ಕೊಪ್ಪಳ: ಮುಂಬೈಯಿಂದ ಪಿ-1173 ಸೋಂಕಿತ ಪ್ರಯಾಣಿಸಿದ್ದ ಬಸ್ ನಲ್ಲಿ 9 ಜನ ಭಿಕ್ಷುಕರು ಪ್ರಯಾಣಿಸಿದ್ದರಂತೆ. ಈ ಕಾರಣದಿಂದ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಕರೋನ ಹೆಚ್ಚಾಗುವ ಆತಂಕವಿದೆ. ಹಸಿರು ವಲಯದಲ್ಲಿ ಇದ್ದ ಜಿಲ್ಲೆಯಲ್ಲಿ ಸೋಮವಾರ ಮೊದಲ ಬಾರಿಗೆ ಮೂರು ಕರೋನ ವೈರಸ್ ದೃಢ ಪಟ್ಟಿದೆ. ಆದರೆ ಮೂವರು ಹೊರ ರಾಜ್ಯದಿಂದ ಬಂದವರಾಗಿದ್ದು, ಅವರ ಪ್ರವಾಸ ಇತಿಹಾಸ ಮಾತ್ರ ಆತಂಕ ಮೂಡಿಸಿದೆ. ಪಿ-1173 ಸೋಂಕಿತ ವ್ಯಕ್ತಿಯು ಮುಂಬೈಯಿಂದ ಹುಬ್ಬಳ್ಳಿಗೆ ಲಾರಿಯಲ್ಲಿ , ಹಾಗೂ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಟಾಟಾ ಏಸ್ ದಲ್ಲಿ ಪ್ರಯಾಣ ಬೆಳಿಸಿದ್ದನಂತೆ. ಆದರೆ ಕೊಪ್ಪಳದಿಂದ ಕುಷ್ಟಗಿಗೆ ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾನೆ. ಅತನ ಜೋತೆ 25 ಪ್ರಯಾಣಿಕರಲ್ಲಿ 9 ಜನ ಭಿಕ್ಷುಕರು ಪ್ರಯಾಣಿಸಿದ್ದರು ಎನ್ನುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಭಿಕ್ಷುಕರು ಕೇವಲ ಪ್ರಯಾಣ ಬೆಳೆಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಕುಷ್ಟಗಿಯಲ್ಲಿಳಿದ ಭಿಕ್ಷುಕರು ಮನೆ ಮನೆ ತೆರಳಿ ಭಿಕ್ಷೆ ಬೇಡಿದ್ದಾರೆ. ಭಿಕ್ಷೆ ಹಾಕಿದವರು ಹಾಗೂ ಅವರ ಕುಟುಂಬದವರನ್ನು ಮತ್ತು ಸುತ್ತ ಮುತ್ತಲಿನ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಆದರೆ ಸೋಂಕಿತ ವ್ಯಕ್ತಿಯೊಂದಿಗೆ 90 ಜನರು ಪ್ರಾಥಮಿಕ ಹಾಗೂ 70 ಜನ ದ್ವೀತಿಯ ಸಂಪರ್ಕಕಕ್ಕೆ ಬಂದ ಮಾಹಿತಿ ಇದ್ದು ಅವರನ್ನೇಲ್ಲ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಅದರಂತೆ ಮಹಾರಾಷ್ಟ್ರ ರಾಯಘಡದಿಂದ ಪಿ-1174 ಸೋಂಕಿತ ಮಹಿಳೆ ಯಿಂದಾಗಿ ಅವರ ಪ್ರಾಥಮಿಕ ಸಂಪರ್ಕಕ್ಕೆ 47 ಜನರು, ಹಾಗೂ ತಮಿಳುನಾಡಿನಿಂದ ಬಂದ ಪಿ- 1175 ಸೊಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕದಲ್ಲಿ 50 ಜನ ಹಾಗೂ ದ್ವೀತಿಯ ಸಂಪರ್ಕದಲ್ಲಿ 10 ಜನರು ಸೇರಿಂದ ಮೂವರ ಸೊಂಕಿತರ ಸಂಪರ್ಕಿತ ಸುಮಾರು 270 ಜನರನ್ನು ಕೇಲವು ಹೋಮ್ ಕ್ವಾರಂಟೈನ್, ಇನ್ನೂ ಕೆಲವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಆದರೆ ಸೊಂಕಿತ ವ್ಯಕ್ತಿಯ ಜೋತೆ ಭಿಕ್ಷುಕರು ಕೂಡ ಪ್ರಯಾಣಿಸಿದ್ದರಿಂದ ಈಗ ಕೊಪ್ಪಳಕ್ಕೆ ಭಿಕ್ಷುಕರಿಂದ ಹೆಚ್ಚು ಕೊರೋನಾ ಬರುವ ಆತಂಕ ಶುರುವಾಗಿದೆ.