ಲಕ್ಷ್ಮೇಶ್ವರ: ಪಟ್ಟಣದ ಅಗಸ್ತ್ಯತೀರ್ಥ ಬಾವಿಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಗುರುವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿತ್ತು.

ಅಗ್ನಿಶಾಮಕ ದಳದವರು ಇಡಿ ದಿನ ಶೋಧ ಕಾರ್ಯ ನಡೆಸಿದ್ದರು. ಆದರೆ ಮೃತದೇಹ ಸಿಕ್ಕಿರಲಿಲ್ಲ. ಶುಕ್ರವಾರ ಬಾವಿಯಲ್ಲಿ ಮೃತದೇಹ ಪತ್ತೆಯಾಯಿತು. ಹರ್ಷವರ್ಧನ ನೀರು ಪಾಲಾದ ಬಾಲಕ. ದೀಪಾವಳಿಗೆ ಬ್ಯಾಡಗಿಯಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಹರ್ಷವರ್ಧನ, ಬಾವಿಗೆ ಈಜಲು ಹೋದಾಗ ದುರ್ಘಟನೆ ಸಂಭವಿಸಿತ್ತು.

ರಸ್ತೆಯ ಪಕ್ಕದಲ್ಲಿ ಓಡಾಡುವ ಸಾರ್ವಜನಿಕರು ಸಂಶಯಾಸ್ಪದವಾಗಿ ಬಾವಿ ಕಡೆಗೆ ಹೋದಾಗ ಘಟನೆ ಬೆಳಕಿಗೆ ಬಂದಿತ್ತು. ಬಾವಿಯ ದಡದ ಮೇಲೆ ಬಟ್ಟೆ, ಚಪ್ಪಲಿಗಳು ಕಂಡು ಬಂದ ಹಿನ್ನೆಲೆ ಬಾಲಕ ನೀರಿನಲ್ಲಿ ಮುಳಗಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಗುರುವಾರ ಶೋಧ ಕಾರ್ಯ ನಡೆಸಿದರೂ, ಮೃತ ದೇಹ ಪತ್ತೆಯಾಗಿರಲಿಲ್ಲ‌. ಆದರೆ ಶುಕ್ರವಾರ ತಾನಾಗಿಯೇ ನೀರಿನಲ್ಲಿ ಮೃತದೇಹ ತೇಲುತ್ತಿರುವುದು ಕಂಡು ಬಂದಿತು. ಕುಟುಂಬಸ್ಥರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *

You May Also Like

ಧಾರವಾಡ ವಿಧಾನ ಪರಿಷತ್ ಚುಣಾವಣೆ ; ಸಲೀಂ ಅಹ್ಮದ ಭರ್ಜರಿ ಜಯ

ಉತ್ತರಪ್ರಭ ಧಾರವಾಡ: ಇಂದು ಧಾರವಾಡ ವಿಧಾನ ಪರಿಷತ್ ಚುಣಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ…

ಹಾವು ರಕ್ಷಕ ಡ್ಯಾನಿಯಲ್ ಗೆ ಕಚ್ವಿದ ಹಾವು: ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ನಗರದ ಉರಗ ಪ್ರೇಮಿ ಹಾಗೂ ಹಾವು ರಕ್ಷಕ ಡ್ಯಾನಿಯಲ್ ನ್ಯೂಟನ್ ನಿಗೆ ಹಾವು ಕಚ್ಚಿದ್ದು…

ಪಾಸಿಟಿವಿಟಿ ದರ ಹೆಚ್ಚಿದ್ದಲ್ಲಿ ವಿಶೇಷ ನಿಗಾ ವಹಿಸಿ

ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಜನರು ಸೋಂಕು ತೆಡೆಗಟ್ಟುವಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಕೆ ಅವರು ತಿಳಿಸಿದ್ದಾರೆ.

Игровые Автоматы Онлайн Бесплатно и на Реальные Деньги

Игровые Автоматы Онлайн Бесплатно и на Реальные Деньги Игровые автоматы играть бесплатно…