ರೋಣ: ಕೊರೋನಾದ ಪರಿಣಾಮದಿಂದ  ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ. ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ,  ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಅವರು ತಾಲೂಕಿನ ಸಂದಿಗವಾಡ ಹಾಗೂ  ಮಲ್ಲಾಪುರ  ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಮ್ಮ ದೇಶದ ಆರ್ಥಿಕ ಬಿಕ್ಕಟ್ಟು ಅನುಭವಿಸಬೇಕಾಗಿದೆ. ಅಷ್ಟೇ ಅಲ್ಲಾ ಆರ್ಥಿಕವಾಗಿ ಸುಮಾರು ಇಪತ್ತು ವರ್ಷ ಹಿಂದೆ ಹೋಗಿದೆ. ಹೀಗಾಗಿ ಅನೇಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಸಹಕಾರ ಬಹಳಷ್ಟು ಮುಖ್ಯ ಎಂದು ಮನವಿ ಮಾಡಿಕೊಂಡರು. ರಾಜ್ಯದಲ್ಲಿ ಗದಗ ಜಿಲ್ಲೆ ಕರೋನ ನಿಯಂತ್ರಣದಲ್ಲಿ ಮುಂದಿದೆ. ಮುಂಜಾಗ್ರತೆ ಕ್ರಮ ಅನುಸರಿಸದೆ ಹೋದರೆ ನಾವು ಕಾಯ್ದುಕೊಂಡ ಶಿಸ್ತು ಕ್ರಮ ಹಾಳಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಪ್ರಭ ಬಲದಂಡೆ ಕಾಮಗಾರಿಯು ಸುಮಾರು 21 ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ಈಗ ಈ ಕಾಲುವೆಗೆ ಮುಖ್ಯಮಂತ್ರಿಗಳು 21ಕೋಟಿ ಅನುದಾನ ನೀಡಿ, ಕಾಮಗಾರಿಗೆ ಚಾಲನೆಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಕಾಲುವೆಯಿಂದ ಮಲ್ಲಾಪುರ,  ಬೆಳವಣಿಕಿ, ಸಂದಿಗವಾಡ, ಹೊನ್ನಾಪುರ, ಕದಡಿ, ಅರಹುಣಸಿ ಹುಲ್ಲೂರ, ಈ ಎಲ್ಲಾ ಗ್ರಾಮದ ರೈತರಿಗೆ ಅತೀ ಉಪಯೋಗವಾಗುವದು ಎಂದರು.

ಈ ವೇಳೆ ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿಯಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯರು ಶಿವಕುಮಾರ್ ನೀಲಗುಂದ, ತಾಪಂ ಸದಸ್ಯರಾದ ರಾಮನಗೌಡ ಪಾಟೀಲ್, ವಿರೂಪಾಕ್ಷ ಪಾಟೀಲ್, ಶಂಕ್ರಪ್ಪ ಕಳೆಗನ್ನವರ , ಮುತ್ತಣ್ಣ ಜಂಗಣ್ಣವರ, ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಪ್ರಭಾಕರ ಟಿ, ಮಲ್ಲಾಪುರ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಭಾರತ ಮನು ಕುಲದ ಒಳಿತಿಗಾಗಿ ಶ್ರಮಿಸುತ್ತಿದೆ – ಮೋದಿ

ಇಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ 6 ತಿಂಗಳ ಕೋವಿಡ್ ರಿಸ್ಕ್ ಭತ್ಯೆ

ಬೆಂಗಳೂರು: ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮೊದಲ ಅಲೆಯಲ್ಲಿ ನೀಡಲಾಗಿದ್ದ ಕೋವಿಡ್ ರಿಸ್ಕ್ ಭತ್ಯೆಯನ್ನು ನಿಲ್ಲಿಸಲಾಗಿತ್ತು. ಆದರೆ ಇದೀಗ ಮತ್ತೆ ಸರ್ಕಾರ ಕೋವಿಡ್ ರಿಸ್ಕ್ ಭತ್ಯೆಯನ್ನು ಆರು ತಿಂಗಳ ಕಾಲ ನೀಡಲು ಮುಂದಾಗಿದೆ.

78 ವರ್ಷದ ಅಜ್ಜ ಮದುವೆಯಾಗಿದ್ದು 17 ವರ್ಷದ ಹುಡುಗಿಯನ್ನು!! ಮುಂದೆ ನಡೆದಿದ್ದೇನು?

ಜಕಾರ್ತಾ : 78 ವರ್ಷದ ಅಜ್ಜ 17ರ ಹುಡುಗಿಯನ್ನು ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಆದರೆ ವಿವಾಹವಾದ ಕೇವಲ 22 ದಿನಗಳಲ್ಲಿ ವಿಚ್ಛೇದನ ಪಡೆದಿದ್ದಾರೆ. ಅದೂ ಸಹ 78 ವರ್ಷದ ಅಜ್ಜನೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ವಿಶೇಷ.

ಬಸವ ತತ್ವ, ಧರ್ಮಸೂತ್ರ ಪರಿಪಾಲಿಸಿ ಭವ್ಯ ಹಿಂದು ಧರ್ಮ ಉಳಿವಿಗೆ ಸಂಕಲ್ಪ ಮಾಡಿ- ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ

ಆಲಮಟ್ಟಿ: ಪವಿತ್ರ ಬಸವ ಭೂಮಿಯ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಪೂರ್ಣ ತೊಲಗಿಲ್ಲ. ಕಂದಾಚಾರ,ಅನಾಚಾರ,ಮೂಡನಂಬಿಕೆಗಳಂಥ ಮೌಢ್ಯಗಳು ಅಲ್ಲಲ್ಲಿ…