ಬೆಂಗಳೂರು: ತಮಗಿಷ್ಟವಾದ ದಾರಾವಾಹಿಗಳ ನಿಗದಿತ ಸಮಯಕ್ಕೆ ಸರಿಯಾಗಿ ಬಹುತೇಕ ಹೆಣ್ಣು ಮಕ್ಕಳು ಟಿವಿ ಮುಂದೆ ಹಾಜರ್ ಆಗಿ ಬಿಡುತ್ತಿದ್ದರು. ಆದರೆ ಲಾಕ್ ಡೌನ್ ಬಿಸಿ ದಾರಾವಾಹಿಗಳಿಗೂ ತಟ್ಟಿದ್ದರಿಂದ ಶೂಟಿಂಗ್ ಗೆ ಅವಕಾಶವಿರಲಿಲ್ಲ. ಇದರಿಂದಾಗಿ ಮನೆಮಂದಿಯಲ್ಲಿ ಮನೆ ಹಿಡಿದ ಮೇಲೆ ಮಹಿಳೆಯರಿಗೆ ತುಸು ಕೆಲಸದ ಹೊರೆ ಜಾಸ್ತಿಯಾಗಿತ್ತು. ಈ ಕಾರಣದಿಂದ ದಾರಾವಾಹಿಗಳನ್ನು ಬಹುತೇಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದಾರಾವಾಹಿ ಒಳಾಂಗಣ ಚಿತ್ರಿಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ದಾರಾವಾಹಿಗಳನ್ನೆ ನಂಬಿ ಬದುಕುತ್ತಿದ್ದಾರೆ. ಇದರಿಂದ ಈ ಕಾರ್ಮಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಒಳಾಂಗಣ ಚಿತ್ರಿಕರಣಕ್ಕೆ ಅವಕಾಶ ನೀಡಿ ಅನುಮತಿ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.

ಜೊತೆಗೆ ಚಲನಚಿತ್ರಗಳಾಗಲೀ, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕಾಗಿಲೀ ಯಾವುದೇ ವಿನಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ, ಶಿರಹಟ್ಟಿ, ರೋಣ, ಮುಂಡರಗಿ ಸೇರಿ 19ಪಾಸಿಟಿವ್, ಗದಗನಲ್ಲೇ ಅತಿ ಹೆಚ್ಚು

ಗದಗ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಗದಗ ತಾಲೂಕಿನಲ್ಲಿಯೇ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ ಮತ್ತೆ ಇಬ್ಬರು ಗರ್ಭಿಣಿಯರಲ್ಲಿ ಕಂಡು ಬಂದ ಮಹಾಮಾರಿ!

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮತ್ತೆ ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ಕಂಡು ಬಂದಿದೆ.

ನರೆಗಲ್ಲ: ಅತೀಯಾದ ಮಳೆಯಿಂದ ಕೊಳೆಯುತ್ತಿದೆ ಈರುಳ್ಳಿ

ಹೋಬಳಿಯ ಎಲ್ಲೇಡೆ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತಿವ್ರ ಹಿನ್ನೆಡೆಯಾಗಿದೆ.

ಕಾಂಗ್ರೆಸ್ ನ ತಂತ್ರ-ಕುತಂತ್ರಗಳನ್ನು ಛಿದ್ರ ಮಾಡುತ್ತೇವೆ: ಸಚಿವ ಶ್ರೀರಾಮುಲು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಂತ್ರ-ಕುತಂತ್ರಗಳನ್ನು ಬಿಜೆಪಿ ಪಕ್ಷ ಛಿದ್ರ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.