ಉತ್ತರಪ್ರಭ ಸುದ್ದಿ
ಮುಳಗುಂದ:
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಾಂತೇಶ ಬಾತಾಖಾನಿ, ಎಂ.ಡಿ.ನರಗುoದ, ಸಿ.ಎಸ್.ಪತ್ರಿ, ಮಂಜುನಾಥ ಮಜ್ಜಿಗುಡ್ಡ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲದ ಅಧ್ಯಕ್ಷ ದ್ಯಾಮಣ್ಣ ನೀಲಗುಂದ ಹೇಳಿದರು.
ಈ ಕುರಿತು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ನಾಲ್ವರು ಬಿಜೆಪಿ ಪಕ್ಷದ ಹೆಸರು ಬಳಸಿಕೊಂಡು ಪಕ್ಷ ವಿರೋಧಿ ಹೇಳಿಕೆಗಳನ್ನ ಪತ್ರಿಕೆಗಳ ಮೂಲಕ ನೀಡಿದ್ದಾರೆ, ಮುಳಗುಂದದ ಜಾತ್ರಾ ಕಾರ್ಯಕ್ರಮವೊಂದಕ್ಕೆ ಕಾಂಗ್ರೆಸ್ ಪಕ್ಷದ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಹೆಸರುಗಳನ್ನ ಆಮಂತ್ರಣ ಪತ್ರಿಕೆಯಲ್ಲಿ ಹಾಕಿ ಅವರನ್ನ ಆವ್ಹಾನಿಸಬೇಕು. ಎಂದು ಈಚೆಗೆ ಪತ್ರಿಕೆ ಮೂಲಕ ಆಗ್ರಹಿಸಿದ್ದರು, ಇದಲ್ಲದೆ ಹಲವು ಭಾರಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹೀಗಾಗಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಸಹಿ ಸಂಗ್ರಹಿಸಿ, ಒಮ್ಮತದಿಂದ ಈ ನಾಲ್ವರನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಘಟಕದ ಅಧ್ಯಕ್ಷ ಮಲ್ಲಪ್ಪ ಕುಂದಗೋಳ, ಯುವ ಘಟಕದ ಅಧ್ಯಕ್ಷ ಕಿರಣ ಬಾತಾಖಾನಿ, ಮುಖಂಡರಾದ ಮಲ್ಲಪ್ಪ ಬಳ್ಳಾರಿ, ಲಕ್ಷ್ಮಣ ಇಂಗಳಹಳ್ಳಿ, ಅಕ್ಷಯ ಬಟ್ಟೂರ, ಕುಮಾರ ಸುಂಕಾಪೂರ, ದೇವಪ್ಪ ಪಾಟೀಲ, ಬಸವರಾಜ ಬೈಲಪ್ಪನವರ, ನಾಗರಾಜ ಕತ್ತಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಕನಕ ದುರ್ಗಾದೇವಿಯ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದಲ್ಲಿ ಆದಿ ದೇವತೆ ಕನಕ ದುರ್ಗಾದೇವಿಯ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ರಂಗೇರಿದೆ ಹಳ್ಳಿ ಅಖಾಡ : ಕಣಕ್ಕೆ ಇಳಿದಿದ್ದಾರೆ 302 ಜನ

ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹಲವಾರು, ರೀತಿಯ ಹರಸಾಹಸ ಮಾಡುತ್ತಿದ್ದಾರೆ. ನರೇಗಲ್ ಹೋಬಳಿಯ ಹಳ್ಳಿಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯವಾಗಿತ್ತು. ಹೀಗಾಗಿ ಈಗಾಗಲೇ ಅಖಾಡ ಸಿದ್ಧವಾದಂತೆ ಕಾಣುತ್ತಿದೆ.

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಟಿಸಿಇ ಹ್ಯಾಕಥಾನ್

ಗದಗ: ಇಂದು ಪ್ರತಿಯೊಬ್ಬರ ಜೀವನದಲ್ಲಿ ತಾಂತ್ರಿಕತೆ ಪಾತ್ರ ಮಹತ್ವದ್ದಾಗಿದೆ. ಪ್ರತಿ ರಂಗದಲ್ಲಿ ತಾಂತ್ರಿಕತೆ ಅವಶ್ಯವಾಗಿದ್ದು ತಾಂತ್ರಿಕತೆ…

ನೀರು ಪಾಲಾದ ಬಾಲಕನ ಮೃತದೇಹ ಪತ್ತೆ

ಪಟ್ಟಣದ ಅಗಸ್ತ್ಯತೀರ್ಥ ಬಾವಿಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಗುರುವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿತ್ತು.