ಹಾವೇರಿ: ಲಾಕ್ ಡೌನ್ ಇದ್ದಾಗಲೂ ಅನವಶ್ಯಕವಾಗಿ ಬೈಕ್ ನಲ್ಲಿ ಓಡಾಡುತ್ತಿದ್ದ ಯುವಕನಿಗೆ ಓಡಾಡದಂತೆ ಸೂಚನೆ ನೀಡಿದ ಪೊಲೀಸರಿಗೆ ಯುವಕ ನೀವು ವಾಚಮನ್ ಇದ್ದ ಹಾಗೆ ಎಂದು ಆವಾಜ್ ಹಾಕಿದ ಘಟನೆ ನಡೆದಿದೆ.
  ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಯಡಚಿ ಕ್ರಾಸ್ ಬಳಿ ಘಟನೆ ನಡೆದಿದೆ.
ಸುಖಾಸುಮ್ಮನೆ ತಿರುಗಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ರಟ್ಟಿಹಳ್ಳಿ ಪಟ್ಟಣದ ನಿವಾಸಿ ಜಬೀವುಲ್ಲಾ ಮೆಹಬೂಬಸಾಬ್ ಖಾಜಿ ಎಂಬ ಯುವಕ ಪುಂಡಾಟಿಕೆ ಮೆರೆದಿದ್ದಾನೆ.
ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದಾಗ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ‌ ನಿಂದಸಿ,
ನೀವೆಲ್ಲಾ ವಾಚಮನ್‌ಗಳಿದ್ದಂತೆ ಲಾಕ್‌ಡೌನ್ ಮುಗಿದ ಮೇಲೆ‌ ನಿಮ್ಮನ್ನ ನೋಡ್ಕೊಳ್ತಿನಿ ಎಂದು ಆವಾಜ್ ಹಾಕಿದ್ದಾನೆ.
ಕರ್ತವ್ಯದಲ್ಲಿದ್ದ ಪೊಲೀಸರಿಗೆ ಹಾಗೂ ಹೋಂ ಗಾರ್ಡ್ಸ್‌ಗಳ ಮೇಲೆ ಪುಂಡಾಟಿಕೆ ಮೆರೆದ ಯುವಕನನ್ನು
ಎಎಸ್‌ಐ ಬಿ.ಎಸ್.ಮಡ್ಡೇರ ನೇತೃತ್ವದಲ್ಲಿ ಬಂಧಿಸಲಾಯಿತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಮಹಿಳೆಯಿಂದ ಕಾಂಗ್ರೆಸ್ ಮುಖಂಡನಿಗೆ ಥಳಿತ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ.

ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದ ಚಡಚಣ್ಣವರ

ಸ್ಥಳೀಯ ಜ್ಞಾನ ಜ್ಯೋತಿ ಕೊಚಿಂಗ್ ಸೆಂಟರ್ ವಿದ್ಯಾರ್ಥಿ ಮಂಜುನಾಥ ಚಡಚಣ್ಣವರ ಮೊರಾರ್ಜಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಪಡೆದುಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿಂದು ಇಂದು ಮತ್ತೆ 63 ಕೊರೊನಾ ಪಾಸಿಟಿವ್!

ಇಂದು ಕೂಡ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ 50 ದಾಟುತ್ತಿದ್ದು, ಸೋಂಕಿನ ಸುಂಟರಗಾಳಿ ವ್ಯಾಪಕವಾಗುತ್ತಿದೆ.

ಗದಗ ಜಿಲ್ಲೆಯಲ್ಲಿಂದು ಅಂತರ್ ಜಿಲ್ಲಾ ಪ್ರವಾಸದಿಂದ ಹೆಚ್ಚಿನ ಸೋಂಕು: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಜಿಲ್ಲೆಯ ಯಾವ ತಾಲೂಕಿನಲ್ಲಿ ಸೋಂಕಿತರು ಇಂದು ಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..