ಮುಂಬೈ: ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಕೋಮು ದ್ವೇಷ ಸೃಷ್ಟಿಸಿದ ಆರೋಪ ಹೊತ್ತುಕೊಂಡಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್‌ 14 ರಂದು ಮುಂಬೈನ ಬಾಂದ್ರಾ ರೈಲು ನಿಲ್ದಾಣದ ಬಳಿ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಗ್ರಾಮಗಳಿಗೆ ತೆರಳಲು ಜಮಾಯಿಸಿದ್ದರು.

ಲಾಕ್‌ ಡೌನ್‌ ನಡುವೆಯೂ ಕೇಂದ್ರ ಸರ್ಕಾರ ರೈಲನ್ನು ಬಿಟ್ಟಿದ್ದು ವಲಸೆ ಕಾರ್ಮಿಕರು ತವರಿಗೆ ತೆರಳಲು ಸಹಸ್ರ ಸಂಖ್ಯೆಯಲ್ಲಿ ಕೆಲ ಘಂಟೆಗಳಲ್ಲೇ ಜಮಾಯಿಸಿದ್ದರು. ವಾಸ್ತವವಾಗಿ ಈ ರೀತಿ ವಲಸೆ ಕಾರ್ಮಿಕರ ಜಮಾವಣೆಗೆ ಸ್ಥಳೀಯ ಚಾನೆಲ್‌ ಒಂದು ನೀಡಿದ ಸುಳ್ಳು ಸುದ್ದಿಯೇ ಇದಕ್ಕೂ ಕಾರಣವಾಗಿತ್ತು. ಆದರೆ ವಲಸೆ ಕಾರ್ಮಿಕರ ಈ ಜಮಾವಣೆ ಬಗ್ಗೆ ವರದಿ ಮಾಡುವಾಗ ಗೋಸ್ವಾಮಿ ಅವರ ರಿಪಬ್ಲಿಕ್‌ ಚಾನೆಲ್‌ ಸಂಭಂದವೇ ಇಲ್ಲದ ಬಾಂದ್ರಾದ ಮಸೀದಿಯ ದೃಶ್ಯವನ್ನು ಪದೇ ಪದೇ ತೋರಿಸಿತ್ತು. ಆದರೆ ಇದರಲ್ಲಿ ಮಸೀದಿಯ ಪಾತ್ರವೇನೂ ಇರಲಿಲ್ಲ ಎಂದು ಈ ಪ್ರಕರಣದ ದೂರುದಾರ ಇರ್ಫಾನ್ ಅಬೂಬಕರ್ ಶೇಖ್ ಆರೋಪಿಸಿದ್ದಾರೆ. ಈ ಬಗ್ಗೆ ಮುಂಬೈನ ಪೈಧೋನಿ ಪೋಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ

ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಜನರನ್ನು ಆವರಿಸಿದೆ. ಇನ್ನು ಜಲಾಶಯಗಳಲ್ಲಿಯೂ ಕೂಡ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮೊದಲಾದ ಮಾಹಿತಿ ಇಲ್ಲಿದೆ

ಮಸ್ಕಿ: ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯ

ಕಾರ್ಮಿಕ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಇಲ್ಲಿನ ಕರ್ನಾಟಕ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.

ಕೊರೊನಾ ಸಂದಿಗ್ಧತೆ: ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಸಂವಾದ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತು ನಾಳೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳೊಂದಿಗೆ…

ಬಿಡುವೆನೆಂದರೂ ಬಿಡದಂತೆ ಕಾಡುತ್ತಿರುವ ಆಕೆ ಹೋಗಿದ್ದಾರೂ ಎಲ್ಲಿಗೆ..?

ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು.