹಳ್ಳಿ ಜನ್ರಿಗೆ ಹಳಹಳಿ…

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೀನಾ ವಿಚಾರ ರಾಹುಲ್ ಹೇಳಿಕೆ ಹಾಸ್ಯಾಸ್ಪದ : ಪ್ರಹ್ಲಾದ್ ಜೋಷಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚೀನಾ ವಿಚಾರದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹದಿನೈದು ನಿಮಿಷದಲ್ಲಿ ಚೀನಾದ ಸೈನಿಕರನ್ನು ಹೊರಹಾಕುವ ಹೇಳಿಕೆ ನೀಡುತ್ತಾರೆ ಇದು ಹಾಸ್ಯಾಸ್ಪದ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.