ಹಾವೇರಿ: ಮೆಣಸಿನಕಾಯಿ ಅಂದ್ರೆ ಥಟ್ ಅಂತ ನೆನಪಾಗುವುದೇ ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ. ಮೆಣಸಿನಕಾಯಿ ಬೆಳೆಯಿಂದಲೇ ಪ್ರಸಿದ್ಧಿಯಾಗಿರುವ ಬ್ಯಾಡಗಿ ಮಾರುಕಟ್ಟೆ ಇದೀಗ ಬಿಕೋ ಎನ್ನುತ್ತಿದೆ. ಕೊರೋನಾದ ಸಂಕಷ್ಟ ದಿನಗಳನ್ನು ಈಗಾಗಲೇ ಕಳೆಯುತ್ತಿದ್ದಿವೆ. ಆದರೆ ಕೊರೋನಾ ಕರಿ ಛಾಯೆ ಬಡ ಹಾಗೂ ಕೂಲಿಕಾರ್ಮಿಕರು, ರೈತರು ಅಲೆಮಾರಿಗಳು ಜೊತೆಗೆ ಒಂದು ಹೊತ್ತಿನ ಊಟಕ್ಕೆ ರಟ್ಟೆಯೊಳಗಿನ ಶಕ್ತಿಯನ್ನೆ ನಂಬಿಕೊಂಡವರನ್ನಂತು ಇನ್ನಿಲ್ಲದೆ ಕಾಡುತ್ತಿದೆ. ಹೀಗಾಗಿ ಕೊರೋನಾ ಕಾಟದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತರ ಸಂಕಷ್ಟದ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಿಮ್ಮ ಉತ್ತರ ಪ್ರಭ ಮಾಡಿದೆ.

ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಮೆಣಸಿನಕಾಯಿ ಸೀಜನ್ ಜೋರಾಗಿಯೇ ಆರಂಭವಾಗುತ್ತದೆ. ಆದರೆ ಇನ್ನೇನು ರೈತ ಬೆಳೆದ ಬೆಳೆ ಮಾರುಕಟ್ಟೆಗೆ ಬರುತ್ತದೆ ಎನ್ನುವಷ್ಟರಲ್ಲಿ ವಕ್ಕರಿಸಿಕೊಂಡ ಕೊರೋನಾ ಮಹಾಮಾರಿಯಿಂದ ಬ್ಯಾಡಗಿ ಮಾರುಕಟ್ಟೆ ಬಂದ್ ಆಗಿದೆ. ಇದು ಮೆಣಸಿನಕಾಯಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಈಗಾಗಲೇ ಒಂದಲ್ಲ ಒಂದು ಕಾರಣದಿಂದ ಮೆಣಸಿನಕಾಯಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಲೇ ಇದ್ದರು. ಬೆಳೆ ಚೆನ್ನಾಗಿ ಬೆಳೆದಾಗ ಬೆಲೆಯ ಬರೆ ಬೀಳುತ್ತಿತ್ತು. ಆದರೆ ಅವರ ಬಾಳಲ್ಲೀಗ ಕೊರೋನಾ ಮತ್ತೊಂದು ಬರೆ ನೀಡಿದೆ.   

ಲಾಕ್ ಡೌನ್ ನಿಂದಾಗಿ ಮೆಣಸಿನಕಾಯಿ ಕಣಜ ಎಂದು ಕರೆಸಿಕೊಳ್ಳುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ತಾತ್ಕಾಲಿಕ ಬೀಗ ಬಿದ್ದಿದೆ. ಇದರಿಂದಾಗಿ ಬ್ಯಾಡಗಿ ಮಾರುಕಟ್ಟೆಯನ್ನೆ ನಂಬಿಕೊಂಡಿದ್ದ ಮೆಣಸಿನಕಾಯಿ ಬೆಳಗಾರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಈ ಮಾರುಕಟ್ಟೆ ಬಂದ್ ಆಗಿರುವುದರಿಂದ ಕೇವಲ ರೈತರಷ್ಟೆ ಅಲ್ಲ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಕೂಡ ತೀವ್ರ ತೊಂದರೆಗೊಳಗಾಗಿದ್ದಾರೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ 400ಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದಾರೆ. ಅಂದಾಜು 25 ಸಾವಿರ ಕುಟುಂಬಗಳ ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ. ಇನ್ನು ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ಬಹಯುತೇಕ ಜಿಲ್ಲೆಯಲ್ಲಿ ಬ್ಯಾಡಗಿ ಮೆನಸಿನ ಕಾಯೆ ಬೆಳೆಯನ್ನು ಲಕ್ಷಾಂತರ ರೈತರು ನಂಬಿಕೊಂಡಿದ್ದಾರೆ.

ಉಳ್ಳವರಿಗೆ ಮಾತ್ರ ಕೋಲ್ಡ್ ಸ್ಟೋರೇಜ್..!

ಬ್ಯಾಡಗಿ ಮೆಣಸಿನಕಾಯಿಗೆ ಬಹಳಷ್ಟು ಬೇಡಿಕೆ ಇರುವ ಕಾರಣದಿಂದ ಉತ್ತಮ ಬೆಲೆ ಸಿಗುವ ಹೊತ್ತಿನಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಲಾಗದ ಕಾರಣ ಬಹಳಷ್ಟು ರೈತರು ಕೋಲ್ಡ್ ಸ್ಟೋರೇಜ್ ನಲ್ಲಿ ತಾವು ಬೆಳೆದ ಬೆಳೆ ಸಂಗ್ರಹಿಸಿದ್ದಾರೆ. ಆದರೆ ನೂರಾರು ಎಕರೆಯಲ್ಲಿ ಮೆಣಸಿನ ಕಾಯಿ ಬೆಳೆದ ದೊಡ್ಡ ಹಿಡುವಳಿದಾರರಿಗೆ ಮಾತ್ರ ಈ ಸೌಲಭ್ಯ ದೊರೆತಂತಾಗಿದೆ. ತುಂಡು ಭೂಮಿಯನ್ನೇ ನಂಬಿದ ಮೆಣಸಿನಕಾಯಿ ಬೆಳೆದ ರೈತನಿಗೆ ಮಾತ್ರ ಮಾರುಕಟ್ಟೆ ಆರಂಭವಾಗಿ ಉತ್ತಮ ಧಾರಣೆ ಸಿಗುವವರೆಗೆ ಬೆಳೆಯನ್ನು ಎಲ್ಲಿ ಸಂಗ್ರಹಿಸಿಡಬೇಕು ಎನ್ನುವುದು ಚಿಂತೆಗೀಡು ಮಾಡಿದೆ.

ಬ್ಯಾಡಗಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ

ಬ್ಯಾಡಗಿ ಮೆಣಸಿನಕಾಯಿಯನ್ನು ಧೀರ್ಗ ಕಾಲದವರೆಗೂ ಹಾಳಗದಂತೆ ಇಡಬಹುದು. ಬ್ಯಾಡಗಿ ಮೆಣಸಿನಕಾಯಿಯ ಖಾರ ಮಸಾಲಾ ಕಂಪನಿಗಳು ಹೆಚ್ಚು ಖರಿದಿಸುತ್ತವೆ. ನೈಸರ್ಗಿಕ ಬಣ್ಣ ತಯಾರಿಕೆಗೂ ಕೂಡ ಬ್ಯಾಡಗಿ ಮೆಣಸು ಹೆಚ್ಚು ರಫ್ತಾಗುತ್ತದೆ. ಇದರಲ್ಲಿನ ಪ್ಯಾಬ್ರಿಕ್ ಅಂಶ ನೈಸರ್ಗಿಕ ಬಣ್ಣ ತಯಾರಿಕೆಗೆ ಸೂಕ್ತವಾದುದು ಎನ್ನುವ ಅಭಿಪ್ರಾಯವಿದೆ. ಇದರಲ್ಲಿ ರುಚಿ, ಗಾಟು ನೀಡುವ ಒಲಿಯೊರೆಸಿನ್ ಅಂಶ ಅಧಿಕವಾಗಿರುತ್ತದೆ. ಹೀಗಾಗಿ ಈ ಅಂಶವನ್ನು ಪ್ರತ್ಯೇಕಿಸಿ ಸಿದ್ಧ ಆಹಾರ ಉತ್ಪನ್ನ, ಪಾನೀಯ, ಸಾಸ್, ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಎಣ್ಣೆ, ನೈಲ್ ಪಾಲಿಶ್ ಹಾಗೂ ಲಿಪ್ ಸ್ಟಿಕ್ ತಯಾರಿಸುವುದಕ್ಕೂ ಹೆಚ್ಚಾಗಿ ಬಳಸುತ್ತಾರೆ.

          ಹೀಗಾಗಿ ಮುಂದಿನ ದಿನಗಳನ್ನು ನೆನೆಸಿಕೊಂಡರೆ ಮಾರುಕಟ್ಟೆ ಬಂದ್ ನಿಂದಾಗಿ ಮೆಣಸಿನಕಾಯಿ ರೈತರು, ಕೂಲಿಕಾರ್ಮಿಕರು, ವ್ಯಾಪರಸ್ಥರ ಸ್ಥಿತಿಯ ಜೊತೆಗೆ ಇದರಿಂದ ತಯಾರಿಸುವ ಪದಾರ್ಥಗಳ ಕಂಪನಿಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಸಧ್ಯ ಗ್ರೀನ್ ಝೋನ್ ನಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಶಿಘ್ರ ಮೆಣಸಿನಕಾಯಿ ಮಾರುಕಟ್ಟೆ ಆರಂಭವಾಗಬಹುದಾ? ಎಂದು ಮೆಣಸಿನಕಾಯಿ ಬೆಳೆಯನ್ನೆ ನಂಬಿದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಚಿವ ಸುಧಾಕರ್ ಪತ್ನಿ, ಪುತ್ರಿಗೂ ಕೊರೊನಾ ಪಾಸಿಟಿವ್..!

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ನಿ ಹಾಗೂ ಪುತ್ರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ…

ನಾಳೆ ರಾಜ್ಯ ಬಂದ್ – ರೈತರ ಹೋರಾಟದಿಂದಾಗಿ ಏನಿರತ್ತೆ? ಏನಿರಲ್ಲ?

ಬೆಂಗಳೂರು : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವಿರೋಧಿಸಿ…

ರೈತ ವಿರೋಧಿ ಕಾಯ್ದೆಗಳು ತಕ್ಷಣವೇ ರದ್ದು ಮಾಡಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರೈಲ್ ರೋಕೋ ಚಳುವಳಿಯನ್ನು ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಬೆಳೆ ರಕ್ಷಣೆಗೊಬ್ಬ ಆಪ್ತ: ನೇತಾಡುವ ಖಾಲಿ ಬಿಯರ್ ಬಾಟಲ್ಲು!

ನರೇಗಲ್ಲ: ಖಾಲಿ ಕ್ವಾಟರು ಬಾಟ್ಲಿ ಯಾವುದಕ್ಕೂ ಬರಂಗಿಲ್ಲ ಅನ್ನೋ ತರಹ ಯೋಗರಾಜ್ ಭಟ್ರು ಹಾಡು ಬರದಿದ್ರು.…