ಕೇರಳ: ಗಡಿಯಿಂದ ರಾಜ್ಯಕ್ಕೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆ ಕಬಿನಿ ಹಿನ್ನೀರಿನ ಮೂಲಕ ಕೇರಳದಿಂದ ಜನರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಕೇರಳಾಗೆ ಕೂಲಿಗಾಗಿ ತೆರಳಿದ್ದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕೇರಳದಿಂದ ಕರ್ನಾಟಕ ಬರುತ್ತಿದ್ದಾರೆ. ಕೇರಳದಿಂದ ವಾಹನದಲ್ಲಿ ಕರೆದುಕೊಂಡು ಬಂದು ಗಡಿವರೆಗೂ ಬಿಟ್ಟು ಹೋಗತ್ತಿದ್ದು, ಆನೆಮಾಳ ಗ್ರಾಮ ನೆಟ್ಕಲ್ ಹುಂಡಿ ಒಡಕನ ಮಾಳ ಗ್ರಾಮದ ಮೂಲಕ ಕಳ್ಳದಾರಿಯಲ್ಲಿ ರಾಜ್ಯ ಪ್ರವೇಶಿಸುತ್ತಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂಲಕ ಜನ ನದಿ ದಾಟುತ್ತಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಕಳ್ಳ ಹಾದಿ ಹಿಡಿದವರಿಗೆ ಅನುಕೂಲವಾಗಿದೆ. ಈ ಮೂಲಕ ಚೆಕ್ ಪೋಸ್ಟ್ ಗಳಿಂದ ಕಾರ್ಮಿಕರು ತಪ್ಪಿಸಿಕೊಂಡು ಬರುತ್ತಿದ್ದಾರೆ.

ಚೆಕ್ ಪೋಸ್ಟ್ ಗಳ ಮೂಲಕ ಬಂದ್ರೆ ತಪಾಸಣೆ ವೇಳೆ ಸಿಕ್ಕಿಬೀಳುವ ಆತಂಕದಿಂದ ಆರೋಗ್ಯ ತಪಾಸಣೆ ಇಲ್ಲದೆ ಹೊರ ರಾಜ್ಯಗಳಿಂದ ಅಕ್ರಮವಾಗಿ ನುಸುಳುತ್ತಿದ್ದಾರೆ. ಜನರ ಈ ಮನಸ್ಥಿತಿಯೂ ಕೊರೋನಾ ಸೋಂಕು ವ್ಯಾಪಕವಾಗಲು ಕಾರಣವಾಗಲಿದೆ. ಈ ರೀತಿ ಜನರು ಅಕ್ರಮವಾಗಿ ನುಸುಳುತ್ತಿರುವುದರಿಂದ ಸುತ್ತಮುತ್ತ ಇರುವ 13 ಹಾಡಿ ಜನಕ್ಕೆ ಆತಂಕ ಶುರುವಾಗಿದೆ.

Leave a Reply

Your email address will not be published. Required fields are marked *

You May Also Like

ದೇವಸ್ಥಾನ ಆರಂಭದ ಬಗ್ಗೆ ಮುಜರಾಯಿ ಸಚಿವರು ಹೇಳಿದ್ದೇನು..?

ಉಡುಪಿ: ನಾಳೆ ಮುಜರಾಯಿ ದೇವಸ್ಥಾನಗಳು ಓಪನ್ ಆಗಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಸೋಮವಾರದಿಂದ ದೇವಸ್ಥಾನ ತೆರೆಯಲು ನಿರ್ಧರಿಸಲಾಗಿತ್ತು. ನಮ್ಮ ಬೇಡಿಕೆಗೆ ಕೇಂದ್ರದ ಸಹಮತದ ನಿರೀಕ್ಷೆ ಇತ್ತು.

ಖಾಸಗಿ ಬಸ್ ಪಲ್ಟಿ 5 ಜನ ಸಾವು 25 ಜನರಿಗೆ ಗಂಭೀರ ಗಾಯ

ತುಮಕೂರು: ಇಂದು ಬೆಳ್ಳಂಬೆಳಿಗ್ಗೆ ಬಾರಿ ದುರಂತವೋಂದು ನಡೆದು ಹೋಗಿದೆ. ಹೌದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ…

ಯುವರಾಜ್ ಸಿಂಗ್ ಗೆ ಮೋಸ ಮಾಡಿದವರು ಯಾರು?

ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಜನ ಚುರಿ ಹಾಕಿದ್ದಾರೆ ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ. ಹಾಗಾದ್ರೆ ಯುವಿ ಬೆನ್ನಿಗೆ ಚೀರಿಹಾಕಿದವರು ಯಾರು ಎನ್ನುವುದೇ ಇಲ್ಲಿ ಮುಖ್ಯ ಪ್ರಶ್ನೆ.

ಮೂರನೇ ಲಾಕ್ ಡೌನ್ ಅಂತ್ಯ – ನಾಲ್ಕರಲ್ಲಿ ಏನಿರತ್ತೆ? ಏನಿರಲ್ಲ?

ನವದೆಹಲಿ: ನಾಳೆ ಮೂರನೇ ಹಂತದ ಲಾಕ್ ಡೌನ್ ಗೆ ಕೊನೆಯ ದಿನ. ಹೀಗಾಗಿ ನಾಲ್ಕನೇ ಹಂತದ…