ಬೆಂಗಳೂರು: ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಚ್ಚಿದ್ದ ಶಾಲಾ – ಕಾಲೇಜುಗಳನ್ನು ಮರಳಿ ತೆರೆಯುವ ಚಿಂತನೆ ನಡೆದಿದೆ.

ಶೇ. 30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ. ಜೊತೆಗೆ ಗ್ರೀನ್, ಆರೇಂಜ್ ಜೋನ್ ಗಳಲ್ಲಿರುವ ಶಾಲೆಗಳ ಆರಂಭ ಮಾಡುವ ಸಾಧ್ಯತೆ ಇದೆ. ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೇ. 31ರ ನಂತರ ಕೇಂದ್ರ ಸರ್ಕಾರದ ನಿಯಮಗಳನ್ನು ನೋಡಿಕೊಂಡು ಶಾಲೆಗಳ ಪ್ರಾರಂಭದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ 6 ರಿಂದ 10ನೇ ತರಗತಿಗಳನ್ನು ಪ್ರಾರಂಭಿಸಬಹುದು. ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆ ಮಾಡಿ ಶಾಲೆ ಪ್ರಾರಂಭಿಸಬುಹುದು. 3 ದಿನಗಳ ಒಂದು ಬ್ಯಾಚ್ ನಂತೆ ವಿದ್ಯಾರ್ಥಿಗಳ ಬ್ಯಾಚ್ ಮಾಡಬಹುದು.

Leave a Reply

Your email address will not be published. Required fields are marked *

You May Also Like

ಯಲಗೂರ ಶಕ್ತಿಮಾನಗೆ ಭಕ್ತರ ಭಕ್ತಿಮಾನ ಸಮರ್ಪಣೆ- ಕಾತಿ೯ಕೋತ್ಸವ ಸಂಭ್ರಮ ಏಳೂರು ಒಡೆಯನ ಸನ್ನಿಧಿಯಲ್ಲಿ ಭಕ್ತಿ ಪರಾಕಾಷ್ಠೆ – ಮಿಂದೆದ್ದ ಜನಸಾಗರ

ಸಚಿತ್ರ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಕೃಷ್ಣೆಯ ತೀರದ ಪ್ರಾಕೃತಿಕ ಪರಿಮಳದ ಹಸಿನೆಲದ ಸುವಾಸನೆಯಲ್ಲಿ…

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಹಲವು ಜಿಲ್ಲೆಗಳಲ್ಲಿ ಸಾರಿಗೆ ಇಲಾಖೆ ಕಚೇರಿ ಆರಂಭ!

ಗೃಹ ಸಚಿವಾಲಯದಿಂದ ಲಾಕ್‌ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಸಿರು ವಲಯಕ್ಕೊಳಪಡುವ 14 ಜಿಲ್ಲೆಗಳಲ್ಲಿ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.