ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಅಟೋ, ಟ್ಯಾಕ್ಸಿ ಚಾಲಕರಿಗೆ 5000 ಸಹಾಯ ಧನ ಘೋಷಣೆ ಮಾಡಿದೆ. ಆದರೆ ಘೋಷಣೆ ಆಗಿ 15 ದಿನಗಳು ಆಗುತ್ತಾ ಬಂದರೂ ಸರ್ಕಾರ ಮಾತ್ರ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರಲಿಲ್ಲ.

ಇದೀಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಆದರೆ ಹಲವು ತಾಂತ್ರಿಕ ಕಾರಣದಿಂದ ಎಲ್ಲಿ ಸರ್ಕಾರದ ಸೌಲಭ್ಯದಿಂದ ತಾವು ವಂಚಿತರಾಗುತ್ತಾರೋ ಎನ್ನುವ ಆತಂಕ ಆಟೋ,ಟ್ಯಾಕ್ಸಿ ಚಾಲಕರನ್ನು ಕಾಡುತ್ತಿದೆ.

ಸರ್ಕಾರದ ನೆರವಿನ ಬಗ್ಗೆ ಆಸೆಗಣ್ಣುಗಳಿಂದ ಕಾಯುತ್ತಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಪರದಾಡುವಂತಾಗಿದೆ. ಎಲ್ಲಾ ಮಾಹಿತಿಯನ್ನೂ ಇಂಗ್ಲಿಷ್‌ನಲ್ಲಿಯೇ ನೀಡಬೇಕು. ಜೊತೆಗೆ ಆಧಾರ್, ಚಾಲನಾ ಪರವಾನಗಿ ನಂಬರ್, ವಾಹನ ನೋಂದಣಿ ಸಂಖ್ಯೆ, ಚಾಸ್ಸಿಸ್‌ ನಂಬರ್ ಎನ್ನವನ್ನೂ ನಮೂದು ಮಾಡುವುದು ಕಷ್ಟದಾಯಕವಾಗಿದೆ. ಒಮ್ಮೆ ಮೊಬೈಲ್ ಸಂಖ್ಯೆ ನಮೂದು ಮಾಡಿದಾಗ ಒಟಿಪಿ ಸಂಖ್ಯೆ ಬರುತ್ತದೆ. ಮತ್ತೆ ಅರ್ಜಿ ಸಲ್ಲಿಸುವುದು ತಡವಾದರೆ ಸೆಷನ್ ಕ್ಲೋಸ್ ಆಗುತ್ತಿದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ಅಷ್ಟೊಂದು ಆಂಗ್ಲ ಭಾಷಾ ನೈಪುಣ್ಯರೇ..? ಒಂದು ವೇಳೆ ಸೈಬರ್ ಸೆಂಟರ್ ಬಳಿಗೆ ಹೋಗಿ ಸಾಲುಗಟ್ಟಿ ಅರ್ಜಿ ಹಾಕಿಸಬಹುದು. ಆದರೆ ಸಾಮಾಜಿಕ ಅಂತರ ಎನ್ನುವುದು ಮರಿಚಿಕೆ ಆಗುವುದಿಲ್ಲವೇ..? ಅದೇ ಕಾರಣಕ್ಕಾಗಿ ಅಲ್ಲವೇ ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಿರುವುದು.

ರಾಜ್ಯದಲ್ಲಿ ಅಂದಾಜು ಮೂರೂವರೆ ಲಕ್ಷ ಆಟೋ ಚಾಲಕರು ಇದ್ದು, ಟ್ಯಾಕ್ಸಿ ಚಾಲಕರು ಸೇರಿದಂತೆ ಒಟ್ಟು 7 ಲಕ್ಷದ 75 ಸಾವಿರ ಜನರು ಚಾಲನಾ ವೃತ್ತಿಯಲ್ಲಿದ್ದಾರೆ ಎನ್ನುವುದು ಸರ್ಕಾರದ ಅಂದಾಜು. ಪ್ರತಿದಿನ ಆಟೋ, ಟ್ಯಾಕ್ಸಿ ಓಡಿಸಿದರೆ ಮಾತ್ರ ಆದಾಯದ ಮೂಲ ನೋಡುತ್ತಿದ್ದ ಆಟೋ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಸರ್ಕಾರದ ಆದೇಶ ಇವರಲ್ಲಿ ಕೊಂಚ ಭರವಸೆ ಮೂಡಿಸಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ತಲೆನೋವಾಗಿ ಪರಿಣಮಿಸಿದೆ.  

ಅರ್ಜಿ ಸಲ್ಲಿಸಲು ಸುಲಭ ಮಾರ್ಗವನ್ನೂ ಕಲ್ಪಿಸಿ. ಒಂದು ವೇಳೆ ಅರ್ಜಿಯನ್ನೂ ಸಂಪೂರ್ಣ ಭರ್ತಿ ಮಾಡಿ ಸಲ್ಲಿಕೆ ಮಾಡಿದಾಗ ನಿಮ್ಮ ಹೆಸರು ಅದಲು ಬದಲಾಗಿದೆ. ಆಧಾರ್ ಕಾರ್ಡ್ ಅಪ್ಲೋಡ್ ಮಾಡಿ ಎಂದು ಕೇಳುತ್ತದೆ. ಆದರೆ ಅಪ್ಲೋಡ್ ಮಾಡುವುದು ಎಲ್ಲಿ ಎಂದು ತೋಚದಂತಾಗಿದೆ. ಇಲ್ಲದಿದ್ದರೆ, ಒಮ್ಮೆಗೆ ಎಲ್ಲಾ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ ಎಂದರೂ ಪರವಾಗಿಲ್ಲ. ಆದರೆ ಜನರಿಗೆ ಸುಲಭವಾಗಿ ಆಗುವಂತಿದ್ದರೆ ಉತ್ತಮವಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ನಾವು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಟೋ ಹಾಗೂ ಟ್ಯಾಕ್ಸಿ ಚಾಲಕರ ಮನವಿಯಾಗಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ- ಸಿ.ಸಿ.ಪಾಟೀಲ್

ಕೊರೋನಾದ ಪರಿಣಾಮದಿಂದ ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ, ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ, ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಈ ನಟಿಗೆ ಸಹಾಯ ಮಾಡಿದ ಮೇಕಪ್ ಮ್ಯಾನ್!

ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಜೆ ರದ್ದುಗೊಳಿಸಿ ಜೂ.19ರವರೆಗೆ ಸುಪ್ರೀಂ ಕೋರ್ಟ್ ಕಾರ್ಯ

ಇದೀಗ ಸುಪ್ರೀಂ ಕೋರ್ಟ್‌ ಕೂಡ ತಮ್ಮ ರಜೆಯನ್ನು ರದ್ದುಗೊಳಿಸಿ ಜೂನ್‌ 19ರ ವರೆಗೆ ಕಾರ್ಯನಿರ್ವಹಿಸಲಿದೆ.

ವಲಸಿಗರ ರೈಲ್ವೇ ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ: ಸೋನಿಯಾಗಾಂಧಿ

ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸಿಗರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.