ಗದಗ: ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಅವರು ನಗರದ ತೋಂಟದಾರ್ಯ ಮಠದಲ್ಲಿ, ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲ್ಲಿ ನಡೆದ ಅಂತರಾಷ್ಟಿಯ ಮಹಿಳಾ ದಿನಾಚರಣೆ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವಾರ್ಷಿಕೋತ್ಸವ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತ ಕಷ್ಟಗಳಿಗೆ ಹೆದರದೇ ಅದನ್ನು ಮೆಟ್ಟಿನಿಂತು ಬದುಕಬೇಕು. ಅದಕ್ಕಾಗಿ ರೈತ ಜಮೀನಿನಲ್ಲಿ ಮಿಶ್ರೀತ ಬೆಳಗಳು ಬೆಳೆಯುವಲ್ಲಿ ಮುಂದಾಗಬೇಕು. ರೈತನೂ ಕೂಡ ಕೋಟಿಯಲ್ಲಿ ಮಾತನಾಡುವ ಸಮಯ ಬರಬೇಕು. ಆಗಲೇ ಅವರ ಮಕ್ಕಳು, ಮೊಮ್ಮಕ್ಕಳು ಅವರನ್ನು ಚೆನ್ನಾಗಿ ನೊಡಿಕೊಳ್ಳುತ್ತಾರೆ. ಯಾವ ಮನುಷ್ಯ ಕೆಳಗೆ ಬೀಳುತ್ತಾನೋ ಅವನು ಜೀವನದಲ್ಲಿ ಗೆಲುವು ಕಾಣುತ್ತಾನೆ. ಜೀವನದಲ್ಲಿ ಸ್ವತಃ ಏಳುವುದು ಕಲಿಯಲಾರಂಭಿಸಬೇಕು. ಒಂದೆರಡು ಬಾರಿ ಕೆಳಗೆ ಬಿದ್ದು ಏನನ್ನಾದರು ಸಧಿಸಲೇಬೇಕು ಎಂದು ಮೇಲೇಳುವ ಮನುಷ್ಯ ಮುಂದೆಂದು ಬೀಳುವುದಿಲ್ಲ ಎಂದರು.

ಸಾಧ್ಯ ಎಂದು ಮುನ್ನುಗ್ಗಿ

ಜೀವನದಲ್ಲಿ ಇನ್ಮುಂದೆ ಬದುಕು ಇಲ್ಲವೆಂದುಕೊಂಡ ನಾನು, ಭೂಮಿಯಲ್ಲಿ ದುಡಿಯಲಾರಂಭಿಸಿದೆ. ಈಗ ದೇಶದ ಬೇರೆ ಬೇರೆ ರಾಜ್ಯಗಳಿಗೆ ಶ್ರೀಗಂಧದ ಸಸಿಗಳನ್ನು ನೀಡುತ್ತಿದ್ದೇನೆ. ಯಾವುದೇ ಕೆಲಸ ಸಣ್ಣದಲ್ಲ, ಹಾಗೆಯೇ ದೊಡ್ಡದು ಅಲ್ಲ. ನೀವು ಯಾವ ಕೆಲಸ ಮಾಡುತ್ತಿರೋ ಅದರಲ್ಲಿ ಶೃದ್ಧೆ ಇರಲಿ. ನೀವು ಏನೇ ಕೆಲಸ ಮಾಡಿದರೂ ಸ್ವಾಭಿಮಾನದಿಂದಾಗಿರಲಿ. ಸ್ವಾಭಿಮಾನ ಎನ್ನುವುದು ಹುಟ್ಟಿನಿಂದ ಬಂದಿರುತ್ತದೆ. ಜೀವನದಲ್ಲಿ ಯಾವಾಗಲು ನನ್ನಿಂದ ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕೂರಬೇಡಿ. ನನ್ನಿಂದ ಸಾಧ್ಯ ಎಂದು ಮುನ್ನಡೆಯಿರಿ. ಆಗಲೇ ಎಲ್ಲವನ್ನು ಸಾಧಿಸುವಿರಿ.

-ಕವಿತಾ ಮಿಶ್ರಾ, ಕೃಷಿಕ ಮಹಿಳೆ

ಪ್ರತಿ ಅಗಳು ಬೆಳೆಯುವುದರಲ್ಲಿ ರೈತ ತನ್ನ ರಕ್ತವನ್ನೇ ಸುರಿಸಿರುತ್ತಾನೆ. ಹೀಗಾಗಿ ಅನಗತ್ಯವಾಗಿ ಆಹಾರ ತಟ್ಟೆಗೆ ಹಾಕಿಕೊಂಡು ಕೆಡೆಸಬಾರದು. ರೈತರು ಚಳಿ, ಬಿಸಿಲು ಎನ್ನದೇ ಜೀವನ ಸಾಗಿಸುತ್ತಾರೆ. ಅಂತವರಿಂದಲೇ ದೇಶ ಇನ್ನು ಉಳಿದುಕೊಂಡಿದೆ. ರೈತನು ಇಲ್ಲದಿದ್ದರೇ ದೇಶ ಇರುತ್ತಿರಲಿಲ್ಲ. ಹೆಣ್ಣು ಮಗಳ ಜೀವನದಲ್ಲಿ ತಂದೆ, ಗಂಡ, ಮಗ ಹೀಗೆ ಮೂರು ರೀತಿಯಲ್ಲಿ ಗಂಡಿನ ಆಗಮನವಿದೆ. ಗಂಡಸರು ತಾಯಿ, ಹೆಂಡತಿ, ಮಗಳಿಗೆ ನೀಜವಾದ ಗೌರವ ಪ್ರೀತಿ, ಕೊಟ್ಟರೆ, ಜಗತ್ತಿನಲ್ಲಿ ವೃದ್ಧಾಶ್ರಮಗಳೇ ಇರುತ್ತಿರಲಿಲ್ಲ. ಜಗತ್ತನ್ನು ಸೃಷ್ಠಿ ಮಾಡುವ ಶಕ್ತಿ ಹೆಣ್ಣಿಗೆ ಮಾತ್ರ ಸಾಧ್ಯ. ಹಾಗೆ ಜಗತ್ತನ್ನು ನಡುಗಿಸುವ ಶಕ್ತಿಯೂ ಅವಳಿಗಿದೆ. ಆದ್ದರಿಂದ ಹೆಣ್ಣು ಮಕ್ಕಳು ಹಿಂಜರಿಯದೆ ಜೀವನದಲ್ಲಿ ಮುಂದೆ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಲಲಿತಾ ಉಮನಾಬಾದಿ ಧರ್ಮಗ್ರಂಥ ಪಠಣ ಮಾಡಿದರು. ಉಮಾ ಕವಳಿಕಾಯಿ ವಚನ ವಾಚಿಸಿದರು. ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಸದಸ್ಯೆಯರು ಜಾನಪದ ಗೀತೆ ಹಾಡಿದರು. ಎಸ್‌ವೈಬಿಎಂಎಸ್ ಯೋಗ ಪಾಠಶಾಲೆಯ ಮಹಿಳಾ ಸದಸ್ಯರಿಂದ ಯೋಗ ಪ್ರದರ್ಶನ ನಡೆಯಿತು. ಸಂಜನಾ ಹಾಗೂ ಸಂಗಡಿಗರು ಕರಾಟೆ ಪ್ರದರ್ಶನ ನೀಡಿದರು. ಇದೇ ವೇಳೆ ಮಹಿಳಾ ದಿನಾಚರಣೆ ನಿಮಿತ್ಯ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿಜೆತರಿಗೆ ಬಹುಮಾನ ವಿತರಿಸಲಾಯಿತು.

ಜ.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಶಾಲಾಕ್ಷಿ ಕುರಗೋಡ, ಶ್ರೀದೇವಿ ಶೆಟ್ಟರ್, ಸುಮಾ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.

ದೇಶವೇ ಕೋವಿಡ್ ನಿಂದ ಬಳಲುತ್ತಿರುವಾಗ ಪ್ರಧಾನಿ ಮೋದಿ ಬೇಜವಾಬ್ದಾರಿ ಹೇಳಿಕೆ ನಿಡುವುದು ಎಷ್ಟರ ಮಟ್ಟಿಗೆ ಸರಿ

ಕೊರೋನಾ ವಿಪತ್ತಿನಿಂದ ಭಾರತ ರಕ್ಷಿಸಿ ಬಿಟ್ಟಿತು ಎಂಬ ಹೇಳಿಕೆಗಳನ್ನು ಪ್ರಧಾನಿ ನರೇಂದ್ರ ಮೊದಿ ಅವರು ಹೇಳಿತ್ತಿರುವುದು ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದಯಾಮಯ್ಯ ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಎಸ್.ಎಸ್.ಎಲ್ಸಿ ಪರೀಕ್ಷೆ ಕುರಿತು ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು!

ಬೆಂಗಳೂರು: ರಾಜ್ಯದಲ್ಲಿ ಜೂನ್‌ 25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ವೇಳಾಪಟ್ಟಿ ಕೂಡ ಬಿಡುಗಡೆಯಾಗಿತ್ತು. ಈಗಾಗಲೇ…