ಬೆಂಗಳೂರು: ನೌಕರರ ರಾಜ್ಯ ವಿಮಾ ನಿಗಮದಡಿ ಬರುವ ನೌಕರರು ಇಎಸ್‌ಐಸಿ ಯೋಜನೆಯಡಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಲಿದ್ದಾರೆ. ಫೆಬ್ರವರಿ 1ರಿಂದ ಎಲ್ಲ 735 ಜಿಲ್ಲೆಗಳಲ್ಲಿ ಆರೋಗ್ಯ ಸಂಬAಧಿ ಸೇವೆ ಸಿಗಲಿದೆ. ಸದ್ಯ 387 ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಲಭ್ಯವಿತ್ತು. 187 ಜಿಲ್ಲೆಗಳಲ್ಲಿ ಭಾಗಶಃ ಸೇವೆಗಳು ಲಭ್ಯವಿದ್ರೆ 161 ಜಿಲ್ಲೆಗಳಲ್ಲಿ ಇಎಸ್‌ಐಸಿ ನೌಕರರಿಗೆ ಯಾವುದೇ ಸೇವೆ ಲಭ್ಯವಿರಲಿಲ್ಲ.


ಇಎಸ್‌ಐಸಿ ಅಡಿಯಲ್ಲಿ ಬರುವ ನೌಕರರು ಈವರೆಗೆ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಪಡೆಯುತ್ತಿದ್ದರು.

ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನೆಯಡಿ ಇಎಸ್‌ಐಸಿ ಅಡಿ ಬರುವ ಎಲ್ಲ ನೌಕರರಿಗೆ ಈ ಸೇವೆ ಸಿಗಲಿದೆ. ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ಒಪ್ಪಿಗೆ ಸಿಕ್ಕಿದೆ. ಏಪ್ರಿಲ್ 1ರಿಂದ ಎಲ್ಲ ಜಿಲ್ಲೆಗಳಲ್ಲಿ ಇಎಸ್‌ಐಸಿ ನೌಕರರಿಗೆ ಇಎಸ್‌ಐ ಯೋಜನೆಯಡಿ ಸೇವೆ ಸಿಗಲಿದೆ.


ಇಎಸ್‌ಐಸಿ ಫಲಾನುಭವಿಗಳು ಎಬಿಪಿಎಂಜೆವೈ ಆಸ್ಪತ್ರೆಯಲ್ಲಿ ಸೇವೆಯನ್ನು ಪಡೆಯಬಹುದು. ಹಾಗೆ ಎಬಿಪಿಎಂಜೆವೈ ಫಲಾನುಭವಿಗಳು ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಂಬAಧಿ ಸೇವೆಗಳನ್ನು ಪಡೆಯಬಹುದು. ಅನೇಕ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ತಿಂಗಳಿಗೆ 21 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವ ಕೈಗಾರಿಕಾ ಕಾರ್ಮಿಕರನ್ನು ಇಎಸ್‌ಐಸಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಪ್ರತಿ ತಿಂಗಳು ಸಂಬಳದ ಒಂದು ಭಾಗವನ್ನು ಕಡಿತಗೊಳಿಸಲಾಗುತ್ತದೆ. ಇದನ್ನು ಇಎಸ್‌ಐಸಿ ವೈದ್ಯಕೀಯ ಪ್ರಯೋಜನಕ್ಕೆ ಠೇವಣಿ ಇಡಲಾಗುತ್ತದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಪೊಲೀಸರ ಬೆನ್ನು ಬಿದ್ದ ಕೊರೊನಾ!

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಮುಂದುವರೆಯುತ್ತಿದೆ. ಪೊಲೀಸರೂ ಇದಕ್ಕೆ ಹೊರತಲ್ಲ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ – ತಾಲೂಕಾಡಳಿತದಿಂದ ಅಹವಾಲು ಸ್ವೀಕಾರ
ಗೋಳು ತೋಡಿಕೊಂಡ ಗೊಳಸಂಗಿ ಜನ.!

ಉತ್ತರಪ್ರಭ ಸುದ್ದಿಗೊಳಸಂಗಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಗೊಳಸಂಗಿ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ…

ಕೊರೋನಾ ಕಾವ್ಯ-9

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ಡಾ.ಸಂಗಯ್ಯ ಶೇ ಶಿರೂರಮಠ ಅವರು. ಪುಣೆಯ ಡಿಫೆನ್ಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಯದ ಗೂಡಿನಲ್ಲಿ ಒಂದಾದ ಜೀವಗಳ ತಲ್ಲಣವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಬಿಜೆಪಿ ಶಾಸಕರಿಗೆ ಕನಕಶ್ರೀ ಎಚ್ಚರಿಕೆ

ಉಸ್ತುವಾರಿಯಿಂದ ತೆಗೆಸಲು ದಾವಣಗೆರೆಯ ಕೆಲ ಬಿಜೆಪಿ ಶಾಸಕರು ಹವಣಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.