ಉಡುಪಿ: ಊರಿಗೆ ಕರೆಸಲು ಒತ್ತಾಯ ಬರುವುದು ಸಹಜ. ಇದರಿಂದ ಜನರು ರಾಜಕಾರಣಿಗಳಿಗೆ ಬಯ್ಯೋದು ಕೂಡ ಸಹಜವೇ. ಮುಂಬೈನಲ್ಲಿ ಇರುವವರು ನಮ್ಮ ಸಹೋದರರೇ ಆದರೆ ಇನ್ನು ಮುಂದೆ ಕೋವಿಡ್ ಜೀವನದ ಒಂದು ಭಾಗವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದರು.

ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ಒಪ್ಪಿ ಬರುವವರು ಮಾತ್ರ ವಿಮಾನದಲ್ಲಿ ಬರುತ್ತಾರೆ. ಊರಿಗೆ ಕರೆಸಿಕೊಳ್ಳಲು ಮುಂಬೈ ಕನ್ನಡಿಗರ ಒತ್ತಡ ಸಹಜವಾಗಿಯೇ ಇದೆ. ಮುಂದಿನ ದಿನಗಳಲ್ಲಿ ಒಂದಿಷ್ಟು ಪಾಸಿಟಿವ್  ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು. ಸಮಸ್ಯೆ ಎದುರಿಸಲು ಸರಕಾರ ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

You May Also Like

ನಮ್ಮ ಕರವೇ ಗ್ರಾಮ ಘಟಕ ಉದ್ಘಾಟನೆ

ತಾಲೂಕಿನ ಉಪ್ಪಾರ ಬುದ್ದಿನಿ ಗ್ರಾಮದಲ್ಲಿ ನಮ್ಮ‌ ಕರವೇ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ತಾಲೂಕ ಘಟಕ ನಮ್ಮ ಕರವೇ ಅಧ್ಯಕ್ಷ ಬಸವರಾಜ ಉದ್ಬಾಳ ಅವರು ಮಾತನಾಡಿ, ನಾಡು ನುಡಿ, ಜಲ, ಭಾಷೆ ರಕ್ಷಣೆಗೆ ನಮ್ಮ ಕರವೇ ಕಾರ್ಯಕರ್ತರು ಬದ್ದರಾಗಿರಬೇಕೆಂದು ಹೇಳಿದರು.

ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತುವಂತೆ!: ಅದರ ಮೇಲೆ ಶೇ.18 ಜಿ.ಎಸ್.ಟಿ ಏಕಂತೆ?

ಕೇಂದ್ರ ಸರ್ಕಾರ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತು ಎನ್ನುತ್ತದೆ . ಆದರೆ ತೆರಿಗೆ ಇಲಾಖೆಯು ಅದನ್ನು ‘ಆಲ್ಕೊಹಾಲ್’ ಕೆಟಗರಿಗೆ ಸೇರಿಸಿ ಶೇ.18 ಜಿ.ಎಸ್.ಟಿ ತೆರಿಗೆ ಹೇರಿದ್ದನ್ನು ಸಮರ್ಥಿಸುತ್ತದೆ.

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ರಾಜ್ಯದಲ್ಲಿ ಇನ್ನೆಷ್ಟು ದಿನ ಲಾಕ್ ಡೌನ್?

ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.