ಮುಂಬಯಿ: ಕೊರೊನಾ ಲಾಕ್ಡೌನಿಂದಾಗಿ ದೇಶದ ಪ್ರತಿಯೊಬ್ಬರೂ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಿರುತೆರೆಯ ನಟಿಯೊಬ್ಬರು ಹೊರತಾಗಿಲ್ಲ. ಅಲ್ಲದೇ, ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೀರಿಯಲ್, ರಿಯಾಲಿಟಿ ಶೋಗಳಿಂದ ಖ್ಯಾತಿ ಪಡೆದಿರುವ ಸೋನಾಲ್ ವೆಂಗುರ್ಲೇಕರ್ ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸ್ವಂತ ಸೋನಾಲ್ ಇನ್ಸ್ಟಾ ಗ್ರಾಂನಲ್ಲಿ ಹೇಳಿಕೊಂಡಿದ್ದರು. ಲಾಕ್ಡೌನಿಂದಾಗಿ ಮುಂದಿನ ತಿಂಗಳು ಜೀವನ ನಡೆಸಲು ನನ್ನ ಬಳಿ ಹೆಚ್ಚು ಹಣವಿಲ್ಲ. ನಿರ್ಮಾಪಕರು, ಗೆಳೆಯರು ನನಗೆ ಕೊಡಬೇಕಾದ ಹಣ ಮರಳಿ ಕೊಟ್ಟಿಲ್ಲ. ಹೀಗಾಗಿ ನಾನು ತೀವ್ರವಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದೇನೆ. ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಮೇಕಪ್ ಮ್ಯಾನ್ ನನಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ನನ್ನ ಮೇಕಪ್ ಮ್ಯಾನ್ ನನಗೆ ಹಣ ಸಹಾಯ ಮಾಡುವುದಾಗಿ ಹೇಳಿದರು. ಅವರ ಪತ್ನಿ ಗರ್ಭಿಣಿ ಆಗಿದ್ದು, ಆತನ ಬಳಿ ಹೆಚ್ಚು ಹಣವಿಲ್ಲದಿದ್ದರೂ ನನಗೆ ಹಣ ನೀಡುವುದಾಗಿ ಹೇಳಿದ್ದಾರೆ. ಮೇಡಂ ನನ್ನ ಬಳಿ ರೂ. 15 ಸಾವಿರ ಹಣ ಇದೆ. ಈಗ ನಿಮಗೆ ಅಗತ್ಯವಿದ್ದರೆ ತೆಗೆದುಕೊಳ್ಳಿ. ನನ್ನ ಪತ್ನಿ ಗರ್ಭಿಣಿ ಆಕೆಯ ಹೆರಿಗೆ ಸಮಯದಲ್ಲಿ ಹಣವನ್ನು ವಾಪಸ್ ಕೊಡಿ ಎಂದು ಮೇಪಕ್ ಮ್ಯಾನ್ ಸಂದೇಶ ಕಳಿಸಿದ್ದಾರೆ. ಅದನ್ನು ಓದಿ ನಾನು ಅತ್ತು ಬಿಟ್ಟೆ ಎಂದು ಸೋನಾಲ್ ಹೇಳಿದ್ದಾರೆ.

ನನಗೆ ಲಕ್ಷಾಂತರ ಹಣ ಕೊಡಬೇಕಾದವರು ಈ ಸಂದರ್ಭದಲ್ಲಿ ನನ್ನ ಫೋನ್ ರಿಸೀವ್ ಮಾಡುತ್ತಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಿದ ಹಣವನ್ನು ನನಗೆ ಕೊಡುತ್ತಿಲ್ಲ. ಆದರೆ ನನ್ನ ಮೇಕಪ್ ಮ್ಯಾನ್ ಪಂಕಜ್ ಗುಪ್ತಾ ನಮ್ಮ ಕುಟಂಬದಲ್ಲಿ ಒಬ್ಬರಂತೆ. ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತೇನೆ ಮುಂದು ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಮಯ ಪ್ರಜ್ಞೆ ಮರೆತ ಪೊಲೀಸರು : ಪೊಲೀಸರಿಂದಲೇ ರೋಡ್ ಬ್ಲಾಕ್, ಸಂಚಾರಕ್ಕೆ ಅಡಚಣೆ

ಉತ್ತರಪ್ರಭ ಗದಗ: ನಗರದ (ಬಿಎಸ್ಎನ್ಎಲ್ ) ಕಛೇರಿಯ ಎದುರು ಪಂಚರಹೊಂಡ ವೃತ್ತದ ಮಧ್ಯದಲ್ಲೇ ಪೊಲೀಸ್ ಬ್ಯಾರಿಗೆಡ್…

ಮದ್ಯ ಸೇವನೆಯಿಂದ ಮೃತಪಟ್ರೆ ವಿಮೆ ಪರಿಹಾರ ಇಲ್ಲ..!

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪಟ್ಟಣ ಪಂಚಾಯತಿ ಆದೇಶಕ್ಕೂ ಕಿಮ್ಮತ್ತು ನೀಡದ ಹೆಸ್ಕಾಂ…!

ಶಿರಹಟ್ಟಿ ಪಟ್ಟಣದಲ್ಲಿನ 7 ಕಟ್ಟಿಗೆ ಅಡ್ಡೆಗಳದ್ದು ಒಂದೊಂದು ಕಹಾನಿ ಇದೆ. ಆದರೆ ಈ ಕಥೆಯಲ್ಲಿ ಹೆಸ್ಕಾಂ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ.

ಮಹಿಳಾ ವಿಶ್ವಕಪ್ ಆತಿಥ್ಯ ವಹಿಸಿದ ಭಾರತ!

2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಲಭಿಸಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ.