ನಿಂಗಪ್ಪ ಬಿ. ಮಡಿವಾಳರ

ನರೇಗಲ್: ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರುತ್ತಿದ್ದು, ಗೆಲುವಿಗಾಗಿ ಹಲವಾರು, ರೀತಿಯ ಹರಸಾಹಸ ಮಾಡುತ್ತಿದ್ದಾರೆ. ನರೇಗಲ್ ಹೋಬಳಿಯ ಹಳ್ಳಿಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯವಾಗಿತ್ತು. ಹೀಗಾಗಿ ಈಗಾಗಲೇ ಅಖಾಡ ಸಿದ್ಧವಾದಂತೆ ಕಾಣುತ್ತಿದೆ.

ಗ್ರಾಮ ಪಂಚಾಯ್ತಿ ಚುನಾವಣೆ ದಿನ ಘೋಷಣೆಯಾದ ದಿನದಿಂದ ನರೇಗಲ್ ಹೋಬಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಚುನಾವಣೆಯ ಕಣ ರಂಗೇರಿದ್ದು, ಒಟ್ಟು 302 ನಾಮಪತ್ರಗಳು ಸಲ್ಲಿಕೆಯಾಗಿವೆ. ಎಲ್ಲೆಡೆ ಮತದಾರರ ಓಲೈಕೆಯ ಪ್ರಯತ್ನಗಳು ಗರಿಗೆದರಿವೆ.

ಗ್ರಾಪಂ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ ಅಭ್ಯರ್ಥಿಗಳು ಸೇರಿದಂತೆ ಅವರ ಕುಟುಂಬ ಸದಸ್ಯರು ಮೊದಲ ದಿನದಿಂದಲೇ ಗ್ರಾಮದ ಎಲ್ಲರ ಮನೆಗೆ ತೆರಳಿ ಒಂದು ಸುತ್ತಿನ ಮತ ಬೇಟೆಯ ಕಸರತ್ತು ಮುಗಿಸಿದ್ದಾರೆ. ಜತೆಗೆ ಗ್ರಾಮಗಳಲ್ಲಿ ಹೆಚ್ಚು ಮತ ಇರುವ ಕುಟುಂಬ, ಪ್ರಬಲ ಸಮುದಾಯಗಳ ಮುಖಂಡರಿಗೆ ಹಳ್ಳಿಗಳಲ್ಲಿ ಡಿಮ್ಯಾಂಡಪೋ.. ಡಿಮ್ಯಾಂಡು ಎನ್ನುವಂತಾಗಿದೆ.

ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವಂತರು ಪದವಿದರರು ಸ್ಪರ್ಧೆಯಲ್ಲಿ ಕಂಡು ಬಂದಿರುವುದು ವಿಶೇಷವಾಗಿದೆ. ಯಾರೇ ಆಯ್ಕೆಯಾಗಲಿ ಗ್ರಾಮದ ಅಭಿವೃದ್ಧಿಯಾದರೆ ಸಾಕು. ಸಂಗಮೇಶ ಮೆಣಸಿಗಿ, ಸ್ಥಳೀಯರು

ಹೋಬಳಿಯ ಅಬ್ಬಿಗೇರಿ ಗ್ರಾಮ ಪಂಚಾಯ್ತಿಯಲ್ಲಿ 105 ನಾಮ ಪತ್ರ ಸಲ್ಲಿಕೆಯಾಗುವ ಮೂಲಕ ಶತಕದ ಗಡಿ ದಾಟಿದೆ. ಹಾಲಕೆರೆ ಗ್ರಾಮ ಪಂಚಾಯ್ತಿಗೆ 24 ನಾಮ ಪತ್ರ ಸಲ್ಲಿಕೆಯಾಗಿದ್ದರೆ ಅದೇ ಗ್ರಾಮದ 3ನೇ ವಾರ್ಡಿನಿಂದ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಉಳಿದಂತೆ ನಿಡಗುಂದಿ ಗ್ರಾಮ ಪಂಚಾಯ್ತಿಗೆ 35, ಮಾರನಬಸರಿ ಗ್ರಾಮ ಪಂಚಾಯ್ತಿಗೆ 50, ಜಕ್ಕಲಿ ಗ್ರಾಮ ಪಂಚಾಯ್ತಿಗೆ 46 ನಾಮಪತ್ರ ಸಲ್ಲಿಕೆಯಗಿವೆ. ಜಕ್ಕಲಿಯಲ್ಲಿ ಬಿ.ಕಾಂ ಹಾಗೂ ಬಿ.ಎ ಪದವಿದರ ನಾಮಪತ್ರ ಸಲ್ಲಿಸಿದ್ದು, ವಿಶೇಷವಾಗಿದೆ. ಹೊಸಳ್ಳಿ ಗ್ರಾಮ ಪಂಚಾಯ್ತಿಗೆ 42 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಆಯಾ ಭಾಗದ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮಗಳಲ್ಲಿರುವ ಪ್ರಮುಖ ಸಂಘಗಗಳು ಹಾಗೂ ಸಂಸ್ಥೆಗಳಿಗೆ ಇಂತಿಷ್ಟು ಕಾಣಿಕೆ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಅಭ್ಯರ್ಥಿಗಳು ನೀಡಿದ್ದಾರೆ. ಹಾಗೆಯೇ ಮಹಿಳಾ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಸ್ತಿçÃಶಕ್ತಿ ಸಂಘಗಳ ಬಾಗಿಲು ತಟ್ಟುತ್ತಿದ್ದಾರೆ. ಹತ್ತಾರು ಭರವಸೆಯ ಮೂಲಕ ಮತಬೇಟೆಯ ತಂತ್ರಗಾರಿ ಹಳ್ಳಿ ಅಖಾಡದಲ್ಲಿ ನಡೆದಿದೆ.

ದುಡಿಯಲು ಹೋಗಿದ್ದ ಅದೇಷ್ಟೋ ಜನರು ಮತ್ತೇ ಊರಿಗೆ ಮರಳಿದ್ದಾರೆ. ಜನರಿಂದ ಗ್ರಾಮ ತುಂಬಿ ತುಳುಕುತ್ತಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ಕರ್ಪ್ಯೂಗೆ ಶಿರಹಟ್ಟಿ ಸಂಪೂರ್ಣ ಸ್ತಬ್ಧ..!

ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ವೀಕೆಂಡ್ ಕಫ್ಯೂ೯ಗೆ ಶನಿವಾರ ಪಟ್ಟಣ ಸಂಪೂರ್ಣ ಸ್ಥಬ್ಧವಾದ ಚಿತ್ರಣ ಕಂಡು ಬಂದಿತು.

ವಿದ್ಯುತ್ ಸ್ಪರ್ಶ ವ್ಯಕ್ತಿ ಸಾವು

ಉತ್ತರಪ್ರಭ ಮುಳಗುಂದ: ಸಮೀಪದ ಬಸಾಪೂರ ಗ್ರಾಮದ ಹತ್ತಿರದ ತೋಟದಲ್ಲಿ ನೀರು ಹಾಯಿಸಲು ಮೋಟರ್ ಸ್ವಿಚ್ ಹಾಕುವ…

ವೃತ್ತಕ್ಕೆ ದಿ. ಆರ್.ಎನ್.ದೇಶಪಾಂಡೆ ನಾಮಕರಣಕ್ಕೆ ಮನವಿ

ಮುಳಗುಂದ: ಪಟ್ಟಣದ ಹೃದಯ ಭಾಗದ ಗಾಂಧಿಕಟ್ಟಿಯ ಹತ್ತಿರ ವೃತ್ತ ಪ.ಪಂ ಮಾಜಿ ಸದಸ್ಯ ದಿ.ಆರ್.ಎನ್ ದೇಶಪಾಂಡೆ ಅವರ ಹೆಸರು ನಾಮಕರಣ ಮಡಬೇಕು. ಎಂದು ಉನ್ನತಿ ಮಹಿಳಾ ಸಮಾಜ ಸೇವೆ ಹಾಗೂ ವಿವಿದೋದ್ದೇಶಗಳ ಸಂಘ, ಜೈ ಮಾತಾ ಜೀಜಾಬಾಯಿ ಕ್ಷತ್ರೀಯ ಮರಾಠ ಮಹಿಳಾ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ.ಪಂ.ಮುಖ್ಯಾಧಿಕಾರಿ ಎಂಎಸ್.ಬೆಂತೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಅಂದರ ಬಾಹರ ಆಡುತ್ತಿದ್ದ 6 ಜನ ಬಂದನ

ಲಕ್ಷ್ಮೇಶ್ವರ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೊಡಿಯಲ್ಲಮ್ಮ ದೇವಸ್ಥಾನದ ಮುಂಬಾಗ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಇಸ್ಪೀಟ್ (ಅಂದರ ಬಾಹರ)…