ಕೊರೊನಾ ಹಾವಳಿಯ ಮಧ್ಯೆಯೇ ಶಾಲೆಗಳು ಆರಂಭವಾಗಲಿವೆಯೇ?

ಬೆಂಗಳೂರು: ದೇಶದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಜನ ಜೀವನ ಎಂದಿನಂತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಚ್ಚಿದ್ದ ಶಾಲಾ – ಕಾಲೇಜುಗಳನ್ನು ಮರಳಿ ತೆರೆಯುವ ಚಿಂತನೆ ನಡೆದಿದೆ.

ಶೇ. 30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ. ಜೊತೆಗೆ ಗ್ರೀನ್, ಆರೇಂಜ್ ಜೋನ್ ಗಳಲ್ಲಿರುವ ಶಾಲೆಗಳ ಆರಂಭ ಮಾಡುವ ಸಾಧ್ಯತೆ ಇದೆ. ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೇ. 31ರ ನಂತರ ಕೇಂದ್ರ ಸರ್ಕಾರದ ನಿಯಮಗಳನ್ನು ನೋಡಿಕೊಂಡು ಶಾಲೆಗಳ ಪ್ರಾರಂಭದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ 6 ರಿಂದ 10ನೇ ತರಗತಿಗಳನ್ನು ಪ್ರಾರಂಭಿಸಬಹುದು. ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆ ಮಾಡಿ ಶಾಲೆ ಪ್ರಾರಂಭಿಸಬುಹುದು. 3 ದಿನಗಳ ಒಂದು ಬ್ಯಾಚ್ ನಂತೆ ವಿದ್ಯಾರ್ಥಿಗಳ ಬ್ಯಾಚ್ ಮಾಡಬಹುದು.

Exit mobile version