ಲಕ್ನೋ : ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಬ್ಬರನ್ನು ಮಹಿಳೆಯೊಬ್ಬರು ಥಳಿಸಿರುವ ಘಟನೆ ನಡೆದಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ. 

ಅನುಜ್ ನಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಘಟನೆಯ ಕುರಿತು ಮಾತನಾಡಿರುವ ಅನುಜ್ ಮಿಶ್ರಾ, ನನ್ನದು ಕಟ್ಟಡ ಉಪಕರಣಗಳ ಅಂಗಡಿ ಇದೆ. ಈ ಇಬ್ಬರು ಮಹಿಳೆಯರು ನಮ್ಮ ಅಂಗಡಿಯಿಂದ ರೂ. ಒಂದೂವರೆಯಿಂದ ಎರಡು ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿದ್ದರು. ಆದರೆ, ಹಣ ಪಾವತಿಸಿರಲಿಲ್ಲ. ಹಣ ಕೇಳಿದ್ದಕ್ಕೆ ಈ ರೀತಿಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಅಲ್ಲದೇ, ಅನುಜ್ ಮಿಶ್ರಾ ಅವರು, ಮಹಿಳೆಯರಿಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಮಹಿಳೆಯರಿಬ್ಬರಿಗೂ ಸೂಚನೆ ನೀಡಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಬಿಡುಗಡೆಗೂ ಮುನ್ನವೇ ಸದ್ದು ಮಾಡ್ತಿದೆ ಕೆಜಿಎಫ್-2 ಚಿತ್ರ

ಬೆಂಗಳೂರು: ಕೆಜಿಎಫ್ ಅಂದ್ರೆ ಸಾಕು ಪಡ್ಡೆ ಹುಡುಗರ ಕೇಕೆ ಶುರುವಾಗುತ್ತೆ. ಈ ಕೊರೊನಾ ಸಂಕಷ್ಟದಲ್ಲಿ ರಾಕಿ ಬಾಯ್ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಅಂದ್ಹಾಗೆ ಈ ಖುಷಿಗೆ ಕಾರಣ 18 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದ ಕೆಜಿಎಫ್-2 ಟೀಸರ್.

ಎಮ್ಎಲ್ಎ ಸಾಹೇಬ್ರಿಗೆ ಹೇಳಿ ಹೇಳಿ ಸಾಕಾಗಿ ಹೋಯ್ತು!: ರೈತರ…, ರೊಕ್ಕಾ ಹಾಕಿ ರಸ್ತೆ ರಿಪೇರಿ ಮಾಡಸಾಕತ್ತಾರ..!

ಸಾಕಷ್ಟು ರೈತರು ತಮ್ಮ ಹೊಲಗಳಿಗೆ ದಾರಿ ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ, ದಾರಿ ಸರಿಪಡಿಸುವಂತೆ ಪರಿ ಪರಿಯಾಗಿ ಬೇಡಿದರೂ ಸ್ಥಳೀಯ ಶಾಸಕರು ಮಾತ್ರ ಸ್ಪಂದಿಸದೆ ಇರುವುದು ಶಾಸಕರು ಬೇಜವ್ದಾರಿಗೆ ಹಿಡಿದ ಕೈಗನ್ನಡಿಯಂತಾಗಿದೆ.

ಲಕ್ಷ್ಮೇಶ್ವರ: ಗೋಡೆ ಕುಸಿತ, ತಪ್ಪಿದ ಅನಾಹುತ!

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೆರೆ ಓಣಿಯಲ್ಲಿ ಮನೆಗಳ ಗೋಡೆ ಕುಸಿದಿವೆ. ಲಕ್ಷ್ಮೇಶ್ವರ: ಬೆಂಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಜನ – ಜೀವನ ಅಸ್ತವ್ಯಸ್ಥಗೊಂಡಿದೆ.

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14295 ಕ್ಕೆ ಏರಿಕೆಯಾದಂತಾಗಿದೆ.