ಗದಗ: ಜಿಲ್ಲೆಯಲ್ಲಿ ರವಿವಾರ ದಿ. 12 ರಂದು 13 ಜನರಿಗೆ ಕೊವಿಡ್-19 ಸೋಂಕು ದೃಢ ಪಟ್ಟಿದೆ. ಹಾವೇರಿ ಜಿಲ್ಲೆ ಪ್ರವಾಸದ ಹಿನ್ನಲೆಯುಳ್ಳ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ 37 ವರ್ಷದ ಪುರುಷ      (ಪಿ-36323) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ಪಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ  20 ವರ್ಷದ ಮಹಿಳೆ (ಪಿ-36447) ಸೋಂಕು ದೃಢಪಟ್ಟಿರುತ್ತದೆ.

ಬೆಳಗಾವಿ ಜಿಲ್ಲೆಯ ಸುರೇಬಾನ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಮುಳಗುಂದ ನಿವಾಸಿ 49 ವರ್ಷದ ಪುರುಷ (ಪಿ-36463) ಸೋಂಕು ದೃಢಪಟ್ಟಿರುತ್ತದೆ.

ಬೆಂಗಳೂರಿನಿಂದ ಪ್ರವಾಸದ ಹಿನ್ನೆಲೆಯುಳ್ಳ ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳಾದ 37 ವರ್ಷದ ಮಹಿಳೆ   (36473) ಹಾಗೂ 38 ವರ್ಷದ ಪುರುಷ (36501) ಸೋಂಕು ದೃಢಪಟ್ಟಿರುತ್ತದೆ.

ಗದಗ ಬೆಟಗೇರಿ ಹುಡ್ಕೋ ಕಾಲನಿಯ ನಿವಾಸಿ 47 ವರ್ಷದ ಪುರುಷ (36559) ಸೋಂಕು ದೃಢಪಟ್ಟಿದ್ದು ಸೋಂಕು ಸಂಪರ್ಕದ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.

ಗದಗ ಬೆಟಗೇರಿ ನಗರದ ಬಸವೇಶ್ವರ ನಗರ ನಿವಾಸಿ 51 ವರ್ಷದ ಮಹಿಳೆ ಪಿ-31106 ಸೋಂಕಿತರ ಸಂಪರ್ಕದಿಂದಾಗಿ  ನಗರದ ಶಹಪೂರ ಪೇಟೆಯ ನಿವಾಸಿ 26 ವರ್ಷದ ಪುರುಷ (36570) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರ ನಗರದ ದಾಸರ ಓಣಿ ನಿವಾಸಿ 24 ವರ್ಷದ ಮಹಿಳೆ ಪಿ-28940 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ ನಿವಾಸಿ 1 ವರ್ಷದ ಮಗು (36586) ಸೋಂಕು ದೃಢಪಟ್ಟಿರುತ್ತದೆ.

ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 41 ವರ್ಷದ ಮಹಿಳೆ ಪಿ-18285 ಸೋಂಕಿತರ ಸಂಪರ್ಕದಿಂದಾಗಿ ಗದಗ ತಾಲೂಕಿನ ನಾಗಾವಿಯ ಗಾಳೆಮ್ಮನ ಗುಡಿ ನಿವಾಸಿಗಳಾದ 32 ವರ್ಷದ ಪುರುಷ (36616) ಹಾಗೂ 4 ವರ್ಷದ ಬಾಲಕ (36634) ಸೋಂಕು ದೃಢಪಟ್ಟಿರುತ್ತದೆ.

ನರಗುಂದದ ಹೊರಕೇರಿ ಓಣಿ ನಿವಾಸಿ 19 ವರ್ಷದ ಯುವಕ (ಪಿ-36666) ಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಬೆಂಗಳೂರಿನಿಂದ ಪ್ರವಾಸದ ಹಿನ್ನೆಲೆಯುಳ್ಳ ಶಿರಹಟ್ಟಿ ತಾಲೂಕಿನ ಗೊಜನೂರು ಗ್ರಾಮದ 33 ವರ್ಷದ ಪುರುಷ  (ಪಿ-36686) ಸೋಂಕು ದೃಢಪಟ್ಟಿರುತ್ತದೆ.

ಗದಗ ಬೆಟಗೇರಿ ಕಾಗದಗಾರ ಓಣಿ ನಿವಾಸಿ 72 ವರ್ಷದ ಪುರುಷ (ಪಿ-36726) ಗೆ ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ. (ರಾಜ್ಯ ಬುಲೆಟಿನನಲ್ಲಿ ಒಂದು ಪ್ರಕರಣ ಪುನರಾವರ್ತನೆಯಾಗಿದ್ದು ಅದನ್ನು ಸರಿಪಡಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು ತಿಳಿಸಿರುತ್ತಾರೆ.)

Leave a Reply

Your email address will not be published. Required fields are marked *

You May Also Like

ಎಂಎಲ್ ಸಿ ಹೆಚ್.ವಿಶ್ವನಾಥ್ ಮಂತ್ರಿಯಾಗುವ ಕನಸಿಗೆ: ಸುಪ್ರೀಂ ಶಾಕ್

ಸೋತು ಎಂಎಲ್ಸಿಯಾಗಿದ್ದಂತ ಹೆಚ್.ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನದ ಮೂಲಕ ಸಚಿವ ಸ್ಥಾನದ ಕನಸು ಕಂಡಿದ್ದ ವಿಶ್ವನಾಥ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.

ಅವ್ವನ ಮಾತು ಎಚ್ಚರಿಕೆ ಗಂಟೆಯಿದ್ದಂತೆ

ಬದುಕಿನುದ್ದಕ್ಕೂ ಸದಾ ಅವ್ವ ನೆನಪಾಗುತ್ತಲೇ ಇರುತ್ತಾಳೆ. ಅವಳ ಮಾತು ಅಂದರೆ ವೇದ ವಾಕ್ಯವಿದ್ದಂತೆ. ಅದು ಸತ್ಯ ಅಂದರೆ ಸತ್ಯ ಅಷ್ಟೆ. ಏಕೆಂದರೆ ಸತ್ಯ ಯಾವತ್ತೂ ಸತ್ಯ! ಅದಕ್ಕೆ ಇನ್ನೊಂದು ಪರ್ಯಾಯವೇನೂ ಇರುವುದಿಲ್ಲ.

ರಸ್ತೆ ಗುಂಡಿಯಲ್ಲಿ ಸಿಲುಕಿದ ಬಸ್, 2 ಗಂಟೆ ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ..!

ಹೋಬಳಿ ವ್ಯಾಪ್ತಿಯಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಈಗ ಸತತವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಹಾಳಾಗಿದ್ದು ಅಪಘಾಕ್ಕೆ ಆಹ್ವಾನ ನೀಡುತ್ತಿವೆ. ಬುಧವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟ್ರಾಕ್ಟರ್‌ವೊಂದು ರಸ್ತೆಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ಸಿಲುಕಿ ಸ್ವಲ್ಪದರಲ್ಲೆ ಅಪಾಯದಿಂದ ಪಾರಾಗಿವೆ.