Browsing Tag
bangalore
100 posts
ಎಚ್.ಡಿ.ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸಿದ ಹೊರಟ್ಟಿ
ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ತಮ್ಮ ಹೆಸರು ಘೋಷಣೆ ಮಾಡಿದ್ದಕ್ಕೆ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಇಂದು ಬೆಳಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಬೇಟಿ ಕೊಟ್ಟು ಅವರು ಹೂಗುಚ್ಛ ನೀಡಿ ಗೌಡರಿಗೆ ಕೃತಜ್ಞತೆ ಸಮರ್ಪಿಸಿದರು.
21 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳಿಗೆ ಸಿಹಿ ಸುದ್ದಿ
ನೌಕರರ ರಾಜ್ಯ ವಿಮಾ ನಿಗಮದಡಿ ಬರುವ ನೌಕರರು ಇಎಸ್‌ಐಸಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲಿದ್ದಾರೆ. ಫೆಬ್ರವರಿ 1ರಿಂದ ಎಲ್ಲ 735 ಜಿಲ್ಲೆಗಳಲ್ಲಿ ಆರೋಗ್ಯ ಸಂಬAಧಿ ಸೇವೆ ಸಿಗಲಿದೆ. ಸದ್ಯ 387 ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಲಭ್ಯವಿತ್ತು. 187 ಜಿಲ್ಲೆಗಳಲ್ಲಿ ಭಾಗಶಃ ಸೇವೆಗಳು ಲಭ್ಯವಿದ್ರೆ 161 ಜಿಲ್ಲೆಗಳಲ್ಲಿ ಇಎಸ್‌ಐಸಿ ನೌಕರರಿಗೆ ಯಾವುದೇ ಸೇವೆ ಲಭ್ಯವಿರಲಿಲ್ಲ.