ಬೆಂಗಳೂರ : ದೀಪಾವಳಿಯ ಅಂಗವಾಗಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ 1 ಸಾವಿರ ಹೆಚ್ಚುವರಿ ಬಸ್ ಗಳನ್ನು ಓಡಿಸಲು ಮುಂದಾಗಿದೆ.

ಈ ಹೆಚ್ಚುವರಿ ಬಸ್ ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚಾರ ಮಾಡಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬೆಳಗಾವಿ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ,ಕೊಪ್ಪಳ, ಯಾದಗರಿ, ಬೀದರ್ ಹಾಗೂ ತಿರುಪತಿಗೆ ಹೆಚ್ಚುವರಿ ಬಸ್ ಗಳು ತೆರಳಲಿವೆ.

ಶಾಂತಿನಗರ ಬಸ್ ನಿಲ್ದಾಣದಿಂದ ಹೊರರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳ ವಿವಿಧ ನಗರಗಳಿಗೆ ವಿಶೇಷ ಬಸ್ ಗಳು ತೆರಳಲಿವೆ. ನ. 16ರಂದು ರಾಜ್ಯದ ವಿವಿಧ ಸ್ಥಳಗಳಿಂದ ಮತ್ತು ಅಂತರ್ ರಾಜ್ಯಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳು ಸಂಚರಿಸಲಿವೆ ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರಿಗೆ ಮುಂಗಡ ಬುಕ್ಕಿಂಗ್ ಕಾಯ್ದಿರುವ ಸೌಲಭ್ಯ ಕೂಡ ಕಲ್ಪಿಸಲಾಗಿದ್ದು, ಇ-ಟಿಕೆಟ್ ಬುಕಿಂಗ್ ವೆಬ್ ಸೈಟ್ www.ksrtc.in ಮೂಲಕ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

You May Also Like

ದೆಹಲಿಯಲ್ಲಿ ಸಮುದಾಯಕ್ಕೆ ಹಬ್ಬಿದ ಸೋಂಕು – ಸಭೆ!

ನವದೆಹಲಿ : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ…

ಪ್ರಧಾನಿಯ ಮನ್ ಕಿ ಬಾತ್ ಏನು?

ದೆಹಲಿ: ಇಂದು ಪ್ರದಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ಮಾಸಿಕ ಸಂಚಿಕೆಯಲ್ಲಿ…

ಭಾರತೀಯ ಟೆಕ್ಕಿಗಳಿಗೆ ಪೌರತ್ವ: ಮಹತ್ವದ ಆದೇಶಗಳಿಗೆ ಬೈಡನ್ ಸಹಿ

ವಾಷಿಂಗ್ಟನ್: ಅಮೆರಿrಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಿಸಿದ ಬೆನ್ನಲ್ಲೇ 15 ಮಹತ್ವದ ಆದೇಶಗಳಿಗೆ ಬೈಡೆನ್ ಸಹಿ ಮಾಡಿದ್ದಾರೆ.…

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.