ಉತ್ತರಪ್ರಭ ಸುದ್ದಿ
ಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ ಗ್ರಾಮದ ಡಾ. ಶೇಖರ ಹೈದ್ರಿ ಅವರ ಮಹಾಮನೆಯಲ್ಲಿ 2ನೇ ಮಾಸಿಕ ಸಭೆ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಕಾರ್ಯಧ್ಯಕ್ಷ ಬಸವರಾಜ್ ತುಳಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರಕಾರಿ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ಬಡ ಕುಟುಂಬಕ್ಕೂ ಒದಗಿಸಿಕೊಡುವುದೇ ಸಮಾಜ ಸಂಘಟನೆಯಾಗಿದೆ. ಯುವಕರು ಸಾಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಹಿಂದುಳಿದ ಸಮುದಾಯದ ಜನರನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ್ ಪಲ್ಲೆದ ಮಾತನಾಡಿ, ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ಘಟಕ ರಚನೆ, ವಧು ವರರ ಸಹಾಯಕೇಂದ್ರ, ಕುಟುಂಬಗಣತಿ ಸೇರಿದಂತೆ ವಿವಿಧ ರೀತಿಯಲ್ಲಿ ಕೆಲಸ ಮಾಡುವ ಕಾರ್ಯ ತಾಲೂಕ ಸಭೆಯಿಂದ ನೆಡಲಿದೆ ಎಂದರು.

ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣಪ್ಪ ಹೊಂಬಾಳ ವಂದಿಸಿದರು

ಸಭೆಯನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶಾಲಿ, ನ್ಯಾಯವಾದಿ ಎಸ್ ಎಸ್ ಪಾಟೀಲ್, ಚನ್ನವಿರಗೌಡ ಪಾಟೀಲ್,ಹಾಲಪ್ಪ ದುಗ್ಗಾಣಿ, ಚೆನ್ನಬಸಗೌಡ ಪಾಟೀಲ, ಶರಣಪ್ಪ ಹೊಂಬಾಳ, ಜಗದೀಶ ಸಾಸಲವಾಡ, ದೇವರಾಜ್ ಮೇಟಿ, ಸುರೇಶ್ ಬ್ಯಾಲಹುಣಸಿ, ಕಾಶಿನಾಥ್ ಗಿಡ್ಡವೀರಪ್ಪನವರು ಸೇರಿದಂತೆ ಕಡಕೋಳ ಗ್ರಾಮದ ಹಿರಿಯರು ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಾವಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಸುಮಾ ಜೋಶಿ (35) ಮೃತಪಟ್ಟ ಮಹಿಳೆ ಯಾಗಿದ್ದಾಳೆ.

ಕೋವಿಡ್ ಹಿನ್ನೆಲೆ ಕಾಲಕಾಲೇಶ್ವರ ಜಾತ್ರೆ ರದ್ದು

ಶ್ರೀ ಕಾಲಕಾಲೇಶ್ವರ ಜಾತ್ರಾ ಮಹೋತ್ಸವವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ರದ್ದುಮಾಡಲಾಗಿದೆ ಎಂದು ತಹಶೀಲ್ದಾರ ಎ.ಬಿ. ಕಲಘಟಗಿ ಹೇಳಿದರು.

ಗದಗ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ: ಪೊಲೀಸರಿಂದ ಲಾಠಿ ರುಚಿ

ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.