ಬೆಂಗಳೂರು: ಈಶ್ವರಿ ಸಂಸ್ಥೆಯನ್ನು ಕನ್ನಡ ಸಿನಿಪ್ರೇಮಿಗಳು ಮರೆಯುವ ಹಾಗಿಲ್ಲ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಂತಹ ಮಹಾನ್ ಕಲಾವಿದರನ್ನು ಕನ್ನಡ ಸಿನಿಮಾಗೆ ಪರಿಚಯಿಸಿದ ಕೀರ್ತಿ ಈಶ್ವರಿ ಸಂಸ್ಥೆಯದ್ದು. ಅಂತಹ ಈಶ್ವರಿ ಸಂಸ್ಥೆ ಇದೀಗ ಗೋಲ್ಡನ್ ಜುಬಲಿ ಸಂಭ್ರಮದಲ್ಲಿದೆ.

ಈಶ್ವರಿ ಸಂಸ್ಥೆಯ ಸಂಸ್ಥಾಪಕರು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ತಂದೆ ಶ್ರೀ.ಎನ್.ವೀರಾಸ್ವಾಮಿ ಅವರು. 1970-71 ರಲ್ಲಿ ಡಾ.ರಾಜ್ ಕುಮಾರ್ ಅವರು ತ್ರಿಪಾತ್ರದಲ್ಲಿ ನಟಿಸಿದ ಕುಲಗೌರವ ಸಿನಿಮಾವನ್ನು ನಿರ್ಮಿಸುವ ಮೂಲಕ ವೀರಾಸ್ವಾಮಿ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ ನಡೆದಿದ್ದೆಲ್ಲವು ಇತಿಹಾಸ. ಕನ್ನಡದ ಮಹಾನ್ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ವಿಜಯ್, ದೊರೈ ಭಗವಾನ್, ಭಾರ್ಗವ  ಸೇರಿದಂತೆ ಹಲವಾರು ನಿರ್ದೇಶಕರು ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.

ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಶ್ರೀನಾಥ್, ಅನಂತ್ ನಾಗ್, ಲೀಲಾವತಿ, ಪಾಂಡರಿಬಾಯಿ, ಲಕ್ಷ್ಮಿ, ಶುಭ , ಆರತಿ, ಭಾರತಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ನಟಿಯರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ಈಶ್ವರಿ ಸಂಸ್ಥೆಗೆ ಸೇರುತ್ತದೆ.

ಈ ಸಂಸ್ಥೆಯ ಮೂಲಕ ನಿರ್ಮಾಣವಾದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕುಲಗೌರವ, ನಾಗರಹಾವು, ನಾ ನಿನ್ನ ಮರೆಯಲಾರೆ, ಭೂತಯ್ಯನ ಮಗ ಅಯ್ಯು, ನಾರದ ವಿಜಯ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿದರು ಎನ್. ವೀರಾಸ್ವಾಮಿ ಅವರು.

ರವಿಚಂದ್ರನ್ ಅವರು ನಿರ್ದೇಶಿಸಿ ನಟಿಸಿದ ಮೊದಲ ಸಿನಿಮಾ ಪ್ರೇಮಲೋಕ ಈಶ್ವರಿ ಸಂಸ್ಥೆಯ ಮೂಲಕವೇ ನಿರ್ಮಾಣವಾಗಿತ್ತು.  ಪ್ರೇಮಲೋಕ ಸಿನಿಮಾದ ರೇಕರ್ಡ್ಸ್ ಅನ್ನು ಇಂದಿಗೂ ಯಾವ ಸಿನಿಮಾ ಕೂಡ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ರವಿಚಂದ್ರನ್ ಅವರ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ ಇನ್ನು ಕೆಲವು ಸಿನಿಮಾಗಳು ಅವರ ತಂದೆ ಇರುವಾಗಲೇ ನಿರ್ಮಾಣವಾಯಿತು.

ವೀರಾಸ್ವಾಮಿ ಅವರು ನಿಧನರಾದ ನಂತರ ರವಿಚಂದ್ರನ್ ಅವರು  ಈಶ್ವರಿ ಸಂಸ್ಥೆಯನ್ನು ನೋಡಿಕೊಳ್ಳತೊಡಗಿದರು. ಈಶ್ವರಿ ಸಂಸ್ಥೆಯ ಮೂಲಕ ಸಿಪಾಯಿ, ಏಕಾಂಗಿ, ಮಲ್ಲ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ಮಿಸಿ, ಯಶಸ್ಸು ಗಳಿಸಿದರು ಕ್ರೇಜಿ ಸ್ಟಾರ್. 

Leave a Reply

Your email address will not be published. Required fields are marked *

You May Also Like

ಕೋರೋನಾ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ: ಶ್ರೀಕಾಂತ್ ಕಾಟೇವಾಲೆ

ಲಕ್ಷ್ಮೇಶ್ವರ :ಜಿಲ್ಲಾ ನಗರಾಭಿವೃದ್ಧಿ ಕೋಶ , ಜಿಲ್ಲಾಡಳಿತ ಗದಗವತಿಯಿಂದ ಕಾರ್ಯಲಯ ಲಕ್ಷ್ಮೇಶ್ವರ ಇವರ ಸಹಯೋಗದೊಂದಿಗೆ ಲಕ್ಷ್ಮೇಶ್ವರ…

ಗದಗನಲ್ಲಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮ ಮಾರಾಟ: ನಾಲ್ವರ ಬಂಧನ

ಗದಗ: ಈಗಾಗಲೇ ರಾಜ್ಯದಲ್ಲಿ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮದ್ಯೆ ಗದಗನಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ಇಲಿಗಳೂ ಸಾರಾಯಿ ಕುಡಿಯುತ್ತವೆ.

ಆ ಟ್ಯೂಬ್ ನಲ್ಲಿ ಇದ್ದ ಸಾರಾಯಿಯನ್ನು ಮುದ್ದೆ ಮಾಲು ಕೊಠಡಿಯಲ್ಲಿ ಇದ್ದ ಇಲಿಗಳು ಕುಡಿದಿವೆ ಅಂತ ಹೇಳಿದ. ಆ ಕೊಠಡಿಯಲ್ಲಿ ಇಲಿ ಇದ್ದದ್ದು ನಿಜ ಆದರೆ ಇಲಿ ಸಾರಾಯಿ ಕುಡಿದಿದ್ದು ಯಾರು ಗಮನಿಸಿಲ್ಲ. ಆದರೂ ಇಲಿ ಸಾರಾಯಿ ಕುಡಿದಿದ್ದು, ನಿಜ..!

ತಂಬಾಕು ಉತ್ಪನ್ನ ಮಾರಾಟ, ಸೇವನೆ ನಿಷೇಧ

ಗದಗ ಜಿಲ್ಲೆಯಾದ್ಯಂತ ಜಗಿಯುವ ತಂಬಾಕು ಉತ್ಪನ್ನಗಳು, ಪಾನ ಮಸಾಲ, ಜರ್ದಾ, ಖೈನಿ, ಸುಪಾರಿ, ಎಲೆ-ಅಡಿಕೆ, ಕಡ್ಡಿಪುಡಿ, ಚುಯಿಂಗಮ್ ಇತ್ಯಾದಿ ಉತ್ಪನ್ನಗಳ ಸೇವನೆ, ಉಗುಳುವುದು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ.