ತಿರುಮಲ: ಕೇಂದ್ರ ಸರ್ಕಾರ ಜೂ. 30ರ ವರೆಗೂ ಲಾಕ್ ಡೌನ್ ಘೋಷಣೆ ಮಾಡಿದೆ. ಅಲ್ಲದೇ, ಈ ಬಾರಿ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದ್ದು, ಅದಕ್ಕಾಗಿ ಈ ವಾರವೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.

ಈ ಹಿನ್ನೆಲೆಯಲ್ಲಿ ತಿರುಪತಿ ತಿರುಮಲನ ಭಕ್ತರು ಕೂಡ ದರ್ಶನಕ್ಕಾಗಿ ಹಾತೊರೆಯುತ್ತಿದ್ದಾರೆ. ಕಂಟೈನ್ ಮೆಂಟ್ ಪ್ರದೇಶಗಳ ಹೊರಗೆ ಎಲ್ಲ ರೀತಿಯ ನಿರ್ಬಂಧಗಳಲ್ಲಿ ಸಡಿಲಿಕೆ ಪ್ರಕಟಿಸಿರುವ ಹಿನ್ನಲೆಯಲ್ಲಿ ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಅನುಮತಿಸುವ ಅವಕಾಶವಿದೆ.

ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಳ್ಳಲು ಅನುಸರಿಸಬೇಕಾದ ವಿಧಿ ವಿಧಾನಗಳ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ಕಸರತ್ತು ಪೂರ್ಣಗೊಳಿಸಿದ್ದಾರೆ. ಸೀಮಿತ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅನುಮತಿ ನೀಡಲು ಏರ್ಪಾಟು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಭಯದ ಜೊತೆಗೆ ಶುರುವಾಯ್ತು ಡೆಂಗ್ಯೂ ಭಯ.!

ಬೆಂಗಳೂರು : ಸದ್ಯ ಕೊರೊನಾ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದರ ಮಧ್ಯೆಯೇ ಡೆಂಗ್ಯೂ ಜನರ…

ಕೊರೊನಾ ನಂತರ 16 ಸಾಂಕ್ರಾಮಿಕ ಕಾಯಿಲೆ ಭಯ..!

ಈಗಾಗಲೇ ಕೊರೊನಾದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿತ್ತು. ಇನ್ನೇನು ಕೊರೊನಾ ನಿಯಂತ್ರಣಕ್ಕೆ ಬಂ ತು ಎನ್ನುವಷ್ಟರಲ್ಲಿ ಈಗ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಆತಂಕದ ಮದ್ಯೆ ಕರೋನಾ ವೈರಸ್ ನಂತರ 16 ಕಾಯಿಲೆಗಳು ವರದಿಯಾಗಿವೆ.

ಬೀದಿಗೆ ಬಂದ ಕಾರ್ಮಿಕರು…!

ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸಕ್ಕರೆ ಕಾರ್ಖಾನೆಯೊಂದರ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ.

ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ!

ಬೆಂಗಳೂರು : ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಕೊರೊನಾ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ…