ಬೆಂಗಳೂರು: ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ. (85) ತಡರಾತ್ರಿ ನಿಧನರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಅವರು, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1994 ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ಶಾಸಕರಾಗಿದ್ದು, 7 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಉಸಿರಾಟದ ತೊಂದರೆ ಹಿನ್ನೆಲೆ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಒಂದು ಗಂಟೆಗೆ ನಿಧನರಾಗಿದ್ದಾರೆ.

ಪತ್ನಿ ಓರ್ವ ಪುತ್ರಿ ನಾಲ್ವರು ಪುತ್ರರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

Leave a Reply

Your email address will not be published. Required fields are marked *

You May Also Like

ವಿಕೆಂಡ್ ಕರ್ಪ್ಯೂಗೆ ವಾಣಿಜ್ಯ ನಗರಿ ಸ್ಥಬ್ಧ

ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಎರಡನೇ ಪ್ರಿಯಕರನಿಂದ ಮೊದಲನೇ ಪ್ರಿಯಕರನ ಮೇಲಿನ ಸೇಡು ತೀರಿಸಿಕೊಂಡ ಪ್ರೇಯಸಿ!

ಶಿವಮೊಗ್ಗ : ಎರಡನೇ ಪ್ರಿಯಕರನಿಂದ ಮೊದಲ ಪ್ರಿಯಕರನನ್ನು ಪ್ರೇಯಸಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ ಸಾವಿನ ಸಂಖ್ಯೆ 3 ಕ್ಕೆ ಏರಿಕೆ!

ಗದಗ: ಜಿಲ್ಲೆಯಲ್ಲಿಂದು‌ ಕೊರೊನಾ ಸೋಂಕಿಗೆ 95 ವರ್ಷದ ವೃದ್ಧೆ ಬಲಿಯಾಗಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ…

ಕೊರೋನಾ ಸೋಂಕು ಹರಡುತ್ತಿರುವುದರ ಹಿಂದಿನ ಕ್ವಾರಂಟೈನ್ ಕಥೆ ಏನು ಗೊತ್ತಾ..!

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚತ್ತಲಿದ್ದು ಜನರಲ್ಲಿ ಸಹಜವಾಗಿಯೇ ಆತಂಕ ಮನೆಮಾಡಿದೆ. ಆದರೆ ಕೊರೋನಾ ಸೋಂಕು ಇನ್ನೇನು ನಿಯಂತ್ರಣಕ್ಕೆ ಬರುತ್ತದೆ ಎನ್ನುವಷ್ಟರಲ್ಲಿ ವಲಸಿಗರಿಗೆ ವಿನಾಯಿತಿ ನೀಡಲಾಯಿತು. ಇದು ಒಂದು ರೀತಿಯಿಂದ ಸೋಂಕು ಮತ್ತಷ್ಟು ಹರಡಲು ಕಾರಣವಾಯಿತು ಎನ್ನಬಹುದು.