ಬರಹ : ಗುಲಾಬಚಂದ ಆರ್.ಜಾಧವ. ಆಲಮಟ್ಟಿ

ಆಲಮಟ್ಟಿ : ಇಲ್ಲಿನ ಗುರು ಬಳಗದ ಅಭಿಲಾಷೆಯಂತೆ ಶಿಕ್ಷಣ ಚಿಂತಕ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಅವರ ಹೆಸರಿನಲ್ಲಿ ನೂತನ ಸಭಾ ವೇದಿಕೆಯೊಂದು ಸರಿ ಸುಮಾರು ಎರಡು ಲಕ್ಷ ರೂ.ವೆಚ್ಚದಲ್ಲಿ ಇಲ್ಲಿನ ಕೃಷ್ಣೆಯ ಶಾಲಾ ವಿದ್ಯಾ ದೇಗುಲದ ಅಂಗಳದಲ್ಲಿ ನಿಮಾ೯ಣವಾಗಿದೆ. ಅದರ ಉದ್ಘಾಟನೆಯು ಇದೇ ಗುರುವಾರ ನೆರವೇರಲಿದೆ. ಬಳಿಕ ಅಂದು ಸಂಸ್ಥೆಯ ಶಾಲಾ,ಕಾಲೇಜುಗಳ ವತಿಯಿಂದ ಹಮ್ಮಿಕೊಂಡಿರುವ ಕರುನಾಡು ಗಾಂಧಿ ಉತ್ಸವ, ಪುಸ್ತಕ ಪ್ರೇಮಿ ಲಿಂ. ಡಾ.ತೋಂಟದ ಸಿದ್ದಲಿಂಗ ಶ್ರೀಗಳವರ ಹಾಗೂ ವಚನ ಗುಮ್ಮಟ ಡಾ.ಫ.ಗು.ಹಳಕಟ್ಟಿಯವರ ಸ್ಮರಣೋತ್ಸವ ಮತ್ತು ಎಸ್.ವ್ಹಿ.ವ್ಹಿ.ಸಂಸ್ಥೆ ಅಡಿಯಲ್ಲಿ ಶರಣರ ನಾಮ ಧ್ಯೇಯದೊಂದಿಗೆ ಜ್ಞಾನ ಪ್ರಸರಣ ಗೈಯುತ್ತಿರುವ ವಿವಿಧ ಶಾಲಾ,ಕಾಲೇಜುಗಳ ವಾಷಿ೯ಕ ಸ್ನೇಹ ಸಮ್ಮೇಳನ ಇದೇ ನವ ವೇದಿಕೆಯಲ್ಲಿ ಜರುಗಲಿದೆ.

ಶಿಕ್ಷಣ ಚಿಂತಕ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಭಾವಚಿತ್ರ


ಶಿಕ್ಷಣ ದಾಹಿ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಯಶೋಗಾಥೆಯ ಒಂದು ಮೆಲುಕು…! ಸಾಮಾನ್ಯರಲ್ಲೇ ಸಾಮಾನ್ಯರಾಗಿರುವ ಸಮಾಜಮುಖಿ ಚಿಂತನೆಯ ಹಿತಚಿಂತಕ ಪ್ರಾ.ಶಿವಾನಂದ ಪಟ್ಟಣಶೆಟ್ಟರ ಅಪ್ಪಟ ಶಿಕ್ಷಣ ಪ್ರಿಯರು.ತಜ್ಞರು.ಶೈಕ್ಷಣಿಕ ರಂಗದ ಅಪಾರ ಒಲವು ಮೈಗೊಂಡಿಸಿಕೊಂಡವರು. ಹೀಗಾಗಿ ರಾಜ್ಯದ ನೂರಾರು ಗ್ರಾಮೀಣ ಪ್ರದೇಶಗಳಲ್ಲಿ ಅವರ ಕಳಕಳಿಯ ಫಲವಾಗಿ ಹಾಗೂ ತೋಂಟದ ಲಿಂ, ಡಾ.ಸಿದ್ದಲಿಂಗ ಶ್ರೀ ಹಾಗೂ ಈಗಿನ ಪೀಠಾಧಿಪತಿ ತೋಂಟದ ಡಾ.ಸಿದ್ದರಾಮ ಶ್ರೀಗಳವರ ಕೃಪಾಶೀವಾ೯ದ ಪ್ರೇರಣೆಯಿಂದ ವಿದ್ಯಾ ಮಂದಿರಗಳು ತೆಲೆಯತ್ತಿ ಇಂದು ಜ್ಞಾನ ದಾಸೋಹದ ಸಿಂಚನದ ಪರಿಮಳ ಗೈಯುತ್ತಲ್ಲಿವೆ. ವಿಶ್ರಮಿಸುವ ಮಾತೆ ಇಲ್ಲ…! ಊಟ,ನಿದಿರೆಯ ಪರಿವಿಲ್ಲ. ಕೆಲಸಗಳನ್ನು ನಿಭಾಯಿಸುವರೆಗೆ ವಿಶ್ರಮಿಸುವ ಮಾತೆ ಇಲ್ಲ. ಸದಾ ಕಾಯಕ ತತ್ಪರದಲ್ಲಿ ಮಗ್ನ.ದಣಿವರಿಯದ, ಬಿಡುವಿಲ್ಲದ ಕಾಯಕ ಸೇವಾಭಾವ ನಿಷ್ಠುರತೆಯಿಂದ ಮೇಳೈಸಿಕೊಂಡಿದ್ದಾರೆ ಪ್ರಾ. ಶಿವಾನಂದ ಪಟ್ಟಣಶೆಟ್ಚರ ಅವರು.


ನಿಜ ! ಅವರು ಅಕ್ಷರಶಃ ದಿಟ್ಟ,ದಕ್ಷ ಕಾರ್ಯದರ್ಶಿ, ಆಡಳಿತಾಧಿಕಾರಿ. ಸಹಜತೆಯ ಬದುಕಲ್ಲಿ ನೈಜ ಸಮಾಜಮುಖಿ ಪರವಾದ ಹಲವಾರು ಸ್ವರೂಪದ ಭಿನ್ನ, ವಿಭಿನ್ನ ಕಾಯಕದ ಅನಂದ ಸವಿದು ಸಂತುಷ್ಟಿಭಾವ ಅನುಭವಿಸಿದ್ದಾರೆ.ಅಲ್ಲದೇ ಸಮಾಜಕ್ಕೆ ಧಾರೆಯರೆದಿದ್ದಾರೆ. ಕೈಗೊಂಡ ಕೆಲಸ,ಕಾರ್ಯಗಳನ್ನು ತಮ್ಮ ಆರಾಧ್ಯ ದೇವ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಸ್ಪೂರ್ತಿಯಿಂದ ಪ್ರೇರಿತರಾಗಿ ಪೂಜ್ಯರ ಪ್ರೇರಣೆಯಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಕಾಯಕ ಸಮರ್ಪಣಾ ಮನೋಭಾವ ಅನನ್ಯ. ಸಹಜತೆ ಸಾಂಗತ್ಯ ತಮ್ಮ ದೈನಂದಿನ ಕಾಯಕದ ದಿನಚರಿಯಲ್ಲಿ ಅಚ್ಚಳಿಯಾಗಿ ಮೂಡಿಸಿದ್ದಾರೆ !
65 ರ ವಸಂತದಲ್ಲೂ ಕಾಯಕ ನಿಷ್ಠೆ ಪ್ರಾಂಜಲ್ಯ ಭಾವದಿಂದ ಮೆರೆದಿದ್ದಾರೆ. ಇಂದಿಗೂ ಅವು ಸಹಜ ಮಾರ್ಗದಲ್ಲಿ ಸಾಗುತ್ತಿದೆ. ನಿಜಕ್ಕೂ ಅನುಕರಣೀಯ !
ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಅನುಯಾಯಿಗಳಾಗಿ, ಅತ್ಯಂತ ಸನಿಹದಿಂದ ಆತ್ಮೀಯ ಒಡನಾಡಿಗಳಾಗಿ ಶ್ರೀಮಠದ ಪ್ರಫುಲ್ ಏಳಿಗೆಗಾಗಿ,ಉನ್ನತ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸಿ ಜೀವ ಹಣ್ಣಾಗಿಸಿದ್ದು ಯಾರು ಮರೆಯುವಂತಿಲ್ಲ.


ಪರಿಪಕ್ವ ವಿಚಾರ,ಅದ್ಭುತ ಸ್ಮರಣಶಕ್ತಿ,ಸೂಕ್ಷ್ಮತೆಯ ಆಲೋಚನಾ ಚಿಂತನೆ, ಗ್ರಹಿಕೆಗಳ ದಿವ್ಯ ಸಮ್ಮೋಹದಲ್ಲಿ ಪ್ರಗತಿ,ಅಭಿವೃದ್ಧಿ, ಸಾಧನೆಯ ತೀರುವುಗಳನ್ನು ಯಶಸ್ವಿಯಾಗಿ ನಿಭಾಯಿಸಿ ತೋಂಟದಾರ್ಯ ಸಂಸ್ಥಾನಮಠಕ್ಕೆ ನವದಿಸೆ ತೋರಿದ್ದಾರೆ. ಅವರ ತೇಜಸ್ ದೀಪ್ತಿ ಅನುಭವಜನ್ಯದಿಂದ ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳಗುತ್ತಲಿವೆ. ಬೇರೆಬೇರೆ ಆಯಾಮಗಳಲ್ಲಿ ಸ್ಪರ್ಶನೀಡಿ ಪ್ರಗತಿದತ್ತ ಕೊಂಡೊಯ್ಯುತ್ತಲ್ಲಿದ್ದಾರೆ. ಸರಳ ಸಭ್ಯತೆಯ ಆದರ್ಶಗಳಿಂದ ಪ್ರತಿಪಾದಿಸಿರುವ ನಿಲುವುಗಳು ಮೌಲ್ಯದ ಸಿಂಚನ ಬೀರುತ್ತಲಿವೆ. ಅವರ ಬದುಕು,ಬವಣೆಯ ಬದುಕಿನ ಪುಟಗಳು ಅಪರೂಪ, ಆದರ್ಶನೀಯವಾಗಿವೆ. ಉನ್ನತ ಸ್ಥಾನದಲ್ಲಿದ್ದಾಗ್ಯೂ ಹೊಮ್ಮು ಬಿಮ್ಮು ಸನಿಹದಲಿಲ್ಲ. ಎಂದಿಗೂ ಮಾನ ಸಮ್ಮಾನಕ್ಕಾಗಿ ಅಪೇಕ್ಷೆ ಪಟ್ಟವರಲ್ಲ. ಅದಕ್ಕೆ ಆಸ್ಪದ ಕೊಡುವವರಲ್ಲ. ನಿಲಿ೯ಪ್ತಭಾವ,ತೇಜಸ್ ವಿಚಾರ, ಅವರು ಅನುಸರಿಸುವ ಸೂಕ್ಷ್ಮತೆಯ ಬದುಕಿನ ಮಾರ್ಗ ಕಾಯಕ ಪ್ರೀತಿಪೂರ್ವಕ ಮುಕುಟವಾಗಿವೆ. ಹೀಗಾಗಿ ಎಲ್ಲದರಲ್ಲೂ ಶ್ರೇಷ್ಠ ಚಿಂತನೆಯ ಕಣಗಳು ಕಾಯಕ ತತ್ಪರತೆಯಲ್ಲಿ ಮೆರೆದಿವೆ.ಇದರಿಂದ ಮಾನ,ಸಂಮಾನಗಳ ಗರಿ ಶ್ರೀಮಠಕ್ಕೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸ್ಪಶಿ೯ಸಿವೆ.
ಮನವತೆಯ ತುಡಿತ, ಸಮಷ್ಟಿಭಾವ, ಹಗಲು ರಾತ್ರಿಯನ್ನದೆ ಗೈದ ಅಪೂರ್ವ ಕಾರ್ಯ, ತನುಮನದಿ ತೋಂಟದ ಶ್ರೀಮಠಕ್ಕೆ ಟೊಂಕುಕಟ್ಟಿಕೊಂಡು ಅಪಿ೯ಸಿದ ತಪಸ್ಸಿನ ಫಲ ಲೋಕಾರ್ಥವಾಗಿ ವಿನಿಯೋಗಿಸಿ ಲಿಂ,ಸಿದ್ದಲಿಂಗ ಶ್ರೀಗಳು ಕಂಡ ಕನಸುಗಳನ್ನು ಶಿಕ್ಷಣ ದಾಹಿ ಶಿವಾನಂದ ಪಟ್ಟಣಶೆಟ್ಟರ ಸಾಕಾರಗೊಳಿಸಿ ಧನ್ಯತೆ,ವಿನಮ್ರತೆ ಪದಗಳಿಗೆ ಮತ್ತಿಷ್ಟು ಮೌಲ್ಯಗಂಧ ಲೇಪಿಲಿದ್ದಾರೆ. ಅಮೂಲ್ಯ ಕಾಯಕ ಸೇವೆಯಿಂದ ಸ್ಪೂರ್ತಿಯ ಸೆಲೆಯಾಗಿ,ನೆಲೆಯಾಗಿ ಗದುಗಿನ ಜೆಟಿವಿಪಿಯ ಹಾಗು ಆಲಮಟ್ಟಿ ಎಸ್.ವ್ಹಿ.ವ್ಹಿ.ಸಂಸ್ಥೆಯ ಅಚ್ಚುಮೆಚ್ಚಿನ ಆಡಳಿತಾಧಿಕಾರಿಗಳಾಗಿ. ಕಾರ್ಯದರ್ಶಿಗಳಾಗಿ ಜನಾನುರಾಗಿದ್ದಾರೆ.


ದಯಾಳು,ಪರೋಪಕಾರ ಮನೋಭಾವ, ಚೇತನಪೂರ್ಣ ಮಾರ್ಗದರ್ಶನದ ಸಲಹೆಗಳಿಂದ ಸಂಸ್ಥೆಯ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರ ಬಳಗಕ್ಕೆ ಪ್ರಕಾಶಪುಂಜವಾಗಿ ಆಭಯ ನೀಡಿದ್ದಾರೆ. ಅಂಧಕಾರದ ತಾಮಸದಲ್ಲಿರುವ ಮನಸ್ಸುಗಳಿಗೆ ಸಹಜತೆಯ ಸನಿಹದ ಸಾನಿದ್ಯ ಕಲ್ಪಿಸಿದ್ದಾರೆ. ಅರಿವಿನ ಹಣತೆಯಲ್ಲಿ ಹೃದಯ ಬಾಂದಾಳದ ಬೆಳಕು ಚೆಲ್ಲಿ ನೆಮ್ಮದಿಯ ಭಾವ ಬಿತ್ತಿರುವ ಅಪರೂಪದ ಆಡಳಿತಾಧಿಕಾರಿ,ಕಾರ್ಯದಶಿ೯ಗಳೆಂದು ಬಿಂಬಿತವಾಗಿದ್ದಾರೆ


ಶ್ರೀಮಠದಿಂದ ಸಮಾಜಕ್ಕೆ ವಿನಿಯೋಗವಾಗುವಂಥ ಅನೇಕ ಜನೋಪಯೋಗಿ ಕಾರ್ಯಗಳನ್ನು ಅನುಷ್ಟಾನಗೊಳಿಸುವಲ್ಲಿ ಮುಂಚೂಣಿ ವಿಚಾರ ಅವರದ್ದು.
ಲಿಂ, ಸಿದ್ದಲಿಂಗ ಶ್ರೀಗಳ ಹಾಗು ಡಾ.ಸಿದ್ದರಾಮ ಪೂಜ್ಯರ ವಿಚಾರಧಾರೆಯ ಸಿಂಚನದ ಪರಂಪರೆಯಲ್ಲಿ ಸಾಗಿರುವ ಅವರ ಶ್ರಮ ಫಲಪ್ರದವಾಗಿವೆ.
ತೋಂಟದಾರ್ಯ ಶ್ರೀಮಠಕ್ಕೆ ಮೌಲಿಕವಾದ ಕೊಡುಗೆ ನೀಡಿದ್ದು ಮಠದ ಪರಂಪರೆ ಹಿಂದಿರಿಗಿಸುವಲ್ಲಿ ಅವರು ನಿರ್ವಹಿಸಿರುವ ಪಾತ್ರ ಪ್ರಮುಖ. ಹಲವು ಬಾರಿ ಅಧಿಕಾರಯುತವಾಗಿ ನಡೆಯದೇ ಸಂಪ್ರೀತಿಯಿಂದ ಮನ ಗೆದ್ದಿದ್ದಾರೆ.
ಆಡಳಿತಾಧಿಕಾರಿ ಹುದ್ದೆಗೆ ಹೊಸಭಾಷ್ಯೆಯ ತೋರಣ ಕಟ್ಟಿರುವ ಪಟ್ಟಣಶೆಟ್ಚರ ಗುರುಗಳು ಸುದೀರ್ಘ ಕಾಲ ಪ್ರಾಚಾರ್ಯರಾಗಿ ಲಕ್ಷಾಂತರ ವಿದ್ಯಾರ್ಥಿಗಳ ಸಮೂಹಕ್ಕೆ ಪಾಠ ಪ್ರವಚನ ಗೈದಿದ್ದಾರೆ. ಅವರ ಕೈಯಲ್ಲಿ ವಿದ್ಯಾರ್ಜನೆ ಪೂರೈಸಿರುವ ಅದೆಷ್ಟೋ ವಿದ್ಯಾರ್ಥಿಗಳು ನಾನಾ ಕ್ಷೇತ್ರದಲ್ಲಿಂದು ಸೇವೆ ಸಲ್ಲಿಸುತ್ತಿದ್ದಾರೆ.
ಬಹುಮುಖ ದರ್ಪಣ ವ್ಯಕ್ತಿತ್ವ..! ಡಂಬಳದ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಅಮೋಘ ಸೇವೆ ಸಲ್ಲಿಸಿರುವ ಶಿವಾನಂದ ಪಟ್ಟಣಶೆಟ್ಚರ ಗುರುಗಳು ಪ್ರಾಚಾರ್ಯರ ಹುದ್ದೆಯಿಂದ 31-05-2018 ರಲ್ಲಿ ಸೇವಾ ನಿವೃತ್ತರಾಗಿದ್ದಾರೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಶ್ರೀಮಠದ ಮತ್ತಿಷ್ಟು ಉನ್ನತೀಕರಣಕ್ಕೆ ಅಪಿ೯ತರಾಗಿದ್ದಾರೆ. ಪ್ರಾಂಶುಪಾಲರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಬರಹಗಾರರಾಗಿ,ಲೇಖನರಾಗಿ,ಒಳ್ಳೆ ವಾಗ್ಮಿಗಳಾಗಿ ಹೀಗೆ ಅನನ್ಯ ಬಗೆಬಗೆಯ ವಿರಳಾತಿ ಮುಖದರ್ಪಣ ಶಿವಾನಂದ ಪಟ್ಟಣಶೆಟ್ಚರಲ್ಲಿ ಹೊಂಕರಿಸಿದ್ದನ್ನು ಕಾಣಬಹುದು.‌ ಇಂಥ ಬಹುಮುಖ ಸರಳ ಸಜ್ಜನಿಕೆಯ ಕಾರ್ಯದರ್ಶಿ ಅವರನ್ನು ಪಡೆದಿರುವುದೇ ಸಂಸ್ಥೆಯ ನೌಕರರಿಗೆ ಪುಣ್ಯ ಭಾಗ್ಯ ! ಆ ಹೆಗ್ಗಳಿಕೆ ಸಹಸ್ರಾರು ಮಿಡಿತಗಳಲ್ಲಿ ಸಂಚಲನವನ್ನುಂಟು ಮಾಡುತ್ತಿವೆ.
ಎಲ್ಲರನ್ನೂ ನಗೆ ಸೌಖ್ಯದಿಂದಲೇ ಗ್ರಹಿಸುವ ಗುಣ ಅವರಲ್ಲಿದೆ. ಜೊತೆಗೆ ಡಾಂಭಿಕತನದ ನಡೆ ನುಡಿ ,ಅಪ್ರಾಮಾಣಿಕತೆ ಬಲು ಸೂಚ್ಯದಿಂದ ಎಲ್ಲವನ್ನು ಗಮನಿಸುತ್ತಿರುತ್ತಾರೆ.ಸಮಯ ಬಂದಾಗ ಬುದ್ದಿವಾದ ಹೇಳಿ ಸರದಾರಿಗೆ ಕರೆತರಲು ಪ್ರಯತ್ನಿಸುತ್ತಾರೆ.‌ ನಂಬಿಕೆಗೆ ನಿಷ್ಟುರಾಗಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅವರ ನಡೆನುಡಿ, ಕಾಯಕ ಆದರ್ಶಗಳು ಸ್ಪೂರ್ತಿಯಾಗಿವೆ.
ಬ್ರಹತ್ ಶಾಲಾ ಕ್ಯಾಂಪಸ್ ಕಾಂಪೌಂಡ್ ರೂವಾರಿ…! ಆಲಮಟ್ಟಿ ಎಸ್.ವ್ಹಿ. ವ್ಹಿ. ಸಂಸ್ಥೆಯ ಅಧೀನದಲ್ಲಿ ಒಂದೇ ಕ್ಯಾಂಪಸ್ ದಲ್ಲಿ ಎಲ್.ಕೆ.ಜಿ.ಯಿಂದ ಪದವಿವರೆಗೆ ಶಾಲಾ,ಕಾಲೇಜುಗಳು ನಡೆಯುತ್ತಿವೆ. ಸುಮಾರು ಐವತ್ತು ಎಕರೆ ಜಾಗದಲ್ಲಿ ಚೀನಾ ಗೋಡೆಯಂತೆ ಬ್ರಹತ್ ಕಾಂಪೌಂಡ್ ಗೋಡೆಯ ನಿಮಾ೯ಣಕ್ಕೆ ಪಟ್ಟಣಶೆಟ್ಟರ ಅವರ ಮುತುವಜಿ೯ಯೇ ಕಾರಣ. ಉಭಯ ಶ್ರೀಗಳವರು ತೋರಿದ ಆಸ್ಥೆ ಹಾಗೂ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ಸಹಕಾರದಿಂದ ಇಲ್ಲಿ ಇಡೀ ಕ್ಯಾಂಪಸ್ ಹಸಿರಾಗಿ ಮಿನುಗುತ್ತಿದೆ. ನೂರಾರು ಪ್ರಭೇದಗಳ ಗಿಡ ಮರಗಳು,ಸಸ್ಯಗಳು ಸುಂದರವಾಗಿ ಕಂಗೊಳಿಸುತ್ತಿದೆ. ಹಸಿರು ಲೋಕದಲ್ಲಿನ ಶಾಲಾಂಗಳ ಶಿಕ್ಷಣಾಭಿಮಾನಿಗಳ ಕಣ್ಮನ ತಣಿಸುತ್ತಿವೆ.
ನೆಮ್ಮದಿಯ ನೆಲೆ ಕಲ್ಪಿಸಿರುವ ತೋಂಟದಾರ್ಯ ಸಂಸ್ಥಾನಮಠ ಜಾತ್ಯಾತೀತ ಪದ ಪೋಷಿಸಿಕೊಂಡು ಜನಪರ ಧೋರಣೆ,ಕಾಳಜಿ ತೋರಿದೆ. ಶ್ರೀಮಠದ ಸೆಲೆಯ ತರಂಗ ಪರಿಮಳಗಳ ಸ್ವಾದಿಷ್ಟ ಇನ್ನಷ್ಟು ಪೂಜ್ಯಲಿಂ, ತೋಂಟದ ಸಿದ್ದಲಿಂಗ ಶ್ರೀಗಳ ಹಾಗು ತೋಂಟದ ಡಾ.ಸಿದ್ದರಾಮ ಶ್ರೀಗಳ ಕೃಪಾಶೀವಾ೯ದ ದಿಂದ ಶಿಕ್ಷಣ ಪ್ರೇಮಿಗಳಾಗಿರುವ ಶಿವಾನಂದ ಪಟ್ಟಣಶೆಟ್ಚರ ಗುರುಗಳಿಂದ ಸಾಗಲಿ. ಧಾಮಿ೯ಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ರಂಗಕ್ಕೆ ಇನ್ನಷ್ಟು,ಮತ್ತಿಷ್ಟು ಮೆರಗು ಲಭಿಸಲಿ.
ಆಲಮಟ್ಟಿಯಲ್ಲಿ ಇದೇ ಫೆಬ್ರವರಿ ದಿ,9 ರಂದು ಗುರುವಾರ ನಡೆಯಲಿರುವ ಅವಿಸ್ಮರಣೀಯ ಸಮಾರಂಭದಲ್ಲಿ ಈ ಅಪರೂಪದ ಕಾಯಕ ತತ್ವದ ಆರಾಧಕ,ಅದಮ್ಯ ಚೈತನ್ಯರಾಗಿರುವ ಶಿಕ್ಷಣ ಹಿತಚಿಂತಕ ಪ್ರಾ. ಶಿವಾನಂದ ಪಟ್ಟಣಶೆಟ್ಚರ ಅವರ ಹೆಸರಿನಲ್ಲಿ ಕೃಷ್ಣೆಯ ತಟದಲ್ಲಿ ಮೈದೇಳಿರುವ ಎಸ್.ವ್ಹಿ.ವ್ಹಿ.ಸಂಸ್ಥೆಯ ಶಾಲಾ,ಕಾಲೇಜು ಅಂಗಳದಲ್ಲಿ ನಿಮಾ೯ಣಗೊಂಡಿರುವ ಪ್ರಾ.ಶಿವಾನಂದ ಪಟ್ಟಣಶೆಟ್ಟರ ನೂತನ ಸಭಾ ವೇದಿಕೆ ಉದ್ಘಾಟನೆವಾಗುತ್ತಿರುವುದು ಔಚಿತ್ಯಪೂರ್ಣವಾಗಿದೆ. ಇಲ್ಲಿನ ಗುರು ಬಳಗದವರಲ್ಲಿ ಹಾಗೂ ವಿದ್ಯಾರ್ಥಿಗಳ ಸಮೂಹದಲ್ಲಿ ಮತ್ತು ಶಿಕ್ಷಣ ಹಿತೈಷಿಗಳಲ್ಲಿ ಇದು ಸಂತಸ ಮೂಡಿಸಿದೆ.

Leave a Reply

Your email address will not be published. Required fields are marked *

You May Also Like

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ

ಕೊರೋನಾ ಸೊಂಕು: ಪೊಲೀಸರಲ್ಲೂ ಆತಂಕ ಬೆಂಗಳೂರು : ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೊರೊನಾ ಸೋಂಕು…

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಗದಗ:  ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ…

ವಾರಾಂತ್ಯ ಕಪ್ಯೂ೯ಗೆ ಉತ್ತಮ ಸ್ಪಂದನೆ : ನಿಡಗುಂದಿ ಸ್ತಬ್ಧ- ಆಲಮಟ್ಟಿ ಗಾಡ್೯ನಗಳು ಬೀಕೋ

ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ…