ಬೆಂಗಳೂರು: ತಮಗಿಷ್ಟವಾದ ದಾರಾವಾಹಿಗಳ ನಿಗದಿತ ಸಮಯಕ್ಕೆ ಸರಿಯಾಗಿ ಬಹುತೇಕ ಹೆಣ್ಣು ಮಕ್ಕಳು ಟಿವಿ ಮುಂದೆ ಹಾಜರ್ ಆಗಿ ಬಿಡುತ್ತಿದ್ದರು. ಆದರೆ ಲಾಕ್ ಡೌನ್ ಬಿಸಿ ದಾರಾವಾಹಿಗಳಿಗೂ ತಟ್ಟಿದ್ದರಿಂದ ಶೂಟಿಂಗ್ ಗೆ ಅವಕಾಶವಿರಲಿಲ್ಲ. ಇದರಿಂದಾಗಿ ಮನೆಮಂದಿಯಲ್ಲಿ ಮನೆ ಹಿಡಿದ ಮೇಲೆ ಮಹಿಳೆಯರಿಗೆ ತುಸು ಕೆಲಸದ ಹೊರೆ ಜಾಸ್ತಿಯಾಗಿತ್ತು. ಈ ಕಾರಣದಿಂದ ದಾರಾವಾಹಿಗಳನ್ನು ಬಹುತೇಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದಾರಾವಾಹಿ ಒಳಾಂಗಣ ಚಿತ್ರಿಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ದಾರಾವಾಹಿಗಳನ್ನೆ ನಂಬಿ ಬದುಕುತ್ತಿದ್ದಾರೆ. ಇದರಿಂದ ಈ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಒಳಾಂಗಣ ಚಿತ್ರಿಕರಣಕ್ಕೆ ಅವಕಾಶ ನೀಡಿ ಅನುಮತಿ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.

ಜೊತೆಗೆ ಚಲನಚಿತ್ರಗಳಾಗಲೀ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕಾಗಿಲೀ ಯಾವುದೇ ವಿನಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಉತ್ತರಪ್ರದೇಶ: ಕಂಡವರ ಮನೆಗೆ ಕೇಸರಿ ಬಳಿದ ಮನೆಹಾಳರು

ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ‘ಜಂಗಲ್ ನ್ಯಾಯ’ ಕಡೆ ಮುಖ ಮಾಡುತ್ತಿದೆಯೇ? ನಗರವೊಂದರ ಏರಿಯಾದ ಎಲ್ಲ ಮನೆಗಳ ಹೊರ ಗೋಡೆಗಳಿಗೆ ಕೆಲವು ಮನೆಹಾಳರು ಆ ಮನೆಯವರ ವಿರೋಧ ಲೆಕ್ಕಿಸದೇ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ.

ರಾಯಣ್ಣ ಮೂರ್ತಿಗೆ ಅವಮಾನ: ರಾಯಣ್ಣ ಯುವಶಕ್ತಿ ವೇದಿಕೆ ಖಂಡನೆ

ಬೆಳಗಾವಿ ಜಿಲ್ಲೆ ಪೀರಣವಾಡಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಸಂಗೋಳ್ಳಿ ರಾಯಣ್ಣ ಯುವಶಕ್ತಿ ವೇದಿಕೆ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕೊರೊನಾ ರೋಗಿಗಳಲ್ಲಿ ಕುಸಿಯುತ್ತಿದೆ ಆಮ್ಲಜನಕ – ಹೆಚ್ಚಿದ ಐಸಿಯು ಬೇಡಿಕೆ!

ಬೆಂಗಳೂರು : ರಾಜ್ಯದಲ್ಲಿನ ಕೊರೊನಾ ರೋಗಿಗಳಲ್ಲಿ ಆಮ್ಲಜನಕ ಮಟ್ಟ ಕುಸಿಯುತ್ತಿದ್ದು, ಐಸಿಯು (ತೀವ್ರ ನಿಗಾ ಘಟಕ)…