ನವದೆಹಲಿ : ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಇಲ್ಲಿಯವರೆಗೂ ಔಷಧಿ ತಯಾರಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಇದಕ್ಕೆ ಪ್ರಾಣಾಯಾಮ ಪರಿಣಾಮಕಾರಿಯಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಪ್ರದೇಶಗಳಲ್ಲಿ ಈ ಕುರಿತ ಸಂಶೋಧನೆಗಳನ್ನು ನಡೆಸಿದ್ದು, ಉತ್ತಮ ಫಲಿತಾಂಶ ಲಭಿಸುತ್ತಿದೆ. ಕೋವಿಡ್ಗೆ. ಲಸಿಕೆ ಲಭಿಸುವ ಮೊದಲು ನಾವು ಆಯುರ್ವೇದವನ್ನು ಕೋವಿಡ್ ವಿರುದ್ಧ ಹೋರಾಡಲು ಆಯುಧವಾಗಿ ನೀಡುತ್ತೇವೆ ಎಂದಿದ್ದಾರೆ.

ಪತಂಜಲಿ ಸಂಸ್ಥೆಯು 5 ಲಕ್ಷ ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸಲಿದೆ. ದೇಶವು ಖಾದ್ಯ ತೈಲದ ಮೇಲೆ ಸ್ವಾವಲಂಬಿಯಾಗಲು ಸೋಯಾ, ಸೂರ್ಯಕಾಂತಿ, ಸಾಸಿವೆ ಬೆಳೆಯಲು ಉತ್ತೇಜಿಸಲಾಗುವುದು. ಉತ್ಪಾದನೆ ಹೆಚ್ಚಿಸಲು ಚಳುವಳಿಯನ್ನು ನಡೆಸುತ್ತೇವೆ. ಆದರೆ, ಮುಂದಿನ 5 ರಿಂದ 10 ವರ್ಷದಲ್ಲಿ ಇತರರನ್ನು ಅವಲಂಬಿಸಲು ನಾವು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.


Leave a Reply

Your email address will not be published. Required fields are marked *

You May Also Like

ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ..!

ಇಂಫಾಲ: ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೂವರು ಶಾಸಕರು ಮತ್ತು ಎನ್.ಪಿ.ಪಿ.ಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ.…

ಮಸೀದಿ, ದರ್ಗಾಗಳು ಅನುಸರಿಸಬೇಕಾದ ಕ್ರಮಗಳೇನು?

ಬೆಂಗಳೂರು: ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ಮಸೀದಿ ಹಾಗೂ ದರ್ಗಾಗಳಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ…

ಕೊರೊನಾ ವೈರಸ್ ತನಿಖೆಗೆ ಒಪ್ಪಿಗೆ ಸೂಚಿಸಿತೆ ಚೀನಾ?

ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆಗೆ ಚೀನಾ ಒಪ್ಪಿಕೊಂಡಿದೆಯೇ? ಎಂಬ ಪ್ರಶ್ನೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಿವೋ ಲಿಜಿಯಾನ್ ಪ್ರತಿಕ್ರಿಯಿಸಿದ್ದಾರೆ.

12ನೆ ತರಗತಿಯಲ್ಲಿ ಕೆಮಿಸ್ಟ್ರಿಯಲ್ಲಿ 24 ಅಂಕ: ತನ್ನ ಅಂಕಪಟ್ಟಿ ಸಮೇತ ಟ್ವೀಟ್ ಮಾಡಿದ ಐಎಎಸ್ ಅಧಿಕಾರಿ

ಅಂಕಗಳೇ ಎಲ್ಲವನ್ನೂ ನಿರ್ಧರಿಸುವುದಿಲ್ಲ ಎಂದು ಐಎಎಸ್  ಅಧಿಕಾರಿ ಮಾಡಿದ ಟ್ವೀಟ್ನಿಂದ ಸಾವಿರಾರು ಫೇಲಾದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ…