ಬೆಂಗಳೂರು: 2019-20 ನೇ ಸಾಲಿನಿಂದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಲು ಸೂತ್ತೋಲೆಗಳನ್ನು ಹೊರಡಿಸಲಾಗಿದೆ.

ಈಗಾಗಲೇ ಜನವರಿ ಮತ್ತು ಫೆಬ್ರುವರಿ 2021 ರ ಮಾಹೆಗಳಲ್ಲಿ ಕಾರ್ಯಕ್ರಮಕ್ಕೆ ಸುತ್ತೋಲೆಯನ್ವಯ ದಿನ ನಿಗಧಿ ಪಡಿಸಿದೆ. ಅಲ್ಲದೇ, ಮಾರ್ಚ ಏಪ್ರೀಲ್, ಮೇ, ಜೂನ್ ಹಾಗೂ ಜುಲೈ 2021 ರ ಮಾಹೆಗಳಲ್ಲಿ ಸಾಮೂಹಿಕ ವಿವಾಹವನ್ನು ನಡೆಸುವ ಬಗ್ಗೆ ದಿನಾಂಕ ನಿಗದಿಪಡಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳವ ವಧು-ವರರಿಗೆ ವಿವಾಹಗಳನ್ನು ನಡೆಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಲು ಸಚಿವರು ಸೂಚಿಸಿದ್ದಾರೆ.

ಶರತ್ತು ನೀಡಲಾಗಿದ್ದು, ಆಗಮ ಪಂಡಿತರು ಈಗ ನೀಡಿರುವ ದಿನಾಂಕಗಳಲ್ಲಿ ಕಾರ್ಯಕ್ರಮ ರೂಪಿಸಲು ಸಾಧ್ಯವಾಗದಿದ್ದಲ್ಲಿ ಬೇರೊಂದು ಸೂಕ್ತ ದಿನಾಂಕ ಜಿಲ್ಲಾ ಧಾರ್ಮಿಕ ಷರತ್ತಿನ ಆಗಮ ಪಂಡಿತರು ಇತರ ಅನಕೂಲಕರ ದಿನಾಂಕ ಬಯಸಿದ್ದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ದಿನಾಂಕ ಮತ್ತು ಮೂಹೂರ್ತಗಳನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು. ವರ್ಷದ ಪ್ರತಿ ತಿಂಗಳು ಮೊದಲ ದಿನದಿಂದ ಕೊನೆಯ ದಿನದ ವರೆಗೆ ನೊಂದಣಿ ಆದವರನ್ನು ಮುಂದಿನ ತಿಂಗಳ ಮೂಹೂರ್ತ ದಿನಾಂಕಗಳಲ್ಲಿ ಯಾವುದಾದರೂ ಒಂದು ದಿನಾಂಕದAದು ಸಾಮೂಹಿಕ ವಿವಾಹ ನಡೆಸಬೇಕು. ಸಪ್ತಪದಿ ಸಾಮೂಹಿಕ ವಿವಾಹಕ್ಕೆ ನೊಂದಾಯಿಸಿಕೊAಡು ವಿವಾಹವಾಗಲು ಇಚ್ಚಿಸುವ ವಧುವರರ ವಿವಾಹಗಳನ್ನು ಸಂಬAಧಪಟ್ಟ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು/ ಆಡಳಿತಾಧಿಕಾರಿಗಳು/ ಅನುವಂಶಿಕ ಮೊಕ್ತೆಸಸರು/ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ/ ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರ ಅನುಮತಿ ಪಡೆದು ಕೋವಿಡ್-19 ನಿಭಂದನೆಗಳನ್ನ ಅಳವಡಿಸಿಕೊಂಡು ಅನಕೂಲವಾಗುವ ದಿನಾಂಕದAದು ಸಾಮೂಹಿಕ ವಿವಾಹವನ್ನು ನಡೆಸಲು ತಿಳಿಸಿದೆ.

2021ರ ಮಾರ್ಚ 1 ರಿಂದ ಜುಲೈ ಮಾಹೆಯ ವರೆಗಿನ ದಿನಾಂಕಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಮಾ.5 ರಂದು ಮೀನ ಅಭಿಜಿನ ಬೆಳಗ್ಗೆ 7.50 ರಿಂದ 8-40ರ ವರೆಗೆ ಮತ್ತು 12 ರಿಂದ 12-45ರ ವರೆಗೆ, ಮಾ.8 ರಂದು ಮೀನ-ವೃಷಭ, ಬೆಳಗ್ಗೆ 7-50 ರಿಂದ 8-40ರ ವರೆಗೆ ಮತ್ತು 10.30 ರಿಂದ 11.30ರ ವರೆಗೆ, ಮಾ15 ರಂದು ವೃಷಭ-ಅಭಿಜಿನ ಬೆಳಗ್ಗೆ 11 ರಿಂದ 12ರ ವರೆಗೆ, ಮಾ.26 ರಂದು ಅಭಿಜಿನ ಮದ್ಯಾಹ್ನ 12 ರಿಂದ 12.45ರ ವರೆಗೆ, ಮಾ.31 ರಂದು ಅಭಿಜಿನ 11 ರಿಂದ 12ರ ವರೆಗೆ ಸಮಯ ನಿಗಧಿಪಡಿಸಲಾಗಿದೆ.

ಏ.2 ರಂದು ಅಭಿಜಿನ ಮದ್ಯಾಹ್ನ 12 ರಿಂದ 12.45ರ ವರೆಗೆ, ಏ.4 ರಂದು ಅಭಿಜಿನ 11 ರಿಮದ 12 ರ ವರೆಗೆ, ಏ.19 ರಂದು ಅಭಿಜಿನ ಬೆಳಗ್ಗ 11 ರಿಂದ 12ರ ವರೆಗೆ, ಏ.22 ರಂದು ಅಭಿಜಿನ ಬೆಳಗ್ಗೆ 11-45 ರಿಂದ 12.45ರ ವರೆಗೆ, ಏ.25 ರಂದು ಅಭಿಜಿನ ಬೆಳಗ್ಗೆ 11 ರಿಂದ ಮದ್ಯಾಹ್ನ 12ರ ವರೆಗೆ, ಏ.29 ರಂದು ಅಭಿಜಿನ ಬೆಳಗ್ಗೆ 11.30 ರಿಂದ 12.30ರ ವರೆಗೆ ಮೂಹೂರ್ತ ನಿಗಧಿ ಪಡಿಸಲಾಗಿದೆ.

ಮೇ.3 ರಂದು ಅಭಿಜಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 12ರ ವರೆಗೆ, ಮೇ.6 ರಂದು ಅಭಿಜಿನ ಬೆಳಗ್ಗೆ 11.30 ರಿಂದ 12.45ರ ವರೆಗೆ, ಮೇ.9 ರಂದು ಅಭಿಜಿನ್ ಬೆಳಗ್ಗೆ 11 ರಿಂದ ಮಧ್ಯಾಹ್ನ 12ರ ವರೆಗೆ, ಏ.13 ರಂದು ಅಭಿಜಿನ ಬೆಳಗ್ಗೆ 11 ರಂದು 12.30ರ ವರೆಗೆ, ಏ.21 ರಂದು ಅಭಿಜಿನ ಮಧ್ಯಾಹ್ನ 12 ರಿಂದ 12.45ರ ವರೆಗೆ, ಮೇ.30 ರಂದು ಅಭಿಜಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 12ರ ವರೆಗೆ ನಿಗಧಿಪಡಿಸಲಾಗಿದೆ.

ಜೂ.4 ರಂದು ಅಭಿಜಿನ ಮದ್ಯಾಹ್ನ 12 ರಿಂದ 12.45ರ ವರೆಗೆ, ಜೂ.13 ರಂದು ಅಭಿಜಿನ ಬೆಳಗ್ಗೆ 11 ರಿಂದ ಮದ್ಯಾಹ್ನ 12ರ ವರೆಗೆ, ಜೂ.17 ರಂದು ಅಭಿಜಿನ ಬೆಳಗ್ಗೆ 11.20 ರಿಂದ ಮದ್ಯಾಹ್ನ 12.45ರ ವರೆಗೆ, ಜೂ.27 ರಂದು ಅಭಿಜಿನ ಬೆಳಗ್ಗೆ 11 ರಿಂದ ಮದ್ಯಾಹ್ನ 12ರ ವರೆಗೆ ವಿವಾಹ ಮೂಹೂರ್ತ ಸೂಚಿಸಲಾಗಿದೆ.

ಜು.1 ರಂದು ಅಭಿಜಿನ ಬೆಳಗ್ಗೆ 11.15 ರಿಂದ ಮಧ್ಯಾಹ್ನ 12.45ರ ವರೆಗೆ, ಜು.4 ರಂದು ಅಭಿಜಿನ ಬೆಳಗ್ಗೆ 11 ರಿಂದ 12ರ ವರೆಗೆ, ಜು.7 ರಂದು ಅಭಿಜಿನ ಬೆಳಗ್ಗೆ 11 ರಿಂದ 12ರ ವರೆಗೆ ಮೂಹೂರ್ತ ನಿಗಧಿಪಡಿಸಿ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಟೀಕಾಕಾರರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ: ಕೆ.ಸುಧಾಕರ್

ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.

ಸರ್ಕಾರದ ಮಾರ್ಗಸೂಚಿ ಬದುಕಿನ ಭಾಗವಾಗಬೇಕು: ಸುಧಾಕರ್

ಕೋವಿಡ್ ರೋಗಕ್ಕೆ ಲಸಿಕೆ ಸಿಗುವತನಕ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ತಮ್ಮಬದುಕಿನ ಭಾಗವಾಗಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಹೆಚ್ಚಿದ ಕಾಂಗ್ರೆಸ್ ಆಕಾಂಕ್ಷಿಗಳ ಸಂಖ್ಯೆ: ಮುಂದೂಡಿದ ಅರ್ಜಿ ಸಲ್ಲಿಕೆ

ಉತ್ತರಪ್ರಭಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುಂದಿನ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ…

ನರೇಗಲ್ಲ್ : ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಒತ್ತಾಯ

ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಒತ್ತಾಯ ನರೇಗಲ್: ಪಟ್ಟಣದ 7ನೇ ವಾರ್ಡ್ನ ದ್ಯಾಂಪುರ ಸಮೀಪ ನಿರ್ಮಿಸಲಾಗಿರುವ ಆಶ್ರಯ ನಿವೇಶನಗಳನ್ನು ಈ ಹಿಂದೆ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ದಲಿತ ಸಂಘರ್ಷ ಸಮಿತಿ ಉಪತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.