ಬೆಂಗಳೂರು: ಲಾಕ್ ಡೌನ್ ಉದ್ದೇಶ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದು. ವಾಣಿಜ್ಯ ಸೇರಿದಂತೆ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗುವುದರಿಂದ ಆರ್ಥಿಕತೆಯಲ್ಲಿ ಹಿನ್ನಡೆ ಸಹಜ.

ವಿಶ್ವಬ್ಯಾಂಕಿನ ಮಾಜಿ ಉಪಾಧ್ಯಕ್ಷ, ಕಾರ್ನೆಲ್ ವಿವಿ ಪ್ರೊಫೆಸರ್ ಕೌಶಿಕ್ ಬಸು

ಆದರೆ ದೇಶದಲ್ಲಿ ಘೋಷಿಸಲ್ಪಟ್ಟ ಅಥವಾ ಏಕಾಏಕಿ ಹೇರಲ್ಪಟ್ಟ ಲಾಕ್ ಡೌನ್ ಫಲಿತಾಂಶದಿಂದ ಸೋಂಕು ನಿಯಂತ್ರಣ ಸಾಧ್ಯವಾಗಲಿಲ್ಲ. ಇನ್ನೊಂದು ಕಡೆ ಆರ್ಥಿಕತೆ ನಿರೀಕ್ಷೆಗಿಂತ ಕೆಳಕ್ಕೆ ಇಳಿಯಿತು. ವಲಸಿಗ ಕಾರ್ಮಿಕರ ಪಾಡಂತೂ ಹಸವಿನೊಂದಿಗಿನ ಸಮರವಾಗಿತ್ತು.

ವಿಶ್ವಬ್ಯಾಂಕಿನ ಮಾಜಿ ಉಪಾಧ್ಯಕ್ಷ, ಕಾರ್ನೆಲ್ ವಿವಿ ಪ್ರೊಫೆಸರ್ ಕೌಶಿಕ್ ಬಸು ಈ ಒಟ್ಟು ವಿಫಲತೆಯನ್ನು ವಿವರಿಸುವುದು ಹೀಗೆ: ‘ಸೋಂಕಿನ ಸಂಖ್ಯೆಯ ಬದಲು, ಸಾವಿನ ಸಂಖ್ಯೆಯನ್ನು ಮಾನದಂಡವಾಗಿ ತೆಗೆದುಕೊಂಡಾಗ ಮತ್ತು ಇದನ್ನು ಆಯಾ ದೇಶದ ಜನಸಂಖ್ಯೆಗೆ ಸಮೀಕರಿಸಿದಾಗ, ಭಾರತ, ಚೀನಾ ಸೇರಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಸೋಂಕಿನ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದು ಕಂಡು ಬರುತ್ತದೆ. ಆದರೆ ಈ ದೇಶಗಳ ಪೈಕಿ, ಭಾರತದ ಸಾಧನೆ ಮಾತ್ರ ತೀರಾ ಕೆಟ್ಟದಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಎಷ್ಟು ಕೋವಿಡ್ ಸಾವು ಎಂಬ ಮಾನದಂಡದಲ್ಲಿ ನೋಡಿದಾಗ, ಭಾರತವು ಚೀನಾ, ಇಂಡೋನೇಷಿಯಾ, ಶ್ರೀಲಂಕಾ, ನೇಪಾಳ್, ಬಾಂಗ್ಲಾದೇಶ, ಮಲೇಶಿಯಾ ಮತ್ತು ಇತರ ಅನೇಕ ದೇಶಗಳಿಗಿಂತ ಭಾರತ ತುಂಬ ಹಿಂದಿದೆ. ಆಫ್ರಿಕಾದ ಬಹುಪಾಲು ದೇಶಗಳು ಭಾರತಕ್ಕಿಂತ ಉತ್ತಮವಾಗಿ ನಿಯಂತ್ರಣ ಮಾಡಿವೆ, ಅಲ್ಲಿ ಮರಣದರ ಭಾರತಕ್ಕಿಂತ ಕಡಿಮೆಯಿದೆ.

ಮುಂದುವರೆದು ಕೌಶಿಕ್ ಬಸು ಹೇಳುತ್ತಾರೆ, ‘ಸೋಂಕು ನಿಯಂತ್ರಣಕ್ಕೆ ಲಾಕ ಡೌನ್ ಅಗತ್ಯ. ಆದರೆ ಅದನ್ನು ನಮ್ಮ ದೇಶಕ್ಕೆ ಹೊಂದುವಂತೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕಿತ್ತು. ಮಾರ್ಚ್ 24ರಂದು ಏಕಾಏಕಿ ಘೋಷಣೆ ಮಾಡಿದ ಲಾಕ್ ಡೌನ್ ಕಾರಣದಿಂದ ಸೋಂಕು ಕಡಿಮೆಯಾಗುವ ಬದಲು, ಹೆಚ್ಚತೊಡಗಿತು. ಘೋಷಣೆಗೂ ಮೊದಲು ಪೂರ್ವ ತಯಾರಿ ಏನು ಮಾಡಿಕೊಂಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಆದರೆ ಲಾಕ್ ಡೌನ್ ನಿರ್ವಹಣೆ ತುಂಬ ಕೆಟ್ಟದಾಗಿತ್ತು. ಲಾಕ್ ಡೌನಿನ ಎರಡು ವಾರದ ನಂತರ ಸೋಂಕು ದರ ಏರತೊಡಗಿತು. ಆಗಿನಿಂದ ಅದು ಎಚ್ಚರಿಕೆಯ ಗಂಟೆಯೇ ಆಗಿದೆ ಎಂದು ಕೌಶಿಕ್ ಬಸು ಹೇಳುತ್ತಾರೆ.

Leave a Reply

Your email address will not be published. Required fields are marked *

You May Also Like

ಶಿವಮೊಗ್ಗ : ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ..!

ದಾವಣಗೆರೆ: ಜಿಲ್ಲೆ ಚನ್ನಗಿರಿಯ 56 ವರ್ಷ ಮಹಿಳೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅನಾರೋಗ್ಯದ ನಿಮಿತ್ತ ಮಹಿಳೆ…

ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 322 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9721…

ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡುತ್ತಿದೆ ಭಾರತ?

ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ…

ಶೈಕ್ಷಣಿಕ ವರ್ಷ ಯಾವಾಗ ಅಂತಾ ಸೂಕ್ತ ತೀರ್ಮಾನ

ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎಂಬ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನದ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.